ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ಬಗ್ಗದ ಇರಾನ್ (Iran) ತನ್ನ ಪ್ರತೀಕಾರದ ದಾಳಿ ಮುಂದುವರೆಸಿದೆ. ಇರಾನ್ ಅಮೆರಿಕದ 300 ಮಿಲಿಯನ್ ಡಾಲರ್(ಅಂದಾಜು 2,845 ಕೋಟಿ ರೂ.) ಮೌಲ್ಯದ ಇ-3 ಸೆಂಟ್ರಿ ಅವ್ಯಾಕ್ಸ್ ಏರ್‌ಕ್ರಾಫ್ಟ್ ಧ್ವಂಸಗೊಳಿಸಿದೆ.
ಸೌದಿ ಅರೇಬಿಯಾದ(Saudi Arabia) ಪ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್ ಹಾರಿಸಿ ದಾಳಿ ನಡೆಸಿ ಕಣ್ಗಾವಲು ವಿಮಾನವನ್ನು ಹೊಡೆದು ಹಾಕಿದೆ. ಪ್ರಕಟವಾದ ಚಿತ್ರದಲ್ಲಿ ವಿಮಾನ ಎರಡು ಹೋಳಾಗಿದೆ. ಈ ದಾಳಿಯಲ್ಲಿ ಅಮೆರಿಕದ 10 ಸೈನಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ದಾಳಿಯಲ್ಲಿ ಬಹು ಇಂಧನ ತುಂಬುವ ವಿಮಾನಗಳು ಸಹ ಹಾನಿಗೊಳಗಾಗಿವೆ. ಈ ಘಟನೆಯ ಬಗ್ಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸಂಕಷ್ಟದ ಸಮಯದಲ್ಲಿ ಭಾರತದಿಂದ 38 ಸಾವಿರ MT ತೈಲ ಪೂರೈಕೆ – ಧನ್ಯವಾದ ಹೇಳಿದ ಶ್ರೀಲಂಕಾ
Newly released images capture the damage caused to an American E-3 AWACS plane in Iranian retaliatory strikes on Prince Sultan Air Base in Saudi Arabia.
Follow Press TV on Telegram: https://t.co/LWoNSpkc2J pic.twitter.com/ftFLmC5wuB
— Press TV 🔻 (@PressTV) March 29, 2026
ಈ ವಿಮಾನದ ವಿಶೇಷತೆ ಏನು?
ಬೋಯಿಂಗ್ E-3 ಸೆಂಟ್ರಿ (E-3 Sentry) ಎಂಬುದು ಒಂದು ಅತ್ಯಾಧುನಿಕ ಮಿಲಿಟರಿ ವಿಮಾನವಾಗಿದ್ದು, ಇದನ್ನು ಸಾಮಾನ್ಯವಾಗಿ AWACS (Airborne Warning and Control System) ಎಂದು ಕರೆಯಲಾಗುತ್ತದೆ.
E-3 ಸೆಂಟ್ರಿಗೆ ಹಾರುವ ನಿಯಂತ್ರಣ ಕೊಠಡಿ ಎಂಬ ಹೆಸರೂ ಇದೆ. ಯುದ್ಧದ ಸಮಯದಲ್ಲಿ ಶತ್ರು ವಿಮಾನಗಳು ಅಥವಾ ಕ್ಷಿಪಣಿಗಳನ್ನು ದೂರದಿಂದಲೇ ಗುರುತಿಸಲು ಮತ್ತು ತನ್ನ ದೇಶದ ವಿಮಾನಗಳಿಗೆ ಮಾರ್ಗದರ್ಶನ ನೀಡಲು ಇದನ್ನು ಬಳಸಲಾಗುತ್ತದೆ.
Iranian state media release satellite pictures claimed to be the destroyed E-3 Sentry in Saudi. No official word yet from CENTCOM on the March 27 strike. https://t.co/v0hZLg3fED pic.twitter.com/fEuU3WSRuM
— Shiv Aroor (@ShivAroor) March 29, 2026
ಈ ವಿಮಾನದ ಬೆನ್ನಿನ ಮೇಲೆ ಒಂದು ದೊಡ್ಡ ತಿರುಗುವ ತಟ್ಟೆಯಂತಹ(Radar Dome) ಭಾಗವಿರುತ್ತದೆ. ಇದು ಸುಮಾರು 400 ಕಿಲೋಮೀಟರ್‌ಗಿಂತಲೂ ದೂರದಲ್ಲಿರುವ ಶತ್ರುಗಳ ಚಲನವಲನವನ್ನು ಪತ್ತೆಹಚ್ಚಬಲ್ಲದು. ಇದನ್ನೂ ಓದಿ: ಇರಾನ್ ಮೇಲೆ ರಣಭೀಕರ ದಾಳಿಗೆ ಪ್ಲ್ಯಾನ್ – ಮಧ್ಯಪ್ರಾಚ್ಯಕ್ಕೆ 3,500 ನೌಕಾಪಡೆ, ಟ್ರಿಪೋಲಿ ನಿಯೋಜಿಸಿದ ಅಮೆರಿಕ
ಬೋಯಿಂಗ್ 707 ಎಂಬ ಪ್ರಯಾಣಿಕ ವಿಮಾನದ ಮಾದರಿಯನ್ನು ಆಧರಿಸಿ E-3 ಸೆಂಟ್ರಿಯನ್ನು ನಿರ್ಮಿಸಲಾಗಿದೆ. ಯುದ್ಧಭೂಮಿಯಲ್ಲಿ ಆಕಾಶದಿಂದಲೇ ಕಣ್ಗಾವಲು ಇಡುವ ಮತ್ತು ತನ್ನ ಸೈನ್ಯಕ್ಕೆ ಆಜ್ಞೆಗಳನ್ನು ನೀಡುವ ಕಾರಣ ಈ ವಿಮಾನವನ್ನು ಡಿಫೆನ್ಸ್ ತಜ್ಞರು ಶಕ್ತಿಯುತ ʼಆಕಾಶದ ಕಣ್ಣುʼ ಎಂಬ ಹೆಸರಿನಿಂದ ಕರೆಯುತ್ತಾರೆ.

