ನವದೆಹಲಿ: ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಕೇಂದ್ರದ ಚುನಾವಣಾ ಆಯೋಗದಿಂದ ಮಹತ್ವದ ಸುದ್ದಿಗೋಷ್ಠಿ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ಇಂದು ಪಂಚರಾಜ್ಯಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಪಶ್ಚಿಮ ಬಂಗಾಳ (West Bengal), ಅಸ್ಸಾಂ (Assam), ಕೇರಳ (Kerala), ತಮಿಳುನಾಡು (Tamil Nadu) ಹಾಗೂ ಪುದುಚೇರಿ (Puducherry) ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಮೇ 7 ರಂದು, ತಮಿಳುನಾಡಿನಲ್ಲಿ ಮೇ 10 ರಂದು, ಅಸ್ಸಾಂನಲ್ಲಿ ಮೇ 20 ರಂದು, ಕೇರಳದಲ್ಲಿ ಮೇ 23 ರಂದು ಮತ್ತು ಪುದುಚೇರಿಯಲ್ಲಿ ಜೂನ್ 15 ರಂದು ವಿಧಾನಸಭೆಗಳ ಅವಧಿ ಕೊನೆಗೊಳ್ಳಲಿದೆ. ಇದನ್ನೂ ಓದಿ: ನೆತನ್ಯಾಹು ಕ್ಷೇಮವಾಗಿದ್ದಾರೆ: ಪ್ರಧಾನಿ ಸಾವಿನ ವರದಿ ಸುಳ್ಳು ಎಂದ ಇಸ್ರೇಲ್
ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ನಂತರ ಈ ರಾಜ್ಯಗಳಲ್ಲಿ ಮೊದಲ ಚುನಾವಣೆ ನಡೆಯಲಿದೆ. ಈ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹೈವೋಲ್ಟೇಜ್ ಚುನಾವಣೆಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

