Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಲ್ಲಿ ಸಮಾಧಿಗಳೂ ಬಾಡಿಗೆಗೆ ಸಿಗುತ್ತೆ… ರೆಂಟ್‌ ಕೊಡದಿದ್ರೆ ಶವಗಳನ್ನ ಕಿತ್ತೆಸೆಯಲಾಗುತ್ತೆ..!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇಲ್ಲಿ ಸಮಾಧಿಗಳೂ ಬಾಡಿಗೆಗೆ ಸಿಗುತ್ತೆ… ರೆಂಟ್‌ ಕೊಡದಿದ್ರೆ ಶವಗಳನ್ನ ಕಿತ್ತೆಸೆಯಲಾಗುತ್ತೆ..!

Latest

ಇಲ್ಲಿ ಸಮಾಧಿಗಳೂ ಬಾಡಿಗೆಗೆ ಸಿಗುತ್ತೆ… ರೆಂಟ್‌ ಕೊಡದಿದ್ರೆ ಶವಗಳನ್ನ ಕಿತ್ತೆಸೆಯಲಾಗುತ್ತೆ..!

Public TV
Last updated: April 19, 2026 3:24 pm
Public TV
Share
3 Min Read
Rent 2.jpg
SHARE

ವಿಶೇಷವಾಗಿ ಬೆಂಗಳೂರಿನಂತಹ (Benngaluru) ಮಹಾನಗರಗಳಲ್ಲಿ ಇಂದು ಹೆಚ್ಚಿನ ಜನರು ಬಾಡಿಗೆ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷಣಕ್ಕಾಗಿ, ಉದ್ಯೋಗ ಅರಸಿ ನಗರಕ್ಕೆ ಬಂದಿರುವುದರಿಂದ ಅಥವಾ ಸ್ವಂತ ಮನೆ ಖರೀದಿಸಲು ಸಾಧ್ಯವಾಗದ ಕಾರಣ ಹೀಗೆ ಅನೇಕ ಕಾರಣಗಳಿಗಾಗಿ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಬರುವಾಗಲೂ ಏನೂ ಕೊಂಡು ಬರಲ್ಲ, ಹೋಗುವಾಗಲೂ ಕೊಂಡು ಹೋಗಲ್ಲ ಅನ್ನೋ ಬಹುತೇಕರು ಮನೆ ಅಂತ ಒಂದಿದ್ದರೆ ಸಾಕೆಂದು ಬಾಡಿಗೆ ಮನೆಗಳಿಗೆ ತೆರಳುತ್ತಾರೆ. ಆದ್ರೆ ಭೂಮಿಯ ಮೇಲೆ ಒಂದು ಸ್ಥಳವಿದೆ, ಅಲ್ಲಿ ಸಾವಿನ ನಂತರವೂ ಮನೆಗಳನ್ನ ಬಾಡಿಗೆಗೆ ಪಡೆಯಬಹುದಾಗಿದೆ.

ಹೌದು.. ಬದುಕಿರುವಾಗ ಜೀವನಕ್ಕಾಗಿ ಮನೆ ಬಾಡಿಗೆ (Rent House) ಪಡೆಯುವಂತೆ ಈ ಒಂದು ಪ್ರದೇಶದಲ್ಲಿ ಸತ್ತಮೇಲೆ ಅಂದ್ರೆ ಸಮಾಧಿಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಅಷ್ಟಕ್ಕೂ ಈ ವಿಚಿತ್ರ ಸಂಸ್ಕೃತಿ ಇರುವುದು ಎಲ್ಲಿ? ಸಮಾಧಿಗಳನ್ನ ಹೇಗೆ ಬಾಡಿಗೆಗೆ ನೀಡಲಾಗುತ್ತೆ? ಎಷ್ಟು ವರ್ಷಗಳ ವರೆಗೆ ಮೃತದೇಹಗಳನ್ನ ಸಂಗ್ರಹಿಸಬಹುದು? ಎಂಬುದನ್ನು ತಿಳಿಯಬೇಕಿದ್ದರೆ ಮುಂದೆ ಓದಿ…

Bolivia Rented Grave

ಬಾಡಿಗೆ ಸಮಾಧಿ ಎಲ್ಲಿ ಸಿಗುತ್ತೆ?
ವಿಶ್ವದಲ್ಲೇ ಅತಿದೊಡ್ಡ ಬಾಡಿಗೆ ಸ್ಮಶಾನ ಬೊಲಿವಿಯಾದ ಲಾ ಪಾಜ್‌ ಪ್ರದೇಶದಲ್ಲಿದೆ, ಇದರ ಹೆಸರು ಸಿಮೆಂಟಾರಿಯೋ (Cementerio General). ಜನರು ತಮ್ಮ ತಮ್ಮ ಕುಟುಂಬ, ಸಂಬಂಧಿಕರ ಅಂತ್ಯಕ್ರಿಯೆಗಳಿಗಾಗಿ ಮತ್ತು ಅಂತ್ಯಕ್ರಿಯೆ ಬಳಿಕ ಚಿತಾಭಸ್ಮ ಸಂಗ್ರಹಕ್ಕಾಗಿ ಇಲ್ಲಿ ಸಮಾಧಿಗಳನ್ನ ವರ್ಷಾನುಗಟ್ಟಲೇ ಬಾಡಿಗೆಗೆ ಪಡೆಯುತ್ತಾರೆ. ಸಿಮೆಂಟಾರಿಯೋ ಪ್ರತಿ ವರ್ಷ 50,000 ಶವಗಳನ್ನ ನಿರ್ವಹಿಸುತ್ತದೆ.

ಅಂತ್ಯ ಸಂಸ್ಕಾರ ವಿಧಾನ ಹೇಗೆ?
ಸಿಮೆಂಟಾರಿಯೋದಲ್ಲಿ 2 ರೀತಿಯ ಅಂತ್ಯ ಸಂಸ್ಕಾರಗಳಿಗೆ ವ್ಯವಸ್ಥೆ ಮಾಡಲಾಗಿದೆ. ಶವಗಳನ್ನ ಪಾಶ್ಚಿಮಾತ್ಯ ಸಂಸ್ಕೃತಿಯಂತೆ ಹೂಳುವುದು ಅಥವಾ ರಹಸ್ಯ ಸ್ಥಳದಲ್ಲಿ ಪಾರ್ಥೀವ ಶರೀರ ಇಡುವುದಾಗಿರುತ್ತದೆ. ರಹಸ್ಯವಾಗಿ ಇಡಲಾದ ಶವಗಳನ್ನ 10 ವರ್ಷಗಳ ವರೆಗೆ ಇಡಬಹುದಾಗಿದೆ. ಬಳಿಕ ಅದನ್ನ ಹೊರತೆಗೆದು ದಹನ ಮಾಡಲಾಗುತ್ತದೆ. ದಹನದ ಬಳಿಕ ಕುಟುಂಬಸ್ಥರಿಗೆ ಅಥವಾ ಪಾರ್ಥೀವ ಶರೀರದ ವಾರಸುದಾರರಿಗೆ ಚಿತಾಭಸ್ಮ ಮತ್ತು ಮೂಳೆಗಳನ್ನ ನೀಡಲಾಗುತ್ತದೆ.

Bolivia Rented Grave 2

ಈ ಚಿತಾಭಸ್ಮ ಮತ್ತು ಮೂಳೆಗಳನ್ನು ಸಂಗ್ರಹಿಸಲು ಸ್ಮಶಾನದ ಗೋಡೆಗಳಲ್ಲಿ ಸಣ್ಣ ಸಣ್ಣ ಗೂಡುಗಳು ಮತ್ತು ಗಾಜಿನ ಕಮಾನುಗಳನ್ನ ನಿರ್ಮಿಸಿಸಲಾಗಿದೆ. ಇದು ಸುಮಾರು 3-4 ಅಂತಸ್ಥಿನ ಅಪಾರ್ಟ್‌ಮೆಂಟ್‌ಗಳನ್ನೇ ಹೋಲುವಂತಿದ್ದು, ಅವುಗಳನ್ನೂ ಬಾಡಿಗೆಗೆ ಪಡೆಬಹುದಾಗಿದೆ.

ಸತ್ತಮೇಲೂ ನಂಟು!
ಇಲ್ಲಿನ ಸಮಾಧಿಗಳಲ್ಲಿ ಬಹುಕಾಲದ ವರೆಗೆ ಚಿತಾಭಸ್ಮ ಸಂಗ್ರಹ ಮಾಡುವುದರಿಂದ ಅವರು ನಮ್ಮೊಂದಿಗೆ ಬಹುಕಾಲದ ವರೆಗೆ ಇರುತ್ತಾರೆ ಅನ್ನೋದು ಇಲ್ಲಿನ ಜನರ ನಂಬಿಕೆ. ಆದ್ದರಿಂದಲೇ ಚಿತಾಭಸ್ಮ ಸಂಗ್ರಹಿಸಿದ ಆ ಗೂಡುಗಳ ಬಳಿ ಪ್ರತಿದಿನ ಬಂದು ನೀರು, ಆಹಾರ, ಹೂವುಗಳನ್ನಿಟ್ಟು ಕೆಲಕಾಲ ಅಲ್ಲಿ ಕುಳಿತು ಗೊಣಗುತ್ತಿರುತ್ತಾರೆ.

ಲಕ್ಷಾಂತರ ರೂಪಾಯಿ ಬಾಡಿಗೆ
ಬೊಲಿವಿಯಾದರೋ ಅತಿದೊಡ್ಡ ಸ್ಮಶಾನವಾದ ʻಸಿಮೆಂಟಾರಿಯೊʼನಲ್ಲಿ ಸ್ಮಶಾನ ನಿರ್ವಹಣೆಯು ಬಹು ಕೋಟಿ ಡಾಲರ್‌ ವ್ಯವಹಾರವಾಗಿದೆ. ಸುಮಾರು 210 ಎಕರೆ ಪ್ರದೇಶದಲ್ಲಿರುವ ಈ ಸ್ಮಶಾನದಲ್ಲಿ 20 ಲಕ್ಷ ಶವಗಳ ಅವಶೇಷಗಳನ್ನ ಸಮಾಧಿ ಮಾಡಲಾಗಿದೆ. ಪ್ರತಿ ವರ್ಷ 50 ಸಾವಿರ ಶವಗಳನ್ನ ನಿರ್ವಹಣೆ ಮಾಡಿ, ನಂತರ ದಹನ ಮಾಡಲಾಗುತ್ತದೆ.

Bolivia Rented Grave 3

ಜನರು ಇಲ್ಲಿ ಶವಗಳನ್ನ ಹೂಳಲು ಮೊದಲು 5 ವರ್ಷಗಳ ಕಾಲ ಗುತ್ತಿಗೆಗೆ ಪಡೆಯುತ್ತಾರೆ. 5 ವರ್ಷಗಳ ನಂತರ ಪ್ರತಿ ತಿಂಗಳು ಅಥವಾ ವಾರ್ಷಿಕದಂತೆ ಬಾಡಿಗೆ ಪಾವತಿಸಬೇಕಾಗುತ್ತದೆ. ಬಾಡಿಗೆ ಪಾವತಿ ವಿಳಂಬವಾದ್ರೆ ಮೊದಲು ನೋಟಿಸ್‌ ನೀಡಲಾಗುತ್ತೆ. ಅದಾಗಿಯೂ ನಿಗದಿತ ಸಮಯದಲ್ಲಿ ಸಮಾಧಿಯನ್ನ ತೆರವುಗೊಳಿಸದಿದ್ದರೆ, ಹೂತ ಶವಗಳನ್ನ ಕಿತ್ತೆಸೆಯಲಾಗುತ್ತದೆ. ಆದ್ದರಿಂದಲೇ ಇಲ್ಲಿನ ಜನ ಸ್ಮಶಾನದ ಗೋಡೆಗಳಲ್ಲಿರುವ ಕಮಾನು ಅಥವಾ ಗೂಡುಗಳನ್ನ ಬಾಡಿಗೆಗೆ ಪಡೆದು ಚಿತಾಭಸ್ಮ ಮತ್ತು ಮೂಳೆ ಅವಶೇಷಗಳನ್ನ ಸಂಗ್ರಹಿಸುತ್ತಾ ಬರುತ್ತಿದ್ದಾರೆ. ಕೆಲವರು ಪ್ರತಿದಿನ ಬಂದು ಅವುಗಳೊಂದಿಗೆ ಮಾತನಾಡುತ್ತಾ ತಮ್ಮ ನೋವು ಹಂಚಿಕೊಂಡರೆ, ಇನ್ನೂ ಕೆಲವರು ವರ್ಷಕ್ಕೊಮ್ಮೆ ಬಂದು ಗೌರವ ಸಲ್ಲಿಸುತ್ತಾರೆ.

TAGGED:BoliviaCementerio GeneralRented Graveಬಾಡಿಗೆ ಸಮಾಧಿಬೊಲಿವಿಯಾಸಮಾಧಿ
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್‌ ಗೆಲ್ಲಿ

Public TV
By Public TV
23 minutes ago
Weather
Bengaluru City

ಬೆಂಗಳೂರು ಸೇರಿ ರಾಜ್ಯಾದ್ಯಂತ ಇನ್ನೊಂದು ವಾರ ಹೆಚ್ಚಾಗಲಿದೆ ಬಿಸಿಲು

Public TV
By Public TV
29 minutes ago
Bengaluru B.Tech Student Missing
Bengaluru City

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ

Public TV
By Public TV
1 hour ago
COURT
Bengaluru City

ಬೆಂಗಳೂರಿನಲ್ಲಿ ಜೀವಂತ ಗ್ರೆನೇಡ್ ಪತ್ತೆ ಕೇಸ್‌ – ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ

Public TV
By Public TV
2 hours ago
Dandeli Car Accident
Crime

ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

Public TV
By Public TV
2 hours ago
suresh kumar help
Bengaluru City

ಮಗಳ ಚಿಕಿತ್ಸಾ ವೆಚ್ಚ ಭರಿಸಲಾಗದೇ ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ – ನೊಂದ ಕುಟುಂಬಕ್ಕೆ ಶಾಸಕ ಸುರೇಶ್ ಕುಮಾರ್ ನೆರವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?