– ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರು: ಸಿಲಿಂಡರ್ (Cylinder) ಅಭಾವದ ನಡುವೆ ಯುಗಾದಿ ಹಬ್ಬದ (Ugadi Festival) ದಿನವೇ 2 ಗೃಹ ಬಳಕೆ ಸಿಲಿಂಡರ್ಗಳನ್ನು ಪುಂಡರು ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಬೇಗೂರಿನಲ್ಲಿ (Begur) ನಡೆದಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಎಫೆಕ್ಟ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಇದರ ಎಫೆಕ್ಟ್ ದೇಶದ ಮೇಲೂ ಇದ್ದು, ಸಿಲಿಂಡರ್ ಬಳಕೆಯಲ್ಲಿ ಮಿತವ್ಯಯ ಉಂಟಾಗಿದೆ. ರಾಜ್ಯದಲ್ಲಿ ಸಿಲಿಂಡರ್ಗಾಗಿ ಜನರು ಪರದಾಡುವಂತಾಗಿದೆ. ಇಂತಹ ಹೊತ್ತಲ್ಲಿ ಬೆಂಗಳೂರಿನ ಬೇಗೂರಿನಲ್ಲಿ ಯುಗಾದಿ ಹಬ್ಬದ ದಿನವೇ ಅಪಾರ್ಟ್ಮೆಂಟ್ಗೆ ನುಗ್ಗಿದ ಇಬ್ಬರು ಅಪರಿಚಿತ ಯುವಕರು, ಎರಡು ಗೃಹಬಳಕೆ ಸಿಲಿಂಡರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಬೇಗೂರು ಬಳಿಯ ಆರ್ಸಿ ಲೇಔಟ್ನ ವಿಶ್ವಪ್ರಿಯ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇರಾನ್ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ – ಫೋಟೊ ರಿಲೀಸ್
ಗುರುವಾರ ಮಧ್ಯಾಹ್ನದ ಹೊತ್ತಿಗೆ ಹೆಲ್ಮೆಟ್ ಧರಿಸಿ ಇಬ್ಬರು ಯುವಕರು ಬೈಕ್ನಲ್ಲಿ ಬಂದಿದ್ದರು. ಒಬ್ಬ ಹೊರಗೆ ನಿಂತಿದ್ದ ಮತ್ತೊಬ್ಬ ಬೈಕ್ ಸಮೇತ ಒಳಗೆ ಹೋಗಿ ಎರಡು ಸಿಲಿಂಡರ್ಗಳನ್ನು ಕಳವು ಮಾಡಿ ಹಾಡಹಗಲೇ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್ ಆಗಿದ್ದಾರೆ. ಸಿಲಿಂಡರ್ ಕಳ್ಳತನದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮನೆ ಮಾಲೀಕರು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕುಶಾಲನಗರ | ಮನೆ ಬಳಿ ನಿಲ್ಲಿಸಿದ್ದ ಆಟೋ ಜಖಂಗೊಳಿಸಿದ ಪುಂಡಾನೆ

