ಕನ್ನಡವೂ (Kannada) ಸೇರಿದಂತೆ ಸಾಕಷ್ಟು ಸಿನಿಮಾ ಹಾಡುಗಳನ್ನು ಹಾಡಿರುವ ಬಾಲಿವುಡ್ ಗಾಯಕ ಸೋನು ನಿಗಂ(Sonu Nigam) ಇದೀಗ ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಕುರಿತಂತೆ ಅವರೇ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ನೆಚ್ಚಿನ ಗಾಯಕನಿಗೆ ಅದೇನಾಗುತ್ತೋ ಅನ್ನುವ ಆತಂಕ ಹೆಚ್ಚಾಗಿದೆ.
ಸೋನು ನಿಗಂ ಅವರೇ ಹಂಚಿಕೊಂಡಂತೆ ಅವರು ದೇಹದ ನರಗಳು ಬ್ಲಾಕ್ ಆಗಿವೆಯಂತೆ. ಹಾಗಾಗಿ ನಿರಂತರ ತಪಾಸಣೆಗೆ ಒಳಗಾಗಿದ್ದಾರೆ. ಹೈಡೋಸ್ ಔಷಧಿಗಳು ಮತ್ತು ಫಿಸಿಯೋಥೆರಪಿಯಿಂದಾಗಿ ಸೋನು ಬಳಲಿ ಹೋಗಿದ್ದಾರಂತೆ. ನೋವು ನಿವಾರಕ ಮಾತ್ರೆಗಳನ್ನು ಸೇವಿಸುವ ಮೂಲಕ ನೋವನ್ನು ತಡೆಹಿಡಿಯುತ್ತಿದ್ದಾರಂತೆ.
View this post on Instagram
ಔಷಧಿಗಳ ಕಾರಣದಿಂದಾಗಿ ಅವರ ಧ್ವನಿ ಮೇಲೆ ಪರಿಣಾಮ ಬೀರಿದ್ದು, ಧ್ವನಿ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆಯಂತೆ. ಹಾಗಂತ ಒಪ್ಪಿಕೊಂಡಿರುವ ಕಾರ್ಯಕ್ರಮವನ್ನು ತಪ್ಪಿಸಲಾರೆ ಅಂತಾನೂ ಸೋನು ನಿಗಂ ಹೇಳಿದ್ದಾರೆ. ಅದೆಂಥ ನೋವಿದ್ದರೂ ಕಾರ್ಯಕ್ರಮದಲ್ಲಿ ಭಾಗಿ ಆಗಿ ಹಾಡೋದಾಗಿ ಅವರು ಹೇಳಿಕೊಂಡಿದ್ದಾರೆ.
ಸೋನು ನಿಗಂ ಹಂಚಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅನೇಕರು ಸಲಹೆ ನೀಡಿದ್ದಾರೆ. ಲೈವ್ ಕಾರ್ಯಕ್ರಮದಲ್ಲಿ ಭಾಗಿ ಆಗೋದು ಬೇಡ ಅಂತ ಕಾಮೆಂಟ್ ಮಾಡಿದ್ದಾರೆ. ಸೋನು ನಿಗಂ ಹಂಚಿಕೊಂಡಿರುವ ಆತಂಕದ ಮಾತುಗಳು ಸಹಜವಾಗಿಯೇ ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿವೆ. ಹಾಗಾಗಿ ಬಹುತೇಕರು ಕಾಮೆಂಟ್ ಮಾಡಿ, ಆರೋಗ್ಯ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
