ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) 50 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್ಗಳನ್ನು ಪೊಲೀಸರು ವಶಕ್ಕೆ ಪಡೆದು, 5 ಮಂದಿಯನ್ನ ಬಂಧಿಸಿದ್ದಾರೆ.
ಅಬ್ದುಲ್ ಬಷೀದ್ ಹಾಗೂ ಮಗ ಮೊಹಮದ್ ಅಶೀಕ್ ಸೇರಿದಂತೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ, ಗುಲಾಮ್ ಹುಸೇನ್ ಖಾನ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಗೋಗರೆದಿದ್ದ ಶಾಸಕರಿಗೆ ಸಿಗುತ್ತೆ 3 ಟಿಕೆಟ್ – ಚಿನ್ನಸ್ವಾಮಿಯಲ್ಲಿ 55 ಸಾವಿರ ಸೀಟ್ ಸಾಧ್ಯವಾಗುತ್ತಾ?
ನಕಲಿ ಸಿಗರೇಟ್ ಜಾಲದ ಬಗ್ಗೆ ಅನ್ವೇಷ್ ಐಪಿಆರ್ ಸಂಸ್ಥೆ ನೀಡಿದ ದೂರಿನ ಮೇರೆಗೆ ತಂದೆ ಹಾಗೂ ಮಗನನ್ನ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಐಟಿಸಿ ಹಾಗೂ ಎಸ್ಸೆ ಸಂಸ್ಥೆಯ ನಕಲಿ ಸಿಗರೇಟ್ಗಳನ್ನ ವಿದೇಶಗಳಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಐವರನ್ನ ಬಂಧಿಸಿ ನಕಲಿ ಸಿಗರೇಟ್ ವಶಕ್ಕೆ ಪಡೆಯಲಾಗಿದೆ.

