ರಿಯಾದ್: ತನ್ನ ಮೇಲಿನ ಅಮೆರಿಕ, ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್(Iran) ಈಗ ಸೌದಿ ಅರೇಬಿಯಾದ(Saudi Arabia) ತೈಲ ಸಂಸ್ಕರಣಾ ಕೇಂದ್ರದ ಮೇಲೆ ಡ್ರೋನ್ ದಾಳಿ ಮಾಡಿದೆ.
ಕೆಂಪು ಸಮುದ್ರದ ಬಂದರಿನಲ್ಲಿರುವ ಸೌದಿ ಅರಾಮ್ಕೊದ ಯಾನ್ಬುದಲ್ಲಿರುವ SAMREF ಸಂಸ್ಕರಣಾಗಾರವನ್ನು ಗುರಿಯಾಗಿಸಿ ಏರ್‌ಸ್ಟ್ರೈಕ್ ಮಾಡಿದೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ಯಾನ್ಬು ಮತ್ತು ಫುಜೈರಾ ಸಂಸ್ಕರಣಾಗಾರಗಳಿಂದ ತೈಲಗಳು ರಫ್ತಾಗುತ್ತಿತ್ತು. ಮತ್ತೆ ಮತ್ತೆ ದಾಳಿ ನಡೆಸಿದ ಪರಿಣಾಮ ಫುಜೈರಾ ಘಟಕದಲ್ಲಿ ಕಾರ್ಯಾಚರಣೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಈಗ ಯಾನ್ಬು ಕೂಡ ದಾಳಿಗೆ ಒಳಗಾಗುತ್ತಿದೆ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಸ್ಥಾವರದ ಮೇಲೆ ಇರಾನ್ ದಾಳಿ- ಭಾರತದ ಮೇಲೆ ಪರಿಣಾಮ ಏನು?
ದಾಳಿಯ ಮೊದಲು ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇಯಾದ್ಯಂತ ತೈಲ ಸೌಲಭ್ಯ ಘಟಕದಲ್ಲಿ ಕೆಲಸ ಮಾಡುತ್ತಿರುವವರನ್ನು ಸ್ಥಳಾಂತರ ಮಾಡುವಂತೆ ಇರಾನ್ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾರನ್ನೂ ಬಿಡಲ್ಲ – ಮಿಲಿಟರಿ ವಕ್ತಾರ ಎಫಿ ಡೆಫ್ರಿನ್ ಶಪಥ

