ಗದಗ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ (LPG cylinder) ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ (Accident) ಘಟನೆ ಗದಗ ಜಿಲ್ಲೆಯ ರೋಣ (Rona) ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ (Hubballi) ರೋಣ, ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಲಾರಿ ಹೊರಟಿತ್ತು. ತಿರುವಿನಲ್ಲಿ ಓವರಟೇಕ್ ಮಾಡಲು ಹೋದ ವೇಳೆ ಲಾರಿ ಗುಂಡಿಗೆ ಇಳಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಲಾರಿ ಉರುಳಿದೆ. ಸಿಲಿಂಡರ್ ಚಲ್ಲಾಪಿಲ್ಲಿ ಆಗಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಸಲಿಂಡರ್ ಸ್ಫೋಟಿಸಿಲ್ಲ. ಇದನ್ನೂ ಓದಿ: ಎಲ್‌ಪಿಜಿ ಅಭಾವ – ಹೊಗೆರಹಿತ ಎಲೆಕ್ಟ್ರಿಕ್ ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕ
ಭಾರತ್ ಗ್ಯಾಸ್ ಕಂಪನಿಗೆ ಸೇರಿದ ಸಿಲಿಂಡರ್‍ಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತಗ್ಗದ ವಾಣಿಜ್ಯ ಸಿಲಿಂಡರ್ ಅಭಾವ – ಭಾನುವಾರದ ಬಾಡೂಟಕ್ಕೂ ʻಗ್ಯಾಸ್ ಟ್ರಬಲ್ʼ

