ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ (Womens quota Bill) ಜಾರಿಗೆ ಪ್ರಧಾನಿ ಮೋದಿ ಸರ್ಕಾರ ಮುಂದಾಗಿದ್ದು ಈ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ (All Party Meet) ಕರೆದಿದ್ದಾರೆ.
ಗುರುವಾರದ ಸಂಸತ್ ಅಧಿವೇಶನಕ್ಕೆ ಮುನ್ನ ಎಲ್ಲಾ ಪಕ್ಷಗಳಿಗೆ ಪತ್ರ ಬರೆದು, ಮಹಿಳೆಯರಿಗೆ ಶೇ.33 ಮೀಸಲಾತಿ ಜಾರಿಗೆ ಕಾನೂನು ಅಂಗೀಕರಿಸಲು ಬೆಂಬಲ ಕೋರಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ದೀರ್ಘಕಾಲದ ಆಸೆಯನ್ನು ಈಗ ವಾಸ್ತವವಾಗಿಸುವ ಸರಿಯಾದ ಸಮಯ ಇದಾಗಿದೆ ಎಂದು ಮೋದಿ (PM Modi) ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನ ತಿದ್ದುಪಡಿ ಅಂಗೀಕರಿಸಲು ಎಲ್ಲರೂ ಒಂದೇ ಧ್ವನಿಯಲ್ಲಿ ಒಗ್ಗೂಡಬೇಕು ಎಂದು ಒತ್ತಾಯಿಸಿದ್ದಾರೆ. ಇದು ಮಹಿಳೆಯರು ಮತ್ತು ಭವಿಷ್ಯದ ಪೀಳಿಗೆಯ ಮೇಲಿನ ಜವಾಬ್ದಾರಿಯನ್ನ ತೋರಿಸುವ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನ ಗುರುವಾರ ಮರು ಆರಂಭವಾಗಲಿದ್ದು, ಕ್ಷೇತ್ರ ಮರುಹಂಚಿಕೆ ನಂತರ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಅಂಗೀಕರಿಸಲು ಸಭೆ ನಡೆಯಲಿದೆ. ಇನ್ನು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ರಾಜ್ಯ ನಾಯಕರು ಸ್ವಾಗತಿಸಿದ್ದಾರೆ.
ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ
ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಮೋದಿ ಸರ್ಕಾರ ಮಹಿಳೆಯರನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ಬದಲು ರಾಜಕೀಯ ಲಾಭ ಪಡೆಯುವುದಕ್ಕೆ ಮುಂದಾಗಿದೆ. ಅಕ್ಕೆ ಪಾರದರ್ಶಕತೆ ಇಲ್ಲದೇ ಈ ಕ್ರಮ ಮುಂದುವರಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

