– ಹಿರೋಷಿಮಾ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ ಹೆಚ್ಚು ಶಕ್ತಿಶಾಲಿ
ವಾಷಿಂಗ್ಟನ್: ವಿಶ್ವದಲ್ಲಿ 3ನೇ ಮಹಾಯುದ್ಧ (World War 3) ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ ಪಾಕಿಸ್ತಾನ – ಅಫ್ಘಾನಿಸ್ತಾನ ಯುದ್ಧ ಮತ್ತೊಂದೆಡೆ ಇಸ್ರೇಲ್-ಅಮೆರಿಕ – ಇರಾನ್ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಯುದ್ದೋನ್ಮಾದ ಹೆಚ್ಚುತ್ತಿದೆ. ಒಬ್ಬರ ಮೇಲೊಬ್ಬರು ಹಗೆಯ ಶಸ್ತ್ರಾಸ್ತ್ರಗಳನ್ನ ಪ್ರಯೋಗಿಸುತ್ತಿದ್ದಾರೆ. ಪರಮಾಣು ಯುದ್ಧವಾದರೆ ಏನಾಗುತ್ತದೆಯೋ ಎಂಬ ಆತಂಕ ಜಗತ್ತಿನ ರಾಷ್ಟ್ರಗಳಲ್ಲಿ ಮನೆಮಾಡಿದೆ.
3ನೇ ಮಹಾಯುದ್ಧ ಊಹಿಸುವುದು ಬಲು ಕಷ್ಟ. ಜಗತ್ತಿನಲ್ಲಿ ಗತಿಸಿದ ಎರಡು ಮಹಾಯುದ್ಧಗಳಿಂದ ಸತ್ತವರ ಸಂಖ್ಯೆ ಅದೆಷ್ಟೋ. ದಶಕಗಳ ಹಿಂದೆ ಅಣುಬಾಂಬ್ ದಾಳಿಗೆ ತುತ್ತಾದ ನಗರಗಳು ಈಗಲೂ ಅದರ ಪರಿಣಾಮ ಎದುರಿಸುತ್ತಿವೆ. ಲಕ್ಷಾಂತರ ಜನರ ಮಾರಣಹೋಮ, ಬದುಕಿದವರ ಡೋಲಾಯಮಾನ ಸ್ಥಿತಿ, ಬಿಕ್ಕಟ್ಟುಗಳ ಸರಮಾಲೆ, ಅಸ್ತಿತ್ವದ ಪ್ರಶ್ನೆ ಎಲ್ಲವೂ ಕಾಡುತ್ತದೆ. ಮಾನವಪ್ರೇರಿತ ದುರಂತಗಳು ಜಗತ್ತನ್ನು ವಿನಾಶದ ಅಂಚಿಗೆ ನೂಕುತ್ತವೆ. ಈಗ ಮತ್ತದೇ ಯುದ್ಧದ ಕಾರ್ಮೋಡದ ಭೀತಿ ಆವರಿಸಿದೆ. ಆದರೀಗ ಇರಾನ್ ಜೊತೆಗೆ ಸಂಘರ್ಷದಲ್ಲಿರುವ ಅಮೆರಿಕ ನ್ಯೂಕ್ಲಿಯರ್ ಸಾಮರ್ಥ್ಯದ ಡೂಮ್ಸ್ ಡೇ ಕ್ಷಿಪಣಿಯನ್ನ ಪರೀಕ್ಷಿಸಿದ್ದು, ಆತಂಕ ತರಿಸಿದೆ.

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಮಂಗಳವಾರ ರಾತ್ರಿ ವಿನಾಶಕಾರಿ ಡೂಮ್ಸ್‌ಡೇ ಕ್ಷಿಪಣಿಯನ್ನ (Doomsday Missile) ಅಮೆರಿಕ ಪರೀಕ್ಷಿಸಿದೆ. ಮಿನಿಟ್‌ಮ್ಯಾನ್-III ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಾಂಟಾ ಬಾರ್ಬರಾ ಬಳಿಯ ವ್ಯಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ರಾತ್ರಿ 11 ಗಂಟೆಗೆ ಉಡಾಯಿಸಿದೆ. ಇದನ್ನೂ ಓದಿ: ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್ ಮಾರ್ಮಿಕ ಸಂದೇಶ
ಇದು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ (Nuclear Bomb) ಹೆಚ್ಚು ಶಕ್ತಿಶಾಲಿಯಾಗಿದೆ. ಆ ಪರಮಾಣು ಬಾಂಬ್‌ಗಿಂತಲೂ 20 ಪಟ್ಟು ಹೆಚ್ಚು ಶಕ್ತಿಶಾಲಿ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕ ಹೇಳಿದೆ. ಇದು 1970 ರ ದಶಕದಿಂದ ಸೇವೆಯಲ್ಲಿರುವ ಅಮೆರಿಕಾದ ಮುಖ್ಯ ಭೂಮಿ-ಆಧಾರಿತ ಪರಮಾಣು ಕ್ಷಿಪಣಿಯಾಗಿದೆ. ಇದರ ಶ್ರೇಣಿ ಸುಮಾರು 13,000 ಕಿ.ಮೀ.ಗಿಂತ ಹೆಚ್ಚಿದೆ.

ಮಿನಿಟ್‌ಮ್ಯಾನ್ III ಕ್ಷಿಪಣಿ ಸುಮಾರು 6,000 ಮೈಲಿಗಳ (9,656 ಕಿಮೀ) ವ್ಯಾಪ್ತಿ ಹೊಂದಿದ್ದು, ಗಂಟೆಗೆ 15,000 ಮೈಲಿ (24,140 ಕಿಮೀ) ವೇಗದಲ್ಲಿ ಚಲಿಸಿ ಖಂಡಾಂತರ ಗುರಿಯನ್ನು ತಲುಪುತ್ತದೆ. ಮಿನಿಟ್‌ಮ್ಯಾನ್ III ಕ್ಷಿಪಣಿಯ ಮೊದಲ ಪರೀಕ್ಷೆಯನ್ನು 2025 ರಲ್ಲಿ ಮೊದಲಬಾರಿಗೆ ನಡೆಸಲಾಗಿತ್ತು. ಇದನ್ನೂ ಓದಿ: ಭಾರತದಿಂದ ವಾಪಸ್ ಆಗ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ – 87 ಮಂದಿ ಸಾವು

