– ಮದುವೆಗೂ ಮುನ್ನವೇ ಮತಾಂತರವಾಗುವಂತೆ ಪ್ರಿಯಕರ ತಾಕೀತು
ಚಿಕ್ಕಮಗಳೂರು: ಮೂಡಿಗೆರೆ (Mudigere) ತಾಲೂಕಿನ ಬಿಳಗುಳ ಗ್ರಾಮದಲ್ಲಿ ದ್ವಿತೀಯ ಪಿಯುಸಿ ಹುಡುಗನನ್ನ ಪ್ರೀತಿಸುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ಆತ ಹೇಳಿದ ಎಂದು ದೇವಸ್ಥಾನಕ್ಕೂ ಹೋಗದೇ ಮನೆಯಲ್ಲೇ ಉಪವಾಸವಿದ್ದು ರಂಜಾನ್ (Ramzan) ಆಚರಿಸಿ, ನಮಾಜ್ (Namaz) ಮಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇದೇ ವಿಚಾರವಾಗಿ ಕಳೆದ ಎರಡು ಮೂರು ದಿನಗಳ ಹಿಂದೆ ಮೂಡಿಗೆರೆ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿತ್ತು. ಹುಡುಗ ಹಿಂದೂ ಸಂಘಟನೆ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಾಲಕಿ ಪೋಷಕರು ಮುಸ್ಲಿಂ ಹುಡುಗನ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದರು. ಆದರೆ, ಈಗ ಹುಡುಗಿಯ ಪೋಷಕರು ಹಿಂದೂ ಸಂಘಟನೆ ಕಾರ್ಯಕರ್ತರ ಬಳಿ ಹೇಳಿಕೊಂಡಿರುವ ವಿಚಾರ ಹಿಂದೂಗಳು ಸೂಕ್ಷ್ಮವಾಗಿ ಯೋಚಿಸಬೇಕಾದಂತಹ ಸಂಗತಿಯಾಗಿದೆ. ಇದನ್ನೂ ಓದಿ: ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಬೆಂಕಿ
10ನೇ ತರಗತಿ ವಿದ್ಯಾರ್ಥಿನಿ ಪ್ರಿಯಕರ ಹೇಳಿದ ಎಂದು ಮನೆಯಲ್ಲಿ ಒಂದು ತಿಂಗಳು ರಂಜಾನ್ ವೇಳೆ ಉಪವಾಸ ಮಾಡಿದ್ದಾಳೆ. ಪ್ರತಿದಿನ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಪೋಷಕರು ದೇವಸ್ಥಾನಕ್ಕೆ ಕರೆದರೆ ಹೋಗದೆ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಬಾಲಕಿಗೆ ಆತ ಮದುವೆಗೂ ಮುನ್ನವೇ ಮತಾಂತರವಾಗಬೇಕು ಎಂದು ತಾಕೀತು ಮಾಡಿದ್ದ. ನಾನು ಹೇಳಿದಂತೆ ನೀನು ಕೇಳಬೇಕು ಇಲ್ಲವಾದರೆ ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬಾಲಕಿಗೆ ಹೆದರಿಸಿದ್ದನಂತೆ. ಬಾಲಕಿ ತಂದೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಆಕೆಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಎಲ್ಲಾ ವಿಚಾರವನ್ನು ಸಂಘಟನೆಯವರ ಬಳಿ ಹೇಳಿಕೊಂಡಿದ್ದರು. ಇದನ್ನೂ ಓದಿ: PUC ಹುಡ್ಗ, SSLC ಹುಡ್ಗಿ ಪ್ರೇಮಕ್ಕೆ ಲವ್ ಜಿಹಾದ್ ಆರೋಪ, ಹಲ್ಲೆ – ದೂರಿಗೆ ಪ್ರತಿದೂರು
ಇದೀಗ ಹುಡುಗನ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಆತ ಇನ್ಸ್ಟಾಗ್ರಾಮ್ನಲ್ಲಿ ನನ್ನನ್ನ ಯಾರು ಏನು ಮಾಡಲು ಆಗುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾನೆ. ಕೂಡಲೇ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ಇರಾನ್ನಿಂದ LPG ಖರೀದಿಸಿದ ಇಂಡಿಯನ್ ಆಯಿಲ್ – ಮಂಗಳೂರಿಗೆ ಬರಲಿದೆ ಹಡಗು

