ಬೆಂಗಳೂರು: ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಕಾವೇರಿ ನಿವಾಸದಲ್ಲಿ (Cauvery) ಸಚಿವರಿಗೆ ಡಿನ್ನರ್ (Dinner) ನೀಡಿದ್ದು 14 ಮಂದಿ ಭಾಗಿಯಾಗಿದ್ದಾರೆ.
ಈ ಡಿನ್ನರ್ ಸಭೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಡಿನ್ನರ್, ಸಂಪುಟ ಪುನಾರಚನೆಗೆ ಹೆಚ್ಚಾಗುತ್ತಿರುವ ಒತ್ತಾಯದ ಮಧ್ಯೆ ಅಧಿವೇಶನ ನಡೆಯುತ್ತಿರುವಾಗ ಸಿಎಂ 14 ಸಚಿವರಿಗೆ ಮಾತ್ರ ಡಿನ್ನರ್ ನೀಡಿದ್ದು ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ| ಸಚಿವರು, ಅಧಿಕಾರಿಗಳ ವಿರುದ್ಧ ಗರಂ – ಸಭಾತ್ಯಾಗ ನಡೆಸಿ ಹೊರನಡೆದ ಸ್ಪೀಕರ್ ಖಾದರ್
ಭಾಗವಹಿಸಿದ ಸಚಿವರು ಯಾರು?
ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಭೋಸರಾಜು, ಎಂ. ಬಿ. ಪಾಟೀಲ್, ಮಹದೇವಪ್ಪ ಎಚ್.ಸಿ., ಮುನಿಯಪ್ಪ ಕೆ.ಎಚ್., ರಾಮಲಿಂಗ ರೆಡ್ಡಿ, ಎಸ್.ಎಸ್. ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ, ಚಲುವರಾಯ ಸ್ವಾಮಿ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದರು.

