ನವದೆಹಲಿ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ ಐಪಿಎಲ್ (IPL) ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕನ್ನಡಿಗ ಕೆ.ಎಲ್.ರಾಹುಲ್ (K.L.Rahul) ಇತಿಹಾಸ ಬರೆದಿದ್ದಾರೆ. ಪಂದ್ಯವೊಂದರಲ್ಲಿ 150 ರನ್ ಸಿಡಿಸಿದ ಮೊದಲ ಭಾರತೀಯ ಎಂಬ ರೆಕಾರ್ಡ್ ಬರೆದಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026 ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 20 ಓವರ್ಗಳಲ್ಲಿ 2 ವಿಕೆಟ್ಗೆ 264 ಬೃಹತ್ ರನ್ ಗಳಿಸಿತು. ಕೆಎಲ್ ರಾಹುಲ್ ಅಜೇಯ 152 ರನ್ ಗಳಿಸಿದರು. ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್ ಜೊತೆಗೆ ಔಟಾಗದೆ 152 ರನ್ ಚಚ್ಚಿದರು. ಐಪಿಎಲ್ ಇತಿಹಾಸದಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ನಿರ್ಮಿಸಿದರು. ಇದನ್ನೂ ಓದಿ: ಪ್ರಾಕ್ಟೀಸ್ ವೇಳೆ ಚೆಂಡು ಬಡಿದು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಗಂಭೀರ ಗಾಯ – ಆಸ್ಪತ್ರೆಗೆ ರವಾನೆ
ಅಭಿಷೇಕ್ ಶರ್ಮಾ ಈ ಹಿಂದೆ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧವೇ 141 ರನ್ಗಳನ್ನು ಗಳಿಸಿದ್ದರು. ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯಲ್ಲಿ ಕ್ರಿಸ್ ಗೇಲ್ (175 ರನ್) ಮತ್ತು ಬ್ರೆಂಡನ್ ಮೆಕಲಮ್ (158 ರನ್) ಕ್ರಮವಾಗಿ ನಂಬರ್ 1 ಮತ್ತು 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾರನ್ನು ಈಗ ರಾಹುಲ್ ಹಿಂದಿಕ್ಕಿದ್ದಾರೆ.
ಇಂದಿನ ಪಂದ್ಯದಲ್ಲಿ ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿ ಡಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು. ಅವರ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದ್ದವು. ಈ ಜೋಡಿ ಎರಡನೇ ವಿಕೆಟ್ಗೆ 95 ಎಸೆತಗಳಲ್ಲಿ 220 ರನ್ಗಳ ಜೊತೆಯಾಟ ನೀಡಿತು. ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 2 ದಾಖಲೆ ಬರೆದ ಕಿಂಗ್ ಕೊಹ್ಲಿ



