ಬೆಂಗಳೂರು: ಕಾಂಗ್ರೆಸ್ ಭವನಕ್ಕೆ (Congress Bhavana) ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ ಪರಿಷತ್ನಲ್ಲಿ ಇಂದು ಸದ್ದು ಮಾಡಿತು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿಎಸ್.ಅರುಣ್ ಮಾತನಾಡಿ, ಕಾಂಗ್ರೆಸ್ ಭವನಕ್ಕೆ ಸರ್ಕಾರದ ಸಿಎ ಜಾಗ ಕೊಡಲಾಗಿದೆ. ಇದು ಹಗಲು ದರೋಡೆ. ದರ ಕಡಿಮೆ ಮಾಡಿ ಜಾಗ ಕೊಡಲಾಗಿದೆ. ರಾಜ್ಯದಲ್ಲಿ 40 ಕೋಟಿ ಮೌಲ್ಯದ ಜಾಗವನ್ನು 2 ಕೋಟಿ ಮೊತ್ತಕ್ಕೆ ಜಾಗ ಕೊಡಲಾಗಿದೆ. ಯಾವ ಆಧಾರದಲ್ಲಿ ಜಮೀನು ಕಡಿಮೆ ದರಕ್ಕೆ ಕೊಡಲಾಗಿದೆ. ಕೂಡಲೇ ಇದನ್ನ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಎಲ್ಪಿಜಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ – ಬೊಮ್ಮಾಯಿ
ಇದಕ್ಕೆ ಸಚಿವ ಬೈರತಿ ಸುರೇಶ್ ಉತ್ತರ ನೀಡಿ, ಕ್ಯಾಬಿನೆಟ್ನಲ್ಲಿ ನಿರ್ಧಾರ ಮಾಡಿ ಕಾಂಗ್ರೆಸ್ ಭವನಕ್ಕೆ ಜಾಗ ಕೊಡಲಾಗಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ದರಕ್ಕೆ ನೀಡಲಾಗಿದೆ. ನಿಯಮದ ಪ್ರಕಾರ ಜಮೀನು ಕೊಡಲಾಗಿದೆ. ಕಂದಾಯ ಇಲಾಖೆಯಿಂದ ಯಾವುದೇ ವಿರೋಧ ಬಂದಿಲ್ಲ. ಜಮೀನು ಮಂಜೂರಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಕಾಂಗ್ರೆಸ್ ಭವನಕ್ಕೆ ಕೊಟ್ಟಿರೋ ಜಾಗ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ – ದಂಪತಿಗೆ ಗಂಭೀರ ಗಾಯ
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಕಾಂಗ್ರೆಸ್ ಭವನಕ್ಕೆ ಜಮೀನು ಕೊಡಲಾಗಿದೆ. ಇಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಜಮೀನು ಕೊಡಲು ಬರಲ್ಲ ಅಂತ ಅಧಿಕಾರಿಗಳು ಬರೆದಿದ್ದಾರೆ. ನೂರು ಕಡೆ ಜಾಗ ಕೊಡಲು ಬರಲ್ಲ. ಕಡಿಮೆ ದರಕ್ಕೆ ಹೇಗೆ ಜಾಗ ಕೊಡುತ್ತಾರೆ ಎಂದು ವಿರೋಧ ಮಾಡಿದರು. ಛಲವಾದಿ ಮಾತಿಗೆ ಕಾಂಗ್ರೆಸ್ ಸದಸ್ಯ ವಿರೋಧ ವ್ಯಕ್ತಪಡಿಸಿದರು. ಇದು ಚರ್ಚೆ ಆಗಬೇಕು. ಅರ್ಧ ಗಂಟೆಗೆ ಅವಕಾಶ ಕೊಡಿ ಎಂದ ಐವಾನ್ ಡಿಸೋಜಾ ನಾವು ಮಾತಾಡಬೇಕು ಎಂದರು. ಇದನ್ನೂ ಓದಿ: ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ
ಐವಾನ್ ಡಿಸೋಜಾ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಜಮೀನು ಕೊಡುವುದರಲ್ಲಿ ಅನ್ಯಾಯ ಆಗಿದೆ. ವಾಪಸ್ ಪಡೆಯುವಂತೆ ಬಿಜೆಪಿ ಸದಸ್ಯರು ಆಗ್ರಹ ಮಾಡಿದರು. ಸಚಿವ ಬೈರತಿ ಸುರೇಶ್ ಮಾತಾಡಿ, ರಿಯಾಯಿತಿ ದರದಲ್ಲಿ ಸಿಎಸ್ ಜಮೀನು ಕೊಡೋದು ಅನೇಕ ವರ್ಷದಿಂದ ಇದೆ. ಪ್ರಶ್ನೆ ಕೇಳಿದ ಅರುಣ್ ಕೂಡಾ 2 ಸೈಟ್ ಸಂಘಕ್ಕೆ ಪಡೆಯಲಾಗಿದೆ. ಬಿಜೆಪಿ ಕಚೇರಿಗೂ ಜಮೀನು ಕೊಡಲಾಗಿದೆ ಎಂದರು. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
ಇದಕ್ಕೆ ನಾವು ಎಷ್ಟು ಹಣ ಕೊಡಲಾಗಿದೆ. ಬೆಳಗಾವಿಯಲ್ಲಿ 500 ರೂ.ಗೆ ಸೈಟ್ ಕೊಡಲಾಗಿದೆ ಎಂದರು. ಬೈರತಿ ಸುರೇಶ್ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ರೀತಿ ಕಡಿಮೆ ದರಕ್ಕೆ ಪಡೆದಿಲ್ಲ ಅಂತ ಗಲಾಟೆ ಮಾಡಿದರು. ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಇದನ್ನೂ ಓದಿ: ವರ್ಗಾವಣೆ, ಪ್ರಮೋಷನ್ಗಾಗಿ ಗಿಳಿಶಾಸ್ತ್ರದ ಮೊರೆ – 35 ಲಕ್ಷ ಚಿನ್ನಾಭರಣ ಪಡೆದು ಎಸ್ಕೇಪ್ ಆದ ಗಿಳಿರಾಮ!
ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಇದು ಲೂಟಿ. ಜನರಿಗೆ ಮಾಡುತ್ತಿರುವ ಮೋಸ ಅಂತ ಕಿಡಿಕಾರಿದರು. ಬಳಿಕ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸಭಾಪತಿ ಒಪ್ಪಿಗೆ ಕೊಟ್ಟರು. ಇದನ್ನೂ ಓದಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಶೀಘ್ರವೇ ಆರಂಭಿಸಿ – ರಾಜ್ಯ ರೈಲ್ವೆ ಸಮತಿಯಿಂದ ಕೇಂದ್ರಕ್ಕೆ ಒತ್ತಾಯ

