ನವದೆಹಲಿ: ಮೆಟಾ (Meta) ಸಂಸ್ಥೆಯು ಭಾರತದಲ್ಲಿ ವಾಟ್ಸಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಆಪ್‌ಗಳಿಗಾಗಿ ಹೊಸ ಪ್ಲಸ್ (Plus) ಪ್ರೀಮಿಯಂ ಚಂದಾದಾರಿಕೆ (Subscription) ಯೋಜನೆಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ, ಕಸ್ಟಮೈಸೇಶನ್ ಮತ್ತು ವಿಶೇಷ ಫೀಚರ್‌ಗಳನ್ನು ನೀಡಲು ಈ ಪ್ಲಾನ್‌ಗಳನ್ನು ತರಲಾಗಿದೆ.
ನಿಮ್ಮ ಫೋನ್‌ನಲ್ಲಿ ಈ ಆಯ್ಕೆಗಳು ಕಾಣಿಸಬೇಕಾದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ನಿಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಬೆಲೆ ಎಷ್ಟು?
ಪ್ರತಿ ಆಪ್‌ಗೂ ಪ್ರತ್ಯೇಕವಾಗಿ ತಿಂಗಳ ಚಂದಾದಾರಿಕೆ ಪಾವತಿಸಬೇಕಾಗುತ್ತದೆ:
ವಾಟ್ಸಪ್ ಪ್ಲಸ್ (WhatsApp Plus): ತಿಂಗಳಿಗೆ 79 ರೂ. (1 ತಿಂಗಳ ಉಚಿತ ಟ್ರಯಲ್ ಇದೆ; ಸದ್ಯಕ್ಕೆ ಐಫೋನ್ (iOS) ಬಳಕೆದಾರರಿಗೆ ಮೊದಲು ಸಿಗುತ್ತಿದೆ)
ಇನ್‌ಸ್ಟಾಗ್ರಾಮ್ ಪ್ಲಸ್ (Instagram Plus): ತಿಂಗಳಿಗೆ 99 ರೂ.(ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯ)
ಫೇಸ್‌ಬುಕ್ ಪ್ಲಸ್ (Facebook Plus): ತಿಂಗಳಿಗೆ 99 ರೂ. (ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯ)
ಯಾವ ಪ್ಲಾನ್‌ನಲ್ಲಿ ಏನು ಫೀಚರ್?
ವಾಟ್ಸಪ್ ಪ್ಲಸ್ (WhatsApp Plus)
ಇದು ಚಾಟ್‌ಗಳನ್ನು ಸುಲಭವಾಗಿ ಮ್ಯಾನೇಜ್ ಮಾಡಲು ಮತ್ತು ಆಪ್ ಡಿಸೈನ್ ಬದಲಾಯಿಸಲು ಸಹಾಯ ಮಾಡುತ್ತದೆ
ಹೆಚ್ಚಿನ ಚಾಟ್ ಪಿನ್ ಮಾಡಿ: ಸಾಮಾನ್ಯ ವಾಟ್ಸಪ್‌ನಲ್ಲಿ ಕೇವಲ 3 ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಇದರಲ್ಲಿ 20 ಚಾಟ್‌ಗಳವರೆಗೆ ಪಿನ್ ಮಾಡಿ ಇಡಬಹುದು.
ಡಿಸೈನ್ ಬದಲಾವಣೆ: ಆಪ್‌ಗಾಗಿ 18 ಹೊಸ ಆಕ್ಸೆಂಟ್ ಕಲರ್ಸ್ ಮತ್ತು 14 ವಿಭಿನ್ನ ಆಪ್ ಐಕಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವಿಶೇಷ ಸ್ಟಿಕ್ಕರ್‌ಗಳು: ಪ್ರೀಮಿಯಂ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳು ಸಿಗಲಿವೆ (ಇದನ್ನು ನೀವು ಕಳುಹಿಸಿದಾಗ ಸಾಮಾನ್ಯ ಬಳಕೆದಾರರಿಗೂ ಕಾಣಿಸುತ್ತದೆ).
ಕಸ್ಟಮ್ ಟೋನ್‌ಗಳು: ಪ್ರತ್ಯೇಕ ಕಾಂಟ್ಯಾಕ್ಟ್‌ಗಳಿಗೆ ಬೇರೆ ಬೇರೆ ರಿಂಗ್‌ಟೋನ್ ಮತ್ತು ನೋಟಿಫಿಕೇಶನ್ ಸೌಂಡ್‌ಗಳನ್ನು ಸೆಟ್ ಮಾಡಬಹುದು.
ಬಲ್ಕ್ ಮ್ಯಾನೇಜ್‌ಮೆಂಟ್: ಒಂದಕ್ಕಿಂತ ಹೆಚ್ಚು ಚಾಟ್‌ಗಳನ್ನು ಒಟ್ಟಿಗೆ ಆಯ್ಕೆ ಮಾಡಿ ಅವುಗಳ ನೋಟಿಫಿಕೇಶನ್ ಸೆಟ್ಟಿಂಗ್ಸ್ ಬದಲಾಯಿಸಬಹುದು.

ಇನ್‌ಸ್ಟಾಗ್ರಾಮ್ ಪ್ಲಸ್(Instagram Plus)
ಇದು ಮುಖ್ಯವಾಗಿ ಸ್ಟೋರಿ (Story) ಮತ್ತು ಪ್ರೊಫೈಲ್ ಅನ್ನು ಇನ್ನಷ್ಟು ಆಕರ್ಷಕವಾಗಿಸಲು ನೆರವಾಗುತ್ತದೆ
ಅನಾಮಧೇಯವಾಗಿ ಸ್ಟೋರಿ ನೋಡುವುದು : ನೀವು ಬೇರೆಯವರ ಸ್ಟೋರಿ ನೋಡಿದರೂ, ಅವರ Viewer List ನಲ್ಲಿ ನಿಮ್ಮ ಹೆಸರು ಕಾಣಿಸುವುದಿಲ್ಲ.
48 ಗಂಟೆಗಳ ಸ್ಟೋರಿ: ಸಾಮಾನ್ಯ ಸ್ಟೋರಿಗಳು 24 ಗಂಟೆಗಳಲ್ಲಿ ಮಾಯವಾಗುತ್ತವೆ, ಆದರೆ ಪ್ರೀಮಿಯಂ ಬಳಕೆದಾರರ ಸ್ಟೋರಿಗಳು 48 ಗಂಟೆಗಳ ಕಾಲ ಇರುತ್ತವೆ.
ಸ್ಟೋರಿ ರಿವಾಚ್ ಕೌಂಟ್: ನಿಮ್ಮ ಸ್ಟೋರಿಯನ್ನು ಯಾರು ಎಷ್ಟು ಬಾರಿ ಮತ್ತೆ ಮತ್ತೆ ನೋಡಿದ್ದಾರೆ ಎಂದು ತಿಳಿಯಬಹುದು ಮತ್ತು ವ್ಯೂವರ್ ಲಿಸ್ಟ್‌ನಲ್ಲಿ ನಿರ್ದಿಷ್ಟ ಹೆಸರನ್ನು ಸರ್ಚ್ ಮಾಡಬಹುದು.
ಸ್ಟೀಲ್ತ್ ಪೋಸ್ಟಿಂಗ್: ನಿಮ್ಮ ಹೊಸ ಪೋಸ್ಟ್ ಅಥವಾ ರೀಲ್ಸ್ ಫಾಲೋವರ್ಸ್‌ಗಳ ಮೇನ್ ಫೀಡ್‌ಗೆ ಹೋಗದಂತೆ ನೇರವಾಗಿ ಪ್ರೊಫೈಲ್ ಗ್ರಿಡ್‌ಗೆ ಮಾತ್ರ ಸೇರಿಸಬಹುದು.
ಪ್ರೊಫೈಲ್ ಅಪ್‌ಗ್ರೇಡ್: ಪ್ರೊಫೈಲ್‌ನಲ್ಲಿ 3 ಕ್ಕಿಂತ ಹೆಚ್ಚು (6 ರವರೆಗೆ) ಪೋಸ್ಟ್‌ಗಳನ್ನು ಪಿನ್ ಮಾಡಬಹುದು, ಬಯೋದಲ್ಲಿ ವಿಭಿನ್ನ ಫಾಂಟ್‌ಗಳನ್ನು ಬಳಸಬಹುದು ಮತ್ತು “ಸೂಪರ್ ಹಾರ್ಟ್” ರಿಯಾಕ್ಷನ್ ಕಳುಹಿಸಬಹುದು. ಇದನ್ನೂ ಓದಿ: NEET Paper Leak| ಟೆಲಿಗ್ರಾಮ್ ಮೇಲೆ ಕ್ರಮ – ವಾಟ್ಸಪ್ ಮೇಲೆ ನಿಷೇಧ ಯಾಕಿಲ್ಲ?
ಫೇಸ್‌ಬುಕ್ ಪ್ಲಸ್ (Facebook Plus)
ಇದು ಇನ್‌ಸ್ಟಾಗ್ರಾಮ್‌ನಂತಹ ಸ್ಟೋರಿ ಫೀಚರ್‌ಗಳ ಜೊತೆಗೆ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಸೌಲಭ್ಯ ನೀಡುತ್ತದೆ
ಅಪ್‌ಗ್ರೇಡ್ ಸ್ಟೋರಿಗಳು: 48 ಗಂಟೆಗಳ ಸ್ಟೋರಿ ಲೈಫ್‌ಟೈಮ್, ಅನಾಮಧೇಯವಾಗಿ ಸ್ಟೋರಿ ನೋಡುವುದು ಮತ್ತು ಯಾರು ಎಷ್ಟು ಬಾರಿ ನೋಡಿದ್ದಾರೆ ಎಂಬ ಕೌಂಟ್ ಸಿಗಲಿದೆ.
ಲುಕ್ ಅಂಡ್ ಫೀಲ್: ಫೇಸ್‌ಬುಕ್ ಮತ್ತು ಮೆಸೆಂಜರ್ ಆಪ್‌ಗಳಿಗೆ ಕಸ್ಟಮ್ ಐಕಾನ್‌ಗಳು, ಬಯೋಗೆ ಹೊಸ ಫಾಂಟ್‌ಗಳು ಮತ್ತು ಪ್ರೊಫೈಲ್ ಪಿನ್ನಿಂಗ್ ಸೌಲಭ್ಯ.
ಕ್ರಿಯೇಟರ್ಸ್ ಮತ್ತು ಪೇಜ್ ಟೂಲ್ಸ್: ಪೇಜ್ ಅಡ್ಮಿನ್‌ಗಳಿಗಾಗಿ ಸುಧಾರಿತ ಆಡಿಯನ್ಸ್ ಇನ್‌ಸೈಟ್ಸ್ (Audience Insights), ಕಂಟೆಂಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಮಾಡರೇಶನ್ ಸಪೋರ್ಟ್ ಸಿಗಲಿದೆ.
