ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್‌ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಹಿನ್ನೆಲೆ 247 ಸಿಲಿಂಡರ್‌ಗಳನ್ನ ಜಪ್ತಿ ಮಾಡಲಾಗಿದೆ
ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಮಾಹಿತಿ ನೀಡಿದ್ದಾರೆ. ಬಾಗೇಪಲ್ಲಿಯಲ್ಲಿ 13, ಚಿಕ್ಕಬಳ್ಳಾಪುರ 71, ಚಿಂತಾಮಣಿ 26, ಗೌರಿಬಿದನೂರು 36, ಗುಡಿಬಂಡೆ 68, ಶಿಡ್ಲಘಟ್ಟ 31, ಚೇಳೂರಿನಲ್ಲಿ 2 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: `ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್
214 ಗೃಹಬಳಕೆ ಸಿಲಿಂಡರ್‌ಗಳು ಹಾಗೂ 33 ವಾಣಿಜ್ಯ ಸಿಲಿಂಡರ್‌ಗಳನ್ನ ಜಪ್ತಿ ಮಾಡಲಾಗಿದೆ. ಇನ್ನೂ ಗೃಹಬಳಕೆ ಸಿಲಿಂಡರ್‌ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಶಾಶ್ವತವಾಗಿ ಸಿಲಿಂಡರ್ ಮಂಜೂರಾತಿ ಸಹ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

