ಬೆಂಗಳೂರು: ಜಿಬಿಎ (GBA) ವಾರ್ಡ್ ಮೀಸಲಾತಿ ಪಟ್ಟಿ ರಿಲೀಸ್ ಬೆನ್ನಲ್ಲೇ ಮತದಾರರ ಕರುಡು ಪ್ರತಿ ಬಿಡುಗಡೆ ಮಾಡಲಾಗಿದೆ. 5 ನಗರ ಪಾಲಿಕೆಗಳ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು (Draft Voter List) ಬಿಡುಗಡೆ ಮಾಡಲಾಗಿದ್ದು, ಒಟ್ಟು 88,92,528 ಮತದಾರರು ಪಟ್ಟಿಯಲ್ಲಿ ಸೇರಿದ್ದಾರೆ.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾರ್ಚ್ 16ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದೇ ಏಪ್ರಿಲ್ 6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಒಟ್ಟು ನಗರಪಾಲಿಕೆಗಳು – 5
ಒಟ್ಟು ವಾರ್ಡ್ – 369
ಮತದಾರರು – 88,92,528
ಪುರುಷ ಮತದಾರರು – 45,69,752
ಮಹಿಳಾ ಮತದಾರರು – 43,21,143
ಇತರೆ ಮತದಾರರು – 1,635
ಬೆಂಗಳೂರು ಕೇಂದ್ರ: 63 ವಾರ್ಡ್ – 14,25,483 ಮತದಾರರು
ಬೆಂಗಳೂರು ಉತ್ತರ: 72 ವಾರ್ಡ್ – 19,54,206 ಮತದಾರರು
ಬೆಂಗಳೂರು ದಕ್ಷಿಣ: 72 ವಾರ್ಡ್ – 17,44,270 ಮತದಾರರು
ಬೆಂಗಳೂರು ಪೂರ್ವ: 50 ವಾರ್ಡ್ – 10,41,738 ಮತದಾರರು
ಬೆಂಗಳೂರು ಪಶ್ಚಿಮ: 112 ವಾರ್ಡ್ – 27,25,714 ಮತದಾರರು

