ಸಾಧನೆಗೆ ವಯಸ್ಸು ಅಥವಾ ಗಂಡು ಹೆಣ್ಣೆಂಬ ಬೇಧ ಇಲ್ಲವೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸಾಹಸಿ ಉದ್ಯಮಿ. ಇಂದು ಕರ್ನಾಟಕದೊಳಗಷ್ಟೇ ಅಲ್ಲದೇ, ಹೊರರಾಜ್ಯಗಳಲ್ಲೂ ಶಶಿ ಸೋಪ್ಸ್ ಆ್ಯಂಡ್ ಡೆಟರ್ಜೆಂಟ್ಸ್ ಸಂಸ್ಥೆ (Shashi Soaps And Detergents) ಸದ್ದು ಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ಶ್ರೀಮತಿ ಶಶಿಕಲಾ ಇ.ಆರ್.
ದಾವಣಗೆರೆಯ ಮಹಾರಾಜ ಸೋಪ್ ಇಂಡಸ್ಟ್ರಿಯ ನಿರ್ದೇಶಕಿಯಾಗಿರುವ ಶಶಿಕಲಾ (Shashikala) ಅವರು ರಾಜ್ಯದ ಯಶಸ್ವಿ ಮಹಿಳಾ ಉದ್ಯಮಿ. ರಾಜ್ಯದಲ್ಲಿ ಸೋಪ್ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತಮ್ಮ ಸಂಸ್ಥೆಯಲ್ಲಿ ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಇವರ ಸಂಸ್ಥೆಯ ಉತ್ಪನ್ನಗಳು ಮನೆ ಮಾತಾಗಿವೆ. ಇಷ್ಟೆಲ್ಲಾ ಸಾಧನಗೈದಿರೋ ಶಶಿಕಲಾ ಅವರು ತಮ್ಮ ಯಶೋಗಾಥೆಯಿಂದ ಪ್ರೇರಿತರಾದ ಮಹಿಳೆಯರಿಗೆ ಪ್ರೋತ್ಸಾಹಿಸಲು ತರಬೇತಿ ಮತ್ತು ಸಮಾಲೋಚನೆ ನಡೆಸುತ್ತಾರೆ. ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನಾಥ ಶವಗಳಿಗೆ ಮುಕ್ತಿ ನೀಡೋ ಮಹದೇವಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

ಸೋಪ್ ಉದ್ಯಮದಲ್ಲಿ 25 ವರ್ಷ ಅನುಭವ ಹೊಂದಿರುವ ಶಶಿಕಲಾ ಅವರು ಮೋಟಿವೇಷನಲ್ ಸ್ಪೀಕರ್ ಕೂಡ ಹೌದು. ಯಶಸ್ವಿ ಉದ್ಯಮಿ ಶಶಿಕಲಾ ಅವರಿಗೆ ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕ್ರಿಕೆಟ್ ಪಟು ದೀಪಿಕಾಗೆ ‘ನಾರಿ ನಾರಾಯಣಿ’ ಪ್ರಶಸ್ತಿ

