ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದಾಗಿನಿಂದ ದೇಶದಲ್ಲಿ ತೈಲ, ಇಂಧನದ ಅಭಾವ ಉಂಟಾಗಿದೆ. ಪೆಟ್ರೋಲ್ ಬಂಕುಗಳಲ್ಲಿ, ಗ್ಯಾಸ್ ಬಂಕ್ಗಳಲ್ಲಿ ಹಾಗೂ LPG ಸಿಲಿಂಡರ್, ಗೃಹ ಬಳಕೆ ಸಿಲಿಂಡರ್ ಗಾಗಿ ಜನರು ಪರದಾಡುವಂತಾಗಿದೆ. ಏಜೆನ್ಸಿಗಳ ಮುಂದೆ ಸಾಲು ಸಾಲು ಕಿ.ಮೀಗಟ್ಟಲೆ ಕ್ಯೂ ಕಾಣಿಸುತ್ತಿದೆ. ಅಲ್ಲದೆ ಕೆಲವೇಡೆ ಈಗಾಗಲೇ ಗ್ಯಾಸ್ ಬಂಕಗಳು ಹಾಗೂ ಪೆಟ್ರೋಲ್ ಬಂಕ್ಗಳು ಬಂದ್ ಮಾಡಲಾಗಿದೆ. ಹೀಗಾಗಿ ಜನರಿಗೆ ಗೃಹಬಳಕೆ ಸಿಲಿಂಡರ್ ಒದಗಿಸುವ ಉದ್ದೇಶದಿಂದ ಹೊಸ ಉಪಾಯವನ್ನು ತರಲಾಗಿದೆ.
ಹೌದು, ಹರಿಯಾಣದ ಗುರುಗ್ರಾಮದಲ್ಲಿ ಗ್ಯಾಸ್ ಎಟಿಎಂ ಅನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ಜನರಿಗೆ ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಗ್ಯಾಸ್ ಲಭ್ಯವಾಗುತ್ತದೆ. ಯಾವುದೇ ರೀತಿಯ ಕ್ಯೂ ನಿಲ್ಲದೆ, ದಿನಗಟ್ಟಲೆ ಗ್ಯಾಸ್ ಗಾಗಿ ಕಾಯುವ ಅವಶ್ಯಕತೆಯೂ ಇಲ್ಲ. ನಿಮ್ಮ ಖಾಲಿ ಆಗಿರುವ ಸಿಲಿಂಡರನ್ನು ತೆಗೆದುಕೊಂಡು ಹೋಗಿ, ಕ್ಷಣಾರ್ಧದಲ್ಲಿ ಗ್ಯಾಸ್ ಅನ್ನು ತುಂಬಿಸಿಕೊಂಡು ಬರಬಹುದು. ಇದರಿಂದ ಸುಲಭವಾಗಿ ಗ್ಯಾಸ್ ಲಭ್ಯವಾಗುತ್ತದೆ.

ಈ ಗ್ಯಾಸ್ ATM ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಯಾವ ರೀತಿ ಇದನ್ನ ಜನಸಾಮಾನ್ಯರು ಉಪಯೋಗಿಸಬಹುದು? ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಏನಿದು ಗ್ಯಾಸ್ ATM?
ಗ್ಯಾಸ್ ATM ಎನ್ನುವುದು ಆಟೋಮ್ಯಾಟಿಕ್ ಗ್ಯಾಸ್ ವೆಂಡಿಂಗ್ ಮಷೀನ್ ಆಗಿರುತ್ತದೆ. (Automatic gas vending machine) ಸಾಮಾನ್ಯವಾಗಿ ನಾವು ಎಟಿಎಂ ನಲ್ಲಿ ಹಣ ತೆಗೆದುಕೊಳ್ಳುವ ಹಾಗೆ ಇದನ್ನು ಬಳಸಬಹುದು. ಎಟಿಎಂ ನಲ್ಲಿ ಎಟಿಎಂ ಕಾರ್ಡ್ ಹಾಕಿ, ಅವಶ್ಯವಾದ ಹಣದ ಸಂಖ್ಯೆಯನ್ನು ಹಾಕಿ ಬಳಿಕ ಪಿನ್ ಒತ್ತಿದರೆ ಹಣ ಡ್ರಾ ಆಗಿ ಕೈ ಸೇರುತ್ತದೆ. ಅದರಂತೆ ಇದು ಕೂಡ ಕಾರ್ಯನಿರ್ವಹಿಸುತ್ತದೆ. ಖಾಲಿ ಸಿಲಿಂಡರನ್ನು ಕೊಟ್ಟು ತಕ್ಷಣ ತುಂಬಿದ ಸಿಲಿಂಡರನ್ನು ಪಡೆದುಕೊಳ್ಳಬಹುದು. ಇದನ್ನು ಗ್ಯಾಸ್ ATM ಎಂದು ಕರೆಯುತ್ತಾರೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಗ್ಯಾಸ್ ಸಿಲಿಂಡರ್ ಬೇಕಾದಾಗ ಅಥವಾ ನಿಮ್ಮ ಸಿಲಿಂಡರ್ ಖಾಲಿಯಾದಾಗ ನೀವು ಖಾಲಿಯಾದ ಸಿಲಿಂಡರನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿ ಹಣ ತೆಗೆದುಕೊಳ್ಳುವ ಎಟಿಎಂ ನಲ್ಲಿ ಇರುವಂತೆ ಒಂದು ಚಿಕ್ಕ ಸ್ಕ್ರೀನ್ ಇರುತ್ತದೆ. ಅಲ್ಲಿ ನೀವು ಗ್ಯಾಸ್ ಸಿಲಿಂಡರ್ಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಗ ಪರಿಶೀಲನೆಗಾಗಿ OTP ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಸ್ಕ್ರೀನ್ ನಲ್ಲಿ ಹಾಕಬೇಕು. ಬಳಿಕ ನಿಮ್ಮ ಖಾಲಿಯಾದ ಸಿಲಿಂಡರನ್ನು ತೂಕದ ಯಂತ್ರದ ಮೇಲೆ ಇರಿಸಬೇಕು. ಬಳಿಕ ಅದು ಸಿಲಿಂಡರ್ ತೂಕವನ್ನು ಸ್ಕ್ಯಾನ್ ಮಾಡಿಕೊಂಡು ಪರಿಶೀಲಿಸುತ್ತದೆ. ಆಗ ನೀವು ಡಿಜಿಟಲ್ ಮೂಲಕ ಹಣವನ್ನು ಪಾವತಿ ಮಾಡಬೇಕು. ಅಲ್ಲಿ ಇನ್ನೊಂದು ಕಡೆ ನಿಮಗೆ ತುಂಬಿದ ಸಿಲೆಂಡರ್ ದೊರೆಯುತ್ತದೆ.

ಭಾರತದ ಪ್ರಮುಖ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಈ ಕಂಪನಿಗಳು LPG ATM ಗಳನ್ನು ಸ್ಥಾಪಿಸುತ್ತವೆ. ಇವುಗಳು ಸರ್ಕಾರಿ ಬೆಂಬಲಿತ ಎಲ್ಪಿಜಿ ವಿತರಣಾ ಯೋಜನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಜನರಿಗೆ ಸಿಲಿಂಡರ್ ಗಳನ್ನು ಬದುಕಿಸಿ ಕೊಡುವ ಉದ್ದೇಶದಿಂದ ಈ ATM ಮಷೀನ್ ಅನ್ನು ಸ್ಥಾಪಿಸಿದೆ.
ಸದ್ಯಕ್ಕೆ ಎಲ್ಲೆಲ್ಲಿ ಗ್ಯಾಸ್ ATM ಗಳ ವ್ಯವಸ್ಥೆ ಇದೆ?
- ಹರಿಯಾಣದ ಗುರುಗ್ರಾಮನ ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿಯಲ್ಲಿ ಸ್ಥಾಪಿಸಲಾಗಿದೆ.
ತೈಲ ಕಂಪನಿಗಳು ಅಥವಾ ಸರ್ಕಾರ ಈವರೆಗೂ ಗುರುಗ್ರಾಮದ ಹೊರತಾಗಿ ಬೇರೆ ಯಾವ ಪ್ರದೇಶಗಳಲ್ಲಿ ಎಟಿಎಂ ಸ್ಥಾಪಿಸಲಾಗಿದೆ ಎನ್ನುವ ಕುರಿತು ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಯಾವ ನಗರಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದೆಹಲಿ, ಮುಂಬೈ, ಹೈದ್ರಾಬಾದ್ ಸೇರಿದಂತೆ ಇನ್ನಿತರ ಪ್ರಮುಖ ನಗರಗಳಲ್ಲಿ ಸ್ಥಾಪಿಸಬಹುದು.

ಅನುಕೂಲತೆಗಳು?
- ಈ ಗ್ಯಾಸ್ ಎಟಿಎಂನಿಂದಾಗಿ ಜನರು ಹೆಚ್ಚಿನ ಸಮಯ ಕ್ಯೂ ನಿಲ್ಲುವುದನ್ನ ತಪ್ಪಿಸುತ್ತದೆ. ಕಡಿಮೆ ಸಮಯದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳು ಲಭ್ಯವಾಗುತ್ತದೆ.
- ಇದು ದಿನದ 24 ಗಂಟೆಯೂ ಹಾಗೂ ವಾರದ ಏಳು ದಿನವೂ ಕೆಲಸ ಮಾಡುತ್ತದೆ.
- ಜನರ ನಡುವಿನ ಕಾರ್ಯನಿರ್ವಹಣೆ ಕಡಿಮೆ ಮಾಡಿ ಡಿಜಿಟಲ್ ಆಗಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಬಹುದು.
- ಇದರಿಂದಾಗಿ ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಹಾರುವುದಕ್ಕೆ ಕಡಿವಾಣ ಹಾಕಬಹುದು.
- ಅಲ್ಲದೆ ಗ್ಯಾಸ್ ಸಿಲಿಂಡರ್ ಪಡೆದ ನಂತರ ಡಿಸಿಟಲ್ ಮೂಲಕ ಹಣ ಪಾವತಿ ಮಾಡುವುದು ಸುಲಭವಾಗುತ್ತದೆ
ಏನಿದರ ಮೂಲ ಉದ್ದೇಶ?
ದೇಶದಲ್ಲಿನ ಮನೆಗಳಿಗೆ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಸಿಲೆಂಡರ್ ಅಭಾವ ಉಂಟಾಗಿತ್ತು. ಅಂದರೆ ಮನೆ ಮನೆಗೆ ಸಿಲಿಂಡರ್ ಗಳು ತಲುಪುವುದು ತಡವಾಗುತ್ತಿತ್ತು. ವಿತರಣೆ ವಿಳಂಬ, ಸಿಲೆಂಡರ್ ಬುಕ್ ಆಗದೇ ಇರುವುದು ಇಂತಹ ಸಮಸ್ಯೆಗಳು ಎದುರಾಗಿದ್ದವು. ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಸಿಲೆಂಡರ್ ಲಭ್ಯವಾಗದಿರುವುದು ಕಷ್ಟವಾಗಿತ್ತು. ಹೀಗಾಗಿ ಇಂತಹದ್ದಕ್ಕೆ ಪರಿಹಾರ ನೀಡುವ ಉದ್ದೇಶದಿಂದ LPG ATM ಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಮುಖ ನಗರಗಳಲ್ಲಿ ಸ್ಥಾಪಿಸುವ ಮೂಲಕ ಇನ್ನಷ್ಟು ಸಹಕಾರಿಯಾಗಲಿದೆ.

- ಈ ಎಲ್ಪಿಜಿ ಎಟಿಎಂ ಗಳು ಸ್ವಯಂ ಚಾಲಿತ ಅಂದರೆ ಸಿಬ್ಬಂದಿ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತದೆ.
- ಗ್ರಾಹಕರು ಯಾವುದೇ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡದೆ ಅಥವಾ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಗ್ರಾಹಕರ ಮನೆಗೆ ಹೋಗಿ ಖಾಲಿ ಸಿಲೆಂಡರ್ ತೆಗೆದುಕೊಂಡು ತುಂಬಿದ ಸಿಲೆಂಡರ್ ಕೊಡುವಂತಹ ಅವಶ್ಯಕತೆ ಇಲ್ಲ.
- ಕೇವಲ ಖಾಲಿ ಸಿಲೆಂಡರ್ ತೆಗೆದುಕೊಂಡು ಬಂದು ATM ನಲ್ಲಿ ಹಣ ಪಾವತಿ ಮಾಡಿದರೆ ತುಂಬಿದ ಗ್ಯಾಸ್ ಪಡೆದುಕೊಳ್ಳಬಹುದು.

