– ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗುತ್ತೆ ಎಂದ ಶಾಸಕ
ವಿಜಯಪುರ: ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರದ ಬಿಜೆಪಿ ಟಿಕೆಟ್ ಸಿದ್ದೇಶ್ವರ ಆಪ್ತಗೆ ನೀಡಿದ್ದಾರೆ. ಆದರೆ, ಇದು ಪಕ್ಕಾ ಅಲ್ಲ, ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾದ್ರೂ ಆಶ್ಚರ್ಯ ಪಡಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ.
ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುವ ವರೆಗೂ ಇದನ್ನ ನಂಬುವ ಹಾಗಿಲ್ಲ. ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಟ್ಟರೆ ಇದು ಬದಲಾಗುತ್ತೆ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆ: ಯುಗಾದಿ ಹಬ್ಬದಂದೇ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ
ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗುತ್ತೆ. ಶಾಮನೂರು ಅವರ ಉಪಕಾರ ಪೂಜ್ಯ ತಂದೆ ಯಡ್ಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮೇಲೆ ತುಂಬಾ ಇದೆ. ರಾಘವೇಂದ್ರ ಹಾಗೂ ವಿಜಯೇಂದ್ರ ಗೆಲ್ಲಲು ಶಾಮನೂರು ಅವರ ಸಹಾಯ ಇದೆ. ಟಿಕೆಟ್ ಈಗ ಕೊಟ್ಟಿರೋದು ತಾತ್ಕಾಲಿಕ ಎಂದು ಯತ್ನಾಳ್ ಮಾತನಾಡಿದ್ದಾರೆ.
ಸಿದ್ದೇಶ್ವರ ಆಪ್ತಗೆ ಟಿಕೆಟ್ ಕೊಟ್ಟರೂ ಪೂಜ್ಯ ತಂದೆ ಹಾಗೂ ಮಕ್ಕಳು ಬಿಜೆಪಿ ಅಭ್ಯರ್ಥಿಯನ್ನ ಸೋಲಿಸುತ್ತಾರೆ. ಶಾಮನೂರು ಅವರ ಉಪಕಾರ ತೀರಿಸಲು ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಮಾಡ್ತಾರೆ. ಬಾಗಲಕೋಟೆ ಅಭ್ಯರ್ಥಿ ಚರಂತಿಮಠ ಅವರು ಸೂಕ್ತ ಅಭ್ಯರ್ಥಿ ಇದ್ದಾರೆ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: Assam Elections: ಜಲುಕ್ಬರಿಯಿಂದ ಹಿಮಂತ ಶರ್ಮಾ, ದಿಸ್ಪುರದಿಂದ ಕಾಂಗ್ರೆಸ್ ಮಾಜಿ ಎಂಪಿ ಪ್ರದ್ಯುತ್ ಕಣಕ್ಕೆ

