– ಹಡಗಿನ ಎಂಜಿನ್ ಗುರಿಯಾಗಿಸಿ ನೀರಿನೊಳಗಿಂದ ದಾಳಿ
ಅಂಕಾರ: ಇಸ್ತಾನ್‌ಬುಲ್ ಬಳಿಯ ಕಪ್ಪು ಸಮುದ್ರದಲ್ಲಿ (Black Sea) ಟರ್ಕಿ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ (Russian Oil Tanker) ಹಡಗಿನ ಮೇಲೆ ದಾಳಿ ನಡೆದಿದೆ.
ಕಪ್ಪು ಸಮುದ್ರವನ್ನು ಮರ್ಮರ ಸಮುದ್ರ (ದ್ವೀಪ ಸಮುದ್ರ) ಮತ್ತು ಮೆಡಿಟರೇನಿಯನ್‌ನೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗವಾದ ಬಾಸ್ಪರಸ್‌ನಿಂದ (Bosphorus) ಸುಮಾರು 33 ಕಿಮೀ ದೂರದಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾ ಕಮಾಂಡರ್ ಹತ್ಯೆ

ಸಿಯೆರಾ ಲಿಯೋನ್ ಧ್ವಜ ಹೊತ್ತ ಟ್ಯಾಂಕರ್ ರಷ್ಯಾದ ಕಚ್ಚಾ ತೈಲ (Russian Oil) ಸಾಗಿಸುತ್ತಿತ್ತು. ಸುಮಾರು 10 ಲಕ್ಷ ಬ್ಯಾರಲ್‌ಗಳನ್ನ ಹಡಗಿನಲ್ಲಿ ಲೋಡ್ ಮಾಡಲಾಗಿತ್ತು. ರಷ್ಯಾದ ತೈಲ ತುಂಬಿದ ಟ್ಯಾಂಕರ್ ನೊವೊರೊಸಿಸ್ಕ್‌ಗೆ ಹೊರಟಿತ್ತು. ಈ ವೇಳೆ ಟರ್ಕಿಯ ಪ್ರಾದೇಶಿಕ ಸಮುದ್ರ ಗಡಿಯಿಂದ ಹೊರಗೆ ದಾಳಿ ನಡೆದಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟರ್ಕಿಯ ಸಾರಿಗೆ ಸಚಿವ ಅಬ್ದುಲ್ಕದಿರ್ ಉರಾಲೋಗ್ಲು, ಟರ್ಕಿ ನಿರ್ವಹಿಸಲ್ಪಡುತ್ತಿದ್ದ ವಿದೇಶಿ ಧ್ವಜವಿದ್ದ ಹಡಗು ರಷ್ಯಾದ ಕಚ್ಚಾ ತೈಲ ಹೊತ್ತು ಹೊರಟಿತ್ತು. ಆದ್ರೆ ಬುಧವಾರ ಮಧ್ಯರಾತ್ರಿ ಸುಮಾರಿಗೆ ಎಂಜಿನ್ ಕೊಠಡಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಬಳಿಕ ತುರ್ತು ಕೇಂದ್ರಕ್ಕೆ ವರದಿ ಮಾಡಲಾಗಿತ್ತು. ಪರಿಶೀಲನೆ ನಡೆಸಿದಾಗ ಎಂಜಿನ್ ಕೊಣೆಯನ್ನ ನಿರ್ದಿಷ್ಟವಾಗಿ ಗುರಿಯಾಗಿಸಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಡ್ರೋನ್ ಮೂಲಕ ದಾಳಿ ನಡೆಸಿಲ್ಲ, ಸಮುದ್ರದಾಳದಿಂದ, ಮಾನವರಹಿತ ವಾಹನದಿಂದ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಸಮಯದಲ್ಲಿ 27 ಟರ್ಕಿ ಸಿಬ್ಬಂದಿ ಹಡಗಿನಲ್ಲಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಟರ್ಕಿ ಸರ್ಕಾರವು ಸ್ಥಳಕ್ಕೆ ರಕ್ಷಣಾ ತಂಡಗಳನ್ನ ಕಳುಹಿಸಿದ್ದು, ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದನ್ನೂ ಓದಿ: ಗುಡ್ ನ್ಯೂಸ್ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್: ಇರಾನ್

