ಬೆಂಗಳೂರು: ವಿಧಾನಸಭೆಯಲ್ಲಿ (Legislative Assembly) ಗ್ಯಾಸ್ ಪ್ರಾಬ್ಲಂ (Gas Problem) ಬಿಜೆಪಿ ವರ್ಸಸ್ ಕಾಂಗ್ರೆಸ್ ಗದ್ದಲಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಶಾಸಕ ಕುಣಿಗಲ್ ರಂಗನಾಥ್ ಈ ಕುರಿತು ಪ್ರಸ್ತಾಪಿಸಿದರು. ರಾಜ್ಯದಲ್ಲಿ, ಬೆಂಗಳೂರಲ್ಲಿ ಗ್ಯಾಸ್ ಸಮಸ್ಯೆ ಇದೆ, ಬ್ಲಾಕ್ ಮಾರ್ಕೆಟ್ ಶುರುವಾಗಿದೆ. ಇದಕ್ಕೆ ಮೋದಿ ವಿದೇಶಾಂಗ ನೀತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಯುದ್ಧದ ಸಂದರ್ಭದಲ್ಲಿ ರಾಜಕೀಯ ಏಕೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಜೋರಾಗಿ ನಡೆಯಿತು. ಟ್ರಂಪ್ ಬೆಸ್ಟ್ ಫ್ರೆಂಡ್. ವಿದೇಶಾಂಗ ನೀತಿ ಏನಾಯ್ತು? ನಿಮಗೆ ಯೋಗ್ಯತೆ ಇಲ್ಲ, ಎಸ್ಮಾ ಏಕೆ ಜಾರಿ ಮಾಡಿದ್ದೀರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಇದೇ ವೇಳೆ ಸಿದ್ದರಾಮಯ್ಯ (CM Siddaramaiah) ಮಧ್ಯಪ್ರವೇಶ ಮಾಡಿ ಗರಂ ಆದರು. ಕೇಂದ್ರ ಸರ್ಕಾರ ಅಂದ್ರೆ ಎದ್ದು ನಿಂತುಕೊಂಡ್ರೆ ಹೇಗೆ? ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡೋರು ಕೇಂದ್ರ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇವಲ ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್
ಆಗ ಬಿಜೆಪಿ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿ, ಯುದ್ಧದ ಕಾರಣಕ್ಕೆ ಆಗಿರುವ ಸಮಸ್ಯೆ ಎಲ್ಲ ಕಡೆಗಳಲ್ಲೂ ಇದೇ ಸಮಸ್ಯೆ ಆಗಿದೆ. ರಾಜಕಾರಣ ಮಾಡಿದ್ರೆ ಹೇಗೆ? ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ, ಸರ್ವರ್ ಸಮಸ್ಯೆ ಸರಿ ಮಾಡಿಲ್ಲ ಎಂದರು. ಆಗ ಮತ್ತೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ನಿಮಗೆ ಯೋಗ್ಯತೆ ಇಲ್ಲ, ಬೆಲೆ ಹೆಚ್ಚಳ ಮಾಡಿದವರು ನೀವು. ಎಸ್ಮಾ ಜಾರಿ ಮಾಡಿದವರು ಯಾರು? ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೋಸ್ ವೀಲ್‌ನಲ್ಲಿ ದೋಷ – ತಪ್ಪಿದ ಭಾರೀ ದುರಂತ
ಇದಾದ ಬಳಿಕ ಅಶೋಕ್ ಮಾತನಾಡಿ, ಸಿಎಂ ಅವರೇ ಸ್ಟ್ರೈಕ್ ಮಾಡಿ ಅಂತಾ ಹೇಳುತ್ತಾರೆ, ಇದು ಸರೀನಾ ಅಂತಾ ವಾಗ್ದಾಳಿ ನಡೆಸಿದರು. ಆಗ ಸಿಎಂ ಸ್ಪಷ್ಟನೆ ನೀಡಿ ನಾನು ಸ್ಟ್ರೈಕ್ ಮಾಡಿ ಅಂತಾ ಹೇಳಿಲ್ಲ. ಆದರೆ ಹೋಟೆಲ್ ಅವರು ಸ್ಟ್ರೈಕ್ ಮಾಡ್ತಾರೆ ಅಂತಾ ಕೇಳಿದಾಗ ಸರಿ ಇದೆ ಅಂದಿದ್ದೇನೆ, ಅವರು ಸ್ಟ್ರೈಕ್ ಮಾಡೋದು ಸರಿ ಇದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬಂದ್ – ಸಂಪೂರ್ಣವಾಗಿ ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು

