ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಎಐ ಬಳಕೆ ಮಾಡಿಕೊಳ್ಳಲು ರಿಸರ್ಚ್ ಆಗಬೇಕು. ಅಧ್ಯಯನದ ಬಳಿಕ ಎಐ (AI) ಬಳಕೆ ಬಗ್ಗೆ ನಿರ್ಧಾರ ಮಾಡೋದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ (BJP) ಭಾರತಿ ಶೆಟ್ಟಿ ಪ್ರಶ್ನೆ ಕೇಳಿದ್ರು. ರಾಜ್ಯದ ಆಡಳಿತ ಸುಧಾರಣೆ ಕುರಿತು ಹಾರನಹಳ್ಳಿ ರಾಮಸ್ವಾಮಿ ವರದಿ ಅನುಷ್ಠಾನ ಸರ್ಕಾರ ಮಾಡಿಲ್ಲ. ವರದಿಯಲ್ಲಿ 15%ನಷ್ಟು ಶಿಫಾರಸು ಅನುಷ್ಠಾನ ಮಾಡಿಲ್ಲ. ವರದಿ ಮೂಲೆ ಹಿಡಿದಿದೆ. ಸರ್ಕಾರದ ವ್ಯವಹಾರದಲ್ಲಿ AI ಅನುಷ್ಠಾನ ಆಗಬೇಕು. ಈ ಬಗ್ಗೆ ಕ್ರಮ ಆಗಬೇಕು ಅಂತ ಮನವಿ ಮಾಡಿದ್ದರು. ಇದನ್ನೂ ಓದಿ: 56 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಕ್ರಮ: ಬೋಸರಾಜು
ಇದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರ ನೀಡಿ, ಇವತ್ತು AI ಯುಗವಾಗಿದೆ. ಇಡೀ ವಿಶ್ವವೇ AI ಅಡಿ ಕೆಲಸ ಮಾಡ್ತಿದೆ ಸರ್ಕಾರದ ಆಡಳಿತದಲ್ಲಿ AI ತರಬೇಕಾದ್ರೆ ರಿಸರ್ಚ್ ಆಗಬೇಕು ಇದಾದ ಬಳಿಕ ಅನುಷ್ಠಾನದ ಬಗ್ಗೆ ಚಿಂತನೆ ಮಾಡ್ತೀವಿ ಎಂದರು.
ನಾನೇ ಎಐ ಬಳಕೆ ಮಾಡಿದ್ದೇನೆ. ನಾನೇ ಚಾಟ್ ಜಿಪಿಟಿ ಬಳಸಿದ್ದೇನೆ. ನನ್ನ ಭಾಷಣದ ಬಗ್ಗೆ ಪಿಎಗೆ ಕೇಳ್ತಿದ್ದೆ. ನನ್ನ ಮಗಳು ಹೇಳಿದ್ಲು ಯಾಕೆ ಅವರಿಗೆ ಕೇಳ್ತಿರಾ ಚಾಟ್ ಜಿಪಿಟಿಯಲ್ಲಿ ಕೇಳಿ ಅಂತ ತೋರಿಸಿಕೊಟ್ಟಳು. ನಾನು ಅಸ್ಸಾಂಗೆ ಹೋದಾಗ How to win ಅಸ್ಸಾಂ ಎಲೆಕ್ಷನ್ ಅಂತ ಕೇಳಿದೆ. ಅದನ್ನೆಲ್ಲಾ ಇಟ್ಕೊಂಡು ನಾವು ಎಲೆಕ್ಷನ್ ಮಾಡೋಕೆ ಆಗುತ್ತಾ..? ಬೇಕಾದರೆ ನೀವೂ ನನ್ನ ಜೊತೆ ಬನ್ನಿ ಇಲ್ಲೇ ಕೂರೋಣ ನಾನೇ ಮೊಬೈಲ್‌ನಲ್ಲಿ ತೋರಿಸ್ತೀನಿ ಎಂದರು. ಈ ಮೂಲಕ ಅಸ್ಸಾಂ ಚುನಾವಣೆ ಗೆಲ್ಲೋದು ಹೇಗೆ ಕರ್ನಾಟಕ ಮಾಡೆಲ್ ಫಾಲೋ ಮಾಡಿ ಅಂತ ತೋರಿಸುತ್ತೆ ಎಂದ ಬಿಜೆಪಿ ಸದಸ್ಯರ ಕಾಲೆಳೆದರು. ಪಿಜಿ ವೈದ್ಯಕೀಯ ಅಂತಿಮ ಸುತ್ತು- 39 ಮಂದಿಗೆ ಸೀಟು ಹಂಚಿಕೆ: ಕೆಇಎ

