ಕೊಲಂಬೊ: ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ್ದಾರೆ.
ಐರಿಸ್ ದೇನಾ ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಮೌಡ್ಜ್ ಕ್ಲಾಸ್ ಫ್ರಿಗೇಟ್ ಆಗಿರುವ ಐರಿಸ್ ದೇನಾ 2024 ರಲ್ಲಿ ಭಾರತಕ್ಕೆ ಬಂದಿದ್ದು, ಬಹುಪಕ್ಷೀಯ ನೌಕಾ ಅಭ್ಯಾಸ ಮಿಲನ್‌ನಲ್ಲಿ ಭಾಗವಹಿಸಿತ್ತು.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜಲಾಂತರ್ಗಾಮಿ ದಾಳಿಯನ್ನು ದೃಢಪಡಿಸಿದ್ದಾರೆ. ಅಂತರರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನಿನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದು ಮುಳುಗಿಸಿತು ಎಂದು ಹೆಗ್ಸೆತ್ ತಿಳಿಸಿದ್ದಾರೆ.

