ಲಕ್ನೋ: ನಾಯಕ ಶುಭಮನ್ ಗಿಲ್ (Shubman Gill) ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್(Ishan Kishan) ಅವರ ಸ್ಫೋಟಕ ಶತಕಗಳ ನೆರವಿನಿಂದ ಭಾರತ ತಂಡ (Team India) ಪ್ರವಾಸಿ ಅಫ್ಘಾನಿಸ್ತಾನ(Afghanistan) ವಿರುದ್ಧದ ಏಕದಿನ ಪಂದ್ಯದಲ್ಲಿ 170 ರನ್‌ಗಳ ಬೃಹತ್ ಜಯ ದಾಖಲಿಸಿದೆ.
ಈ ಅಮೋಘ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿರುವ ಭಾರತ, ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದು ನಾಯಕರಾಗಿ ಶುಭಮನ್ ಗಿಲ್ ಅವರಿಗೆ ಸಿಕ್ಕ ಮೊದಲ ಏಕದಿನ ಸರಣಿ ಜಯ ಎಂಬುದು ವಿಶೇಷ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಭಾರತ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 402 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ, ಭಾರತೀಯ ಯುವ ಬೌಲರ್‌ಗಳ ನಿಖರ ಹಾಗೂ ತೀಕ್ಷ್ಣ ದಾಳಿಗೆ ತತ್ತರಿಸಿತು. ಅಂತಿಮವಾಗಿ ಅಫ್ಘಾನ್ ಪಡೆ 44.3 ಓವರ್‌ಗಳಲ್ಲಿ 232 ರನ್‌ಗಳಿಗೆ ಸರ್ವಪತನ ಕಂಡಿತು.
A clinical performance to seal the series! 🙌#TeamIndia register a massive 170-run victory in the 2nd ODI to take an unassailable 2-0 lead 👏
Updates ▶️ https://t.co/JYJ5l44iJ6#INDvAFG | @IDFCFIRSTBank pic.twitter.com/vqLlFxbQyj
— BCCI (@BCCI) June 17, 2026
ಅಫ್ಘಾನ್ ಪರ ಮಧ್ಯಮ ಕ್ರಮಾಂಕದಲ್ಲಿ ರಹಮತ್ ಶಾ 79 ರನ್ (89 ಎಸೆತ, 8 ಬೌಂಡರಿ) ಗಳಿಸಿ ಭಾರತೀಯ ಬೌಲರ್‌ಗಳಿಗೆ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.
ರತದ ಪರ ಮಾರಕ ದಾಳಿ ನಡೆಸಿದ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಗುರನೂರ್ ಬರಾರ್ ತಲಾ 3 ವಿಕೆಟ್ ಕಿತ್ತು ಎದುರಾಳಿಗಳನ್ನು ಕಟ್ಟಿಹಾಕಿದರು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಬೌಲರ್ ಪ್ರಿನ್ಸ್ ಯಾದವ್ 2 ವಿಕೆಟ್ ಪಡೆದು ಗಮನ ಸೆಳೆದರು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 48 ರನ್ (39 ಎಸೆತ, 6 ಬೌಂಡರಿ, 2 ಸಿಕ್ಸ್) ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ನಾಯಕ ಶುಭಮನ್ ಗಿಲ್ ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 110 ಎಸೆತಗಳನ್ನು ಎದುರಿಸಿದ ಅವರು 22 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 154 ರನ್ ಚಚ್ಚಿದರು. ಈ ಇನಿಂಗ್ಸ್ ವೇಳೆ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000 ರನ್ ಪೂರೈಸಿದ ಮೈಲಿಗಲ್ಲು ತಲುಪಿದರು.
𝙂𝙞𝙡𝙡𝙤𝙧𝙞𝙤𝙪𝙨 𝙎𝙩𝙧𝙤𝙠𝙚𝙨 🤩
Lucknow was delighted by Shubman Gill’s marathon knock 🍿
Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ShubmanGill pic.twitter.com/wsE6ND6zBD
— BCCI (@BCCI) June 17, 2026
ಗಿಲ್ ಅವರಿಗೆ ಅಮೋಘ ಸಾಥ್ ನೀಡಿದ ಇಶಾನ್ ಕಿಶನ್, ಅಫ್ಘಾನ್ ದಾಳಿಯನ್ನು ಧೂಳೀಪಟ ಮಾಡಿದರು. ಕೇವಲ 79 ಎಸೆತ ಎದುರಿಸಿದ ಕಿಶನ್ 14 ಬೌಂಡರಿ ಹಾಗೂ 7 ಆಕರ್ಷಕ ಸಿಕ್ಸರ್‌ಗಳೊಂದಿಗೆ 125 ರನ್ ಸಿಡಿಸಿದರು.
ಮೂರನೇ ವಿಕೆಟ್‌ಗೆ ಜೊತೆಯಾದ ಗಿಲ್ ಮತ್ತು ಕಿಶನ್ ಜೋಡಿ ಕೇವಲ 141 ಎಸೆತಗಳಲ್ಲಿ ಭರ್ಜರಿ 224 ರನ್‌ಗಳ ಜೊತೆಯಾಟ ಪ್ರದರ್ಶಿಸಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿತು. ಅಫ್ಘಾನಿಸ್ತಾನ ಪರ ನಂಗೆಯಾಲಿಯಾ ಖರೋಟೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
