ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ಅರೋಪ ಕೇಳಿದ ಬಂದ ಹಿನ್ನೆಲೆ ಸಂದರ್ಶನ ದಿನಾಂಕವನ್ನ ಕರ್ನಾಟಕ ಲೋಕಸೇವಾ ಆಯೋಗ (KPSC) ಮುಂದೂಡಿಕೆ ಮಾಡಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಸಂಬಂಧ 1:3 ಸಂದರ್ಶನಕ್ಕೆ KPSC ಪಟ್ಟಿ ಬಿಡುಗಡೆ ಮಾಡಿತ್ತು. ಮಾ.23ರಿಂದ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಅಕ್ರಮದ ಆರೋಪ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂದರ್ಶನವನ್ನ ಮುಂದೂಡಿಕೆ ಮಾಡಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಕೊರತೆ – ಬಯೋಗ್ಯಾಸ್ ಉತ್ಪಾದನೆಗೆ ಮುಂದಾದ ಜಿಬಿಎ
ಮುಂದಿನ ಆದೇಶದವರೆಗೂ ಸಂದರ್ಶನ ಮುಂದೂಡಿಕೆ ಮಾಡಿದ್ದು, ಸಂದರ್ಶನದ ದಿನಾಂಕ KPSCಯಿಂದ ಮುಂದೆ ತಿಳಿಸಲಾಗುವುದು ಅಂತ ಮಾಹಿತಿ ನೀಡಲಾಗಿದೆ.

