ಪ್ಯಾರಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅತ್ಯಂತ ಶಾಂತ, ಸಂಯಮಶೀಲ ಮತ್ತು ಒಬ್ಬ ಪಕ್ಕಾ ಕಿಲ್ಲರ್ (Total Killer) ಎಂದು ಹೊಗಳಿದ್ದಾರೆ.
ಫ್ರಾನ್ಸ್‌ನಲ್ಲಿ ಎವಿಯನ್-ಲೆ-ಬೈನ್ಸ್ ನಡೆಯುತ್ತಿರುವ ಜಿ7 (G7) ಶೃಂಗಸಭೆಯ ವೇಳೆ ದ್ವಿಪಕ್ಷಕೀಯ ಮಾತುಕತೆ ನಡೆದ ಬಳಿಕ ಟ್ರಂಪ್ ಮಾಧ್ಯಮಗಳ ಜೊತೆ ಮಾತನಾಡಿದರು.
#WATCH | Evian, France: Speaking about PM Modi, the Russia-Ukraine war, US President Donald Trump says, “…He’s a very tough negotiator… You look at this man. I’ll give you a lesson. He’s the most beautiful-looking man. He looks so nice, like an angel. But actually, he’s as… pic.twitter.com/KoggIcAUa4
— ANI (@ANI) June 17, 2026
ನನ್ನ ಸ್ವಭಾವ ಎಲ್ಲರಿಗೂ ಗೊತ್ತಿದೆ. ಆದರೆ ಮೋದಿ ಅವರು ಹೊರಗಿನಿಂದ ನೋಡಲು ತುಂಬಾ ಶಾಂತವಾಗಿ ಮತ್ತು ಕೂಲ್ ಆಗಿ ಕಾಣುತ್ತಾರೆ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಅವರು ಪಕ್ಕಾ ಕಿಲ್ಲರ್ ಎಂದು ತಮಾಷೆ ಮಾಡಿದ್ದಾರೆ.
ನಾನು ಅಧ್ಯಕ್ಷನಾಗಿರುವವರೆಗೆ ಅವರಿಗೆ (ಭಾರತ) ಶ್ವೇತಭವನದಲ್ಲಿ ಉತ್ತಮ ಸ್ನೇಹಿತನಿದ್ದಾನೆ.ಇಲ್ಲಿರುವ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಮೋದಿ ಅವರ ಬಗ್ಗೆಯೂ ಅವರಿಗೆ ಅಪಾರ ಗೌರವವಿದೆ ಎಂದು ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಎಂದಿಗೂ ಇಷ್ಟು ಗಟ್ಟಿಯಾಗಿರಲಿಲ್ಲ. ವೈಯಕ್ತಿಕವಾಗಿ ಮತ್ತು ದೇಶಗಳ ನಡುವೆ ಅತ್ಯಂತ ಆಪ್ತ ಒಡನಾಟವಿದೆ. ಭಾರತದ ಮೇಲೆ ಯಾವುದೇ ದಾಳಿ ನಡೆದರೂ ಅಮೆರಿಕ ಬೆಂಬಲವಾಗಿ ನಿಲ್ಲುತ್ತದೆ ಮತ್ತು ಸಹಾಯ ಮಾಡುತ್ತದೆ ಎಂದು ಟ್ರಂಪ್ ಭರವಸೆ ನೀಡಿದರು.
