ಬೆಂಗಳೂರು: AI ಹಾವಳಿಯಲ್ಲಿ ನಾಳೆ ಏನಾಗಲಿದೆ ಎಂದು ಹೇಳುವುದೇ ಕಷ್ಟವಾಗಿದೆ. ಹೀಗಾಗಿ ಜೋತಿಷ್ಯಿಗಳ ರೀತಿ ಭವಿಷ್ಯವನ್ನು ಊಹೆ ಮಾಡಬೇಕಿದೆ ಎಂದು ಎಂದು ಪಬ್ಲಿಕ್ ಟಿವಿ (Public Tv) ಮುಖ್ಯಸ್ಥ ಹೆಚ್.ಆರ್ ರಂಗನಾಥ್ (HR Ranganath) ಅವರು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದ (Palace Ground) ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ `ಪಬ್ಲಿಕ್ ಟಿವಿ’ಯ ವಿದ್ಯಾಪೀಠ-2026 ಎಜುಕೇಶನ್ ಎಕ್ಸ್‌ಪೋದಲ್ಲಿ (Vidhya Peeta Education Expo) ಮಾತನಾಡಿದ ಅವರು, ಮೊದಲು ನಾವು ಮಕ್ಕಳನ್ನು ಮುಂದಿನ 10-15 ವರ್ಷಗಳಲ್ಲಿ ಏನಾಗುತ್ತೋ ಅದನ್ನು ಯೋಚಿಸಿ, ಒಳ್ಳೆಯ ಕೋರ್ಸ್ ಹಾಗೂ ಒಳ್ಳೆಯ ಕಾಲೇಜು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳುತ್ತಿದ್ದೆವು. ಆದರೆ ಇದೀಗ ಎಐನಿಂದಾಗಿ ಶಿಕ್ಷಣ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ದುಪ್ಪಟ್ಟಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ ಎಕ್ಸ್‌ಪೋಗೆ ಚಾಲನೆ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಸಂಸ್ಥೆಗಳೊಂದಿಗೆ ಹೆಚ್ಚಿನ ಉತ್ಸಾಹದೊಂದಿಗೆ ವಿದ್ಯಾಪೀಠ ನಡೆಯುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಇಷ್ಟು ಬೇಗ ಸವಾಲುಗಳು ಬದಲಾಗುತ್ತವೆಂದು ನಾನು ಅಂದುಕೊಂಡಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಸಂಬಂಧವೇ ಇಲ್ಲದಂತೆ ಹೊಸ ಸವಾಲುಗಳು ಬಂದಿವೆ ಎಂದರು.
ತಂತ್ರಜ್ಞಾನದ ಪರಿಣಾಮ ನಮ್ಮನ್ನ ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದು ಯಾರಿಗೂ ಅರಿವಿಲ್ಲ. ಈ ವರ್ಷ ಇಲ್ಲಿಗೆ ಬಂದಿರುವ ಮಕ್ಕಳಿಗೆಲ್ಲ ರಿಸರ್ಚ್ ಮಾಡುವ ಅರಿವಿದೆ. ಎಲ್ಲವನ್ನೂ ಯೋಚನೆ ಮಾಡಿಯೇ ಆಯ್ಕೆ ಮಾಡಬೇಡಿ ಅಥವಾ ಯಾರೋ ಹೇಳಿದರೂ ಅಂತ ಯಾವುದೋ ಕಾಲೇಜಿಗೆ ಹೋಗಬೇಡಿ, ನಿಮಗೆ ಸರಿಯಿದಾ ಅಂತ ನೋಡಿ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇಲ್ಲಿಗೆ ಬಂದಿರುವ ಸಂಸ್ಥೆಗಳಿಗೆ ಹೆಚ್ಚಿನ ಅನುಭವ, ತಾಳ್ಮೆಯಿಂದ, ಉತ್ಸಾಹದಿಂದ ಕಲಿಸುವ ಶಕ್ತಿಯಿದೆ. ಹೀಗಾಗಿ ಅವರೆಲ್ಲ ನಿಮಗೆ ದಾರಿತೋರಿಸುತ್ತಾರೆ ಎಂಬ ನಂಬಿಕೆಯಿದೆ. ಮುಂದೊಂದು ದಿನ ಸಿಕ್ಕಾಗ ನಿಮ್ಮ ವಿದ್ಯಾಪೀಠಕ್ಕೆ ಬಂದು ನಾನು ಇದನ್ನು ಓದಿದೆ ಅಂತ ಹೇಳಿ ಖುಷಿಯಾಗುತ್ತೆ. ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗಾರ್ಡನ್ ಸಿಟಿ ಯೂನಿವರ್ಸಿಟಿ ಚಾನ್ಸಲರ್ ಡಾ. ವಿ ಜಿ ಜೋಸೆಫ್, ಸಿಎಂಆರ್ ಯೂನಿವರ್ಸಿಟಿಯ ಚೇರ್ಮನ್ ಡಾ.ಕೆ ಸಿ ರಾಮಮೂತಿ, ರೇವಾ ಯೂನಿವರ್ಸಿಯ ಡೈರೆಕ್ಟರ್ ಡಾ. ಧನಂಜಯ್ ಮತ್ತು ಕೇಂಬ್ರಿಡ್ಜ್ ಶೈಕ್ಷಣಿಕ ಸಂಸ್ಥೆಯ ಚೇರ್ಮನ್ ಡಾ. ಡಿಕೆ ಮೋಹನ್ ಉಪಸ್ಥಿತರಿದ್ದರು.ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪಬ್ಲಿಕ್ ವಿದ್ಯಾಪೀಠ ದಾರಿದೀಪ – ಇಂದು, ನಾಳೆ ಬನ್ನಿ… ಆಕರ್ಷಕ ಬಹುಮಾನ ಗೆಲ್ಲಿ
ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಶಿಕ್ಷಣ ಮೇಳ ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುವ ಈ ವಿದ್ಯಾಪೀಠ ಕಾರ್ಯಕ್ರಮದಲ್ಲಿ ಪ್ರಖ್ಯಾತ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಪಿಯುಸಿ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಸೂಕ್ತ ವೇದಿಕೆಯಾಗಿದೆ.
ಶಿಕ್ಷಣ ತಜ್ಞರು ಮಾತ್ರವಲ್ಲದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಏಇಂ) ಅಧಿಕಾರಿಗಳು ಎಕ್ಸ್ಪೋದಲ್ಲಿ ಭಾಗವಹಿಸುತ್ತಾರೆ. ಅಇಖಿ ಮತ್ತು ಅಔಒಇಆ-ಏ, ಓಇಇಖಿ ಆಕಾಂಕ್ಷಿಗಳಿಗೆ ವಿಶೇಷ ಮಾರ್ಗದರ್ಶನ ಸಿಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಬಂದವರಿಗೆ ಕೇವಲ ಮಾಹಿತಿ ಮಾತ್ರವಲ್ಲ, ಅದೃಷ್ಟ ಖುಲಾಯಿಸುವ ಅವಕಾಶವೂ ಇದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತಿ ಗಂಟೆಗೊಮ್ಮೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು. ಅದೃಷ್ಟವಂತ ವಿಜೇತರಿಗೆ ಬೈಸಿಕಲ್, ಲ್ಯಾಪ್‌ಟಾಪ್ ಸೇರಿದಂತೆ ಮೌಲ್ಯಯುತ ಬಹುಮಾನಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳೇ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಆಯೋಜಿಸಲಾಗಿರುವ ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕೂಡಲೇ ಅರಮನೆ ಮೈದಾನಕ್ಕೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಿ.ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ



