ಬಾಗಲಕೋಟೆ: ಗೆಳತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ (Fight) ಚಾಕು ಇರಿತದವರೆಗೆ ಹೋಗಿ ಓರ್ವನ ಕೊಲೆಯಲ್ಲಿ (Murder) ಅಂತ್ಯವಾಗಿದೆ.
ಬಾಗಲಕೋಟೆ(Bagalkote) ಜಿಲ್ಲೆಯ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದ್ದು, 19 ವರ್ಷದ ರಾಹುಲ್ ಸಪ್ತಸಾಗರ್ ಚಾಕು ಇರಿತದಿಂದ ಮೃತಪಟ್ಟಿದ್ದಾನೆ. ರಾಹುಲ್ ಸ್ನೇಹಿತ ಶ್ರೇಯಸ್ ಚಾಕು ಇರಿದ ಆರೋಪಿಯಾಗಿದ್ದಾನೆ.
ಮೃತ ಯುವಕ ರಾಹುಲ್ ಸಪ್ತಸಾಗರ್, ತೇರದಾಳ ಪಟ್ಟಣದ ಅರಳಿಕಟ್ಟಿ ಗಲ್ಲಿಯ ನಿವಾಸಿಯಾಗಿದ್ದು, ಡಿಪ್ಲೊಮಾ 2ನೇ ವರ್ಷ ಓದುತ್ತಿದ್ದ. ಇಬ್ಬರು ಒಬ್ಬಳ ವಿಚಾರಕ್ಕೆ ಕಿತ್ತಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.
ತೇರದಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

