Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಎಂಟಿಸಿ ಎಲ್ಲಾ ಬಸ್‌ಗಳಲ್ಲಿ ಹೊಸ ಇಟಿಎಂ – ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಮಾತ್ರ ಟಿಕೆಟ್ ಜನರೇಟ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಿಎಂಟಿಸಿ ಎಲ್ಲಾ ಬಸ್‌ಗಳಲ್ಲಿ ಹೊಸ ಇಟಿಎಂ – ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಮಾತ್ರ ಟಿಕೆಟ್ ಜನರೇಟ್

Bengaluru City

ಬಿಎಂಟಿಸಿ ಎಲ್ಲಾ ಬಸ್‌ಗಳಲ್ಲಿ ಹೊಸ ಇಟಿಎಂ – ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಮಾತ್ರ ಟಿಕೆಟ್ ಜನರೇಟ್

Public TV
Last updated: April 25, 2026 7:47 am
Public TV
Share
2 Min Read
BMTC ETM Machine
SHARE

ಬೆಂಗಳೂರು: ಬೆಂಗಳೂರಿಗರ (Bengaluru) ನೆಚ್ಚಿನ ಸಾರಿಗೆ ಎಂದರೆ ಅದು ನಮ್ಮ ಬಿಎಂಟಿಸಿ. ಬಿಎಂಟಿಸಿಯಲ್ಲಿ (BMTC) ಈ ಹಿಂದೆ ಕಂಡೆಕ್ಟರ್‌ಗಳ ಯುಪಿಐ ಕಳ್ಳಾಟ ಬಯಲಾಗಿತ್ತು. ಇದೀಗ ಕಳ್ಳಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ (Dynamic QR Code) ಆಧಾರಿತ ಹೊಸ ಇಟಿಎಂ ಮಿಷನ್‌ಗಳನ್ನು (ETM Machine) ಇಲಾಖೆ ಪರಿಚಯಿಸುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಈ ಹೊಸ ಇಟಿಎಂಗಳು ಲಭ್ಯವಾಗಲಿವೆ.

ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಂಡೆಕ್ಟರ್‌ಗಳ ಕರಾಮತ್ತು ಹೆಚ್ಚಾಗಿದೆ. ತಮ್ಮ ಸ್ವಂತ ಯುಪಿಐ ಸ್ಕ್ಯಾನರ್ ನೀಡಿ ಜನರ ಟಿಕೆಟ್ ಹಣ ವಂಚಿಸಿದ್ದು ಬಟಾಬಯಲಾಗಿದೆ. ಇಂತಹ ಫೇಕ್ ಟಿಕೆಟ್ ಮನಿ ಟ್ರಾನ್ಸ್ಫರ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು 11 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ. ಇದನ್ನೂ ಓದಿ:‌ ವಿದ್ಯಾರ್ಥಿಗಳಿಗೆ ಪಬ್ಲಿಕ್ ವಿದ್ಯಾಪೀಠ ದಾರಿದೀಪ – ಇಂದು, ನಾಳೆ ಬನ್ನಿ… ಆಕರ್ಷಕ ಬಹುಮಾನ ಗೆಲ್ಲಿ

ಹೌದು, ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಮುಂಬೈ ಮೂಲದ ಚಲೋ ಅನ್ನೋ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ಕಂಪನಿಯು ಸದ್ಯ 400 ಇಟಿಎಂ ಅಂದರೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್‌ಗಳ ಪೈಲೆಟ್ ಟ್ರಯಲ್ ಅನ್ನು ನಡೆಸಲಾಗುತ್ತಿದೆ. ಯಶವಂತಪುರ ಡಿಪೋ ಸೇರಿದಂತೆ ಹತ್ತು ರೂಟ್‌ಗಳಲ್ಲಿ ಟ್ರಯಲ್ ನಡೆಸುತ್ತಿದೆ. ಟ್ರಯಲ್ ಕಾರ್ಯ ಮುಕ್ತಾಯದ ಹಂತ ತಲುಪಿದ್ದು, ಮೇ 30ರಿಂದ ಬಿಎಂಟಿಸಿಯ ಆರು ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ಇಟಿಎಂಗಳು ಲಭ್ಯವಾಗಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಭೇಟಿಯಾದ ಡಿಕೆಶಿ

ಇಟಿಎಂಗಳು ಬಂದ ನಂತರ ಬಸ್‌ಗಳಲ್ಲಿ ಅಂಟಿಸಿರೋ ಎಲ್ಲಾ ಕ್ಯೂಆರ್ ಕೋಡ್ ತೆಗೆದು ಹಾಕಲಾಗುತ್ತಿದ್ದು, ಈ ಆಂಡ್ರಾಯ್ಡ್ ಸೌಲಭ್ಯದ ಇಟಿಎಂನಲ್ಲಿ ಅಳವಡಿಸಿರುವ ಡೈನಾಮಿಕ್ ಕ್ಯೂಆರ್ ಕೋಡ್ ಸ್ಕ್ಯಾನರ್ ಮಾಡಿದರೆ ಮಾತ್ರ ಟಿಕೆಟ್ ಜನರೇಟ್ ಆಗಲಿದೆಯಂತೆ. ಇದರಿಂದ ಪ್ರಯಾಣಿಕರು ಹಾಗೂ ಕಂಡೆಕ್ಟರ್‌ಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎನ್‌ಸಿಎಂಸಿ ಬಳಸಿ ಹಣ ಪಾವತಿಸುವ ಅವಕಾಶವನ್ನು ನೀಡಲಾಗುತ್ತಿದೆ. ಇದರಿಂದ ಟಿಕೆಟ್ ವೇಗವಾಗಿ ನೀಡಬಹುದಾಗಿದೆ. ಇದನ್ನೂ ಓದಿ: ಕೊಹ್ಲಿ, ಪಡಿಕ್ಕಲ್‌ ಬ್ಯಾಟಿಂಗ್‌ ಅಬ್ಬರ – ಗುಜರಾತ್‌ ವಿರುದ್ಧ ತವರಲ್ಲಿ ಆರ್‌ಸಿಬಿಗೆ 5 ವಿಕೆಟ್‌ಗಳ ಜಯ

ಒಟ್ಟಿನಲ್ಲಿ ಸದ್ಯ ಈ ಹೊಸ ಇಟಿಎಂಗಳ ಟ್ರಯಲ್ ಯಶಸ್ವಿಯಾಗುತ್ತಿದ್ದು, ಸಣ್ಣಪುಟ್ಟ ಲೋಪದೋಷ ಸರಿಪಡಿಸಿಕೊಂಡು ಮುಂದಿನ ತಿಂಗಳಾಂತ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ ಹೊಸ ಸ್ಮಾರ್ಟ್ ಇಟಿಎಂಗಳನ್ನು ಜಾರಿಗೆ ತರಲು ಬಿಎಂಟಿಸಿ ಪ್ಲಾನ್ ಮಾಡಿದೆ.‌ ಇದನ್ನೂ ಓದಿ: ಐಟಿ ಕ್ಷೇತ್ರದಂತೆ ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು: ಸಿದ್ದರಾಮಯ್ಯ

TAGGED:bengaluruBMTCDynamic QR CodeETM Machineticketಇಟಿಎಂಕ್ಯೂಆರ್ ಕೋಡ್ಬಿಎಂಟಿಸಿಬೆಂಗಳೂರು
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

kunal ghosh TMC
Latest

ಬಿಜೆಪಿಗಾಗಿ ರಾಹುಲ್‌ ಗಾಂಧಿ ಕೆಲಸ, ಪಪ್ಪು ಅನ್ನೋದ್ರಲ್ಲಿ ತಪ್ಪಿಲ್ಲ: ಕುನಾಲ್ ಘೋಷ್ ಕಿಡಿ

Public TV
By Public TV
15 minutes ago
kea
Bengaluru City

2026ರ ಸಿಇಟಿ ಪರೀಕ್ಷೆ ಕೀ ಉತ್ತರ ಪ್ರಕಟಿಸಿದ ಕೆಇಎ

Public TV
By Public TV
36 minutes ago
Reading newspapers is now mandatory in all schools in Karnataka Department of Public Education order
Bagalkot

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಇನ್ನು ಕಡ್ಡಾಯ!

Public TV
By Public TV
47 minutes ago
Mangaluru BC Road Woman Gave Birth to Child In Train
Dakshina Kannada

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – ವೈದ್ಯರಿಲ್ಲದೆ ಮಹಿಳೆಯರಿಂದಲೇ ಹೆರಿಗೆ

Public TV
By Public TV
1 hour ago
Hormuz First Nukes Later Iran Offers US a Bold Deal to Reopen Global Oil Route Strait of Hormuz
Latest

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ರೆಡಿ: ಅಮೆರಿಕ ಮುಂದೆ ಹೊಸ ‘ಶಾಂತಿ’ ಸಂಧಾನ

Public TV
By Public TV
1 hour ago
Namma Metro Network Problem
Bengaluru City

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ – ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್‌ಗೆ ಭಾರೀ ಪ್ರಾಬ್ಲಂ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?