ರಾಯಚೂರು: ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ (Sri Raghavendra Swamy Matha) ಮಂತ್ರಾಲಯ ರಾಯರ ಮಠದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಮೂಲ ರಾಮದೇವರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ತೈಲ ಅಭ್ಯಂಗನ ನೆರವೇರಿಸಿದರು. ಇದೇ ವೇಳೆ ತುಳಸಿ ಪೂಜೆ, ಗೋ ಪೂಜೆ ಮಾಡಲಾಯಿತು.
ಮಂತ್ರಾಲಯದ (Mantralayam) ಶ್ರೀ ಮಠದಲ್ಲಿ ಪ್ರಾಣದೇವರು, ರಾಯರು ಮತ್ತು ಇತರ ಬೃಂದಾವನಗಳಿಗೂ ತೈಲ ಅಭ್ಯಂಗನ ಮತ್ತು ಆರತಿಯನ್ನು ಅರ್ಪಿಸಲಾಯಿತು. ನಂತರ ಸುಬುಧೇಂದ್ರ ತೀರ್ಥ ಶ್ರೀಗಳಿಗೆ ತೈಲ ಅಭ್ಯಂಗನ ಹಾಗೂ ನಾರೀಕೃತ ನೀರಾಜನ ನೆರವೇರಿತು. ಇದನ್ನೂ ಓದಿ: ದಾವಣಗೆರೆ ಬಿಜೆಪಿ ಟಿಕೆಟ್ ಬದಲಾದ್ರೂ ಆಶ್ಚರ್ಯ ಇಲ್ಲ: ಯತ್ನಾಳ್ ಹೊಸ ಬಾಂಬ್
ಈ ವೇಳೆ ಶ್ರೀಗಳು ಎಲ್ಲಾ ಭಕ್ತರಿಗೆ ಹೊಸ ವರ್ಷದ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಯುಗಾದಿ ಹಿನ್ನೆಲೆ ರಾಯರ ದರ್ಶನ ಪಡೆಯಲು ವಿವಿಧೆಡೆಯಿಂದ ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಧಾರವಾಡ | ಕೋರ್ಟ್‌ಗೆ ಹಾಜರಾಗದೇ 7 ವರ್ಷ ತಲೆಮರೆಸಿಕೊಂಡಿದ್ದ ಪಾಲಿಕೆ ಮಾಜಿ ಸದಸ್ಯ ಅರೆಸ್ಟ್

