– ಕರ್ನಾಟಕ – ಕೇರಳದ ಹಲವು ಭಾಗಗಳಿಗೆ ತಲುಪಿಸಲು ನಡೆದಿತ್ತು ಪ್ಲ್ಯಾನ್
ಮೈಸೂರು: ಜಿಲ್ಲೆಯಲ್ಲಿ ಮತ್ತೊಂದು ಡ್ರಗ್ಸ್ ಜಾಲ (Drugs Network) ಪತ್ತೆಯಾಗಿದೆ. ತೋಟದ ಮನೆಯಲ್ಲಿ ತಯಾರಿಸಿಟ್ಟಿದ್ದ 25 ಕೆಜಿ ಸಿಂಥೆಟಿಕ್ ಡ್ರಗ್ಸ್ ಅನ್ನು ಹುಣಸೂರು ಪೊಲೀಸರು (Hunsur Police) ಪತ್ತೆ ಹಚ್ಚಿದ್ದಾರೆ.
ಹುಣಸೂರು ತಾಲೂಕಿನ ದಾಸನಪುರ ರತ್ನಪುರಿ ಮಾರ್ಗಮಧ್ಯದ ತೋಟದಲ್ಲಿ ಬಾರಿ ಪ್ರಮಾಣದ ಡ್ರಗ್ಸ್ ಸಿಕ್ಕಿದೆ. ತೋಟದ ಮಾಲೀಕ ಇರ್ಫಾನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಿದ್ದು ಓರ್ವ ಆರೋಪಿಯನ್ನ (Accused) ಪೊಲೀಸರು ವಶಕ್ಕೆ ಪಡೆದಿದ್ದು ಉಳಿದವರ ಪತ್ತೆಗೆ ಶೋಧಕಾರ್ಯ ಮುಂದುವರೆಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಕೈಚಳಕ – 15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಕೇಸ್ ದಾಖಲು

12 ಕೋಟಿ ಮೌಲ್ಯದ 48 ಕೆಜಿ ಡ್ರಗ್ಸ್ ಜಪ್ತಿ
ಒಂದು ದಿನ ತಡವಾಗಿದ್ದರೆ ಕರ್ನಾಟಕ – ಕೇರಳದ ಹಲವು ಭಾಗಗಳಿಗೆ ತಲುಪುತಿತ್ತು 12 ಕೋಟಿ ಮೌಲ್ಯದ 48 ಕೆಜಿ ಡ್ರಗ್ಸ್. ಇಂತಹ ಆತಂಕದ ವಿಚಾರವನ್ನು ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬಹಿರಂಗ ಪಡಿಸಿದ್ದಾರೆ. ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿರುವ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ದಾಸನಪುರ ಗ್ರಾಮದ ತೋಟದ ಮನೆಯಲ್ಲಿ 12 ಕೋಟಿ ರೂ. ಮೌಲ್ಯದ 48 ಕೆಜಿ ಡ್ರಗ್ಸ್ ಪತ್ತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಂಟೇನರ್ ಲಾರಿ, ಕಾರು ನಡುವೆ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಕಾರು

ಮೆಫೆಡ್ರೋನ್ ಎಂಬ ಡ್ರಗ್ಸ್ ಇದ್ದಾಗಿದ್ದು ಇದರ 1 ಕೆಜಿ ಮೌಲ್ಯ 30 ಲಕ್ಷ ರೂ. ಮುಂಬೈ ಲಿಂಕ್ ನಿಂದ ತಯಾರಾಗಿ ಬಂದಿರುವ ಡ್ರಗ್ಸ್ ಇದು. ಡ್ರಗ್ಸ್ ಅನ್ನು ಪ್ಯಾಕೆಟ್ ಮಾಡಿ ವಿತರಣೆಗಾಗಿ ಸಿದ್ದ ಮಾಡಲಾಗುತ್ತಿತ್ತು. ಕರ್ನಾಟಕ ಹಾಗೂ ಕೇರಳಕ್ಕೆ ಡ್ರಗ್ಸ್ ಮಾರಾಟಕ್ಕಾಗಿ ತಂದಿಟ್ಟಿದ್ದ ಡ್ರಗ್ಸ್ ಇದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ – ಇಬ್ಬರು ಸಾವು

