ಚಿತ್ರದುರ್ಗ: ದಲಿತ ಸಚಿವನಿಂದಲೇ ದಲಿತರಿಗೆ ಅನ್ಯಾಯವಾಗಿದೆ ಎಂದು ಸಚಿವ ಮಹದೇವಪ್ಪ (HC Mahadevappa) ವಿರುದ್ಧ ಮಾಜಿ ಸಚಿವ ಶಿವನಗೌಡ ನಾಯಕ್ (K. Shivanagouda Naik) ಗುಡುಗಿದರು.
ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಬಿಜೆಪಿ ಎಸ್ಸಿ-ಎಸ್ಟಿ ನಾಯಕರ ಬೃಹತ್ ಜನಾಂದೋಲನದಲ್ಲಿ ಮಾತನಾಡಿದ ಮಾಜಿ ಸಚಿವ ಶಿವನಗೌಡ ನಾಯಕ್ ಅವರ ಭಾಷಣ ತೀವ್ರ ಸಂಚಲನ ಮೂಡಿಸಿತು. ಸ್ವಪಕ್ಷೀಯ ದಲಿತ ಸಚಿವರಿಂದಲೇ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದ ಅವರು, ಸಚಿವ ಹೆಚ್.ಸಿ ಮಹದೇವಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್‌ಡಿಕೆ

ನಾವು ಮದಕರಿ ನಾಯಕರ ವಂಶಸ್ಥರು, ಅನ್ಯಾಯದ ವಿರುದ್ಧ ಬೇಟೆಯಾಡುತ್ತೇವೆ. ದಲಿತ ಸಚಿವ ಮಹಾದೇವಪ್ಪ ಅವರಿಂದಲೇ ನಮಗೆ ಅನ್ಯಾಯವಾಗಿದೆ. ಅವರು ಸಿಕ್ಕರೆ ಕಪಾಳಕ್ಕೆ ಹೊಡಿಬೇಕು ಅನಿಸುತ್ತೆ. ಈ ಹೋರಾಟಕ್ಕೆ ಬರುವ ಮುನ್ನ ಮೀಸಲಾತಿ ಪಡೆದುಕೊಂಡು ಧೀರರಾಗಿ ಬರುತ್ತೇವೆ, ಇಲ್ಲವೇ ಶವವಾಗಿ ಬರುತ್ತೇವೆ ಎಂದು ಮನೆಯಲ್ಲಿ ಹೇಳಿಯೇ ಬನ್ನಿ. ಈ ಹೋರಾಟದಲ್ಲಿ ಶ್ರೀರಾಮುಲು, ಕಾರಜೋಳ ಸತ್ತರೂ ಪರವಾಗಿಲ್ಲ, ಹೋರಾಟ ಮಾತ್ರ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಾವು ಹೇಗಿದ್ದರೂ ಮೊದಲು ಬ್ಯಾಟ್ ಮಾಡುತ್ತಿದ್ದೆವು: ಸೂರ್ಯ
ಇನ್ನೂ ಮಾರ್ಚ್ 22ಕ್ಕೆ ಕೋಟೆನಾಡಿನಿಂದ ಶುರುವಾಗುವ ಈ ಪಾದಯಾತ್ರೆಗೆ ಜೆಡಿಎಸ್ ನಾಯಕರಿಗೂ ಆಹ್ವಾನ ನೀಡಲಾಗಿದೆ. ಮಾರ್ಚ್ 23 ರಂದು ಸದನದ ಒಳಗೂ ಬಿಜೆಪಿ ಪ್ರತಿಭಟನೆ ನಡೆಸಲಿದ್ದು, ಸರ್ಕಾರಕ್ಕೆ ಗಡುವು ನೀಡಲಾಗಿದೆ. ಇದನ್ನೂ ಓದಿ: ಕಲಬುರಗಿ ಅಭಿವೃದ್ಧಿಗೆ 2 ಸಾವಿರ ಕೋಟಿ, ಬಡವರಿಗೆ 2 ಸಾವಿರ ಮನೆ ಹಂಚಿಕೆ: ಡಿಕೆಶಿ
ಒಟ್ಟಿನಲ್ಲಿ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮೀಸಲಾತಿ ಹೋರಾಟದ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಸಜ್ಜಾಗಿದೆ. ಈ ವೇಳೆ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ರಾಜುಗೌಡಸೇರಿದಂತೆ ಶಾಸಕ ಚಂದ್ರಪ್ಪ, ಮಾಜಿ ಶಾಸಕ ರಾಜೀವ್, ಮಾಜಿ ಸಂಸದ ಉಮೇಶ್ ಜಾದವ್ ಇದ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ರಾಜಕೀಯಕ್ಕೆ ಎಂಟ್ರಿ – ಜೆಡಿಯು ಪಕ್ಷಕ್ಕೆ ಸೇರ್ಪಡೆ

