ಐಪಿಎಲ್‌ನಲ್ಲಿ (IPL 2026) ರಾಜಸ್ಥಾನ್ ರಾಯಲ್ಸ್ ಪರ ಕಮಾಲ್ ಮಾಡಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಕೇವಲ 15ನೇ ವಯಸ್ಸಿಗೆ ಟೀಂ ಇಂಡಿಯಾ ಸೇರುವ ಸಾಧ್ಯತೆಯಿದ್ದು, ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ. ಆ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ತಂಡದ ಬೆಂಚ್ ಬಲವನ್ನು ಪರೀಕ್ಷಿಸಲು ಉತ್ಸುಕವಾಗಿದ್ದು, ಎರಡನೇ ಹಂತದ ತಂಡದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆಯಿದೆ. ‘ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ. ಆಯ್ಕೆದಾರರು ಇತರ ಅನೇಕ ಆಟಗಾರರ ಜೊತೆಗೆ ಸೂರ್ಯವಂಶಿ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ’ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮೂಲವೊಂದು ತಿಳಿಸಿದೆ. ಇದನ್ನೂ ಓದಿ: Women’s T20 WC 2026 | ಈವರೆಗಿನ ಗರಿಷ್ಠ 81.8 ಕೋಟಿ ಬಹುಮಾನ ಮೊತ್ತ ಘೋಷಿಸಿದ ICC
ವೈಭವ್ ಅವರನ್ನು ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿಗೆ ಹಾಗೂ ಈ ವರ್ಷದ ಕೊನೆಯಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಟಿ20 ಸರಣಿಗೂ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಐಪಿಎಲ್ 2026 ರ ಋತುವನ್ನು ರಾಜಸ್ಥಾನ ರಾಯಲ್ಸ್ ಪರ ಅಬ್ಬರದಿಂದ ಆರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಎಸೆತಗಳಲ್ಲಿ 78, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 52 ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ 39 ರನ್ ಗಳಿಸಿದರು. ಇದು ಮಾಜಿ ಕ್ರಿಕೆಟಿಗರು ಮತ್ತು ತಜ್ಞರನ್ನು ಹಿರಿಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಪ್ರೇರೇಪಿಸಿತು.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಕೂಡ ವೈಭವ್ ಭಾರತದ ಅತ್ಯಂತ ಕಿರಿಯ ಚೊಚ್ಚಲ ಆಟಗಾರ ಎಂಬ ದಾಖಲೆಗೆ ಅರ್ಹರು ಎಂದು ಬಣ್ಣಿಸಿದ್ದಾರೆ. ಇದು ಸಚಿನ್ ತೆಂಡೂಲ್ಕರ್ ಮತ್ತು ಶಫಾಲಿ ವರ್ಮಾ ಅವರ ದಾಖಲೆಗಳನ್ನು ಮೀರಿಸಿದೆ. ಇದನ್ನೂ ಓದಿ: ಹಿಂಗೆ ಬೆಂಕಿ ಬೌಲಿಂಗ್‌ಗೆ ರಾಯಲ್ಸ್ ಬರ್ನ್ – ಹೈದ್ರಾಬಾದ್‌ನಲ್ಲಿ ಸನ್ ಶೈನಿಂಗ್
ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿಗೆ (16 ವರ್ಷ 205 ದಿನ) ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಉಳಿಸಿಕೊಂಡಿದ್ದಾರೆ. ಶಫಾಲಿ ವರ್ಮಾ ಕೂಡ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಇವರು ತಮ್ಮ 15ನೇ ವಯಸ್ಸಿಗೆ (15 ವರ್ಷ 7 ತಿಂಗಳು 27 ದಿನ) ಭಾರತೀಯ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

