ವಾಷಿಂಗ್ಟನ್: ಮುಂದಿನ 24-48 ಗಂಟೆಗಳಲ್ಲಿ ಇರಾನ್ (Iran) ಮೇಲಿನ ನಮ್ಮ ದಾಳಿ ಅತ್ಯಂತ ಭೀಕರವಾಗಿರಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಬಗ್ಗೆ ಮಾತನಾಡಿದ ಅವರು. ಇರಾನ್ ಆಗಸದ ಮೇಲೆ ಇಸ್ರೇಲ್ ಹಾಗೂ ನಮ್ಮ ಪಡೆಗಳು ಸಂಪೂರ್ಣ ಹಿಡಿತ ಸಾಧಿಸಿವೆ. ಹೀಗಾಗಿ ಮುಂದಿನ 24-48 ಗಂಟೆಗಳಲ್ಲಿ ಇರಾನ್ ಮೇಲಿನ ನಮ್ಮ ದಾಳಿ ಅತ್ಯಂತ ಭೀಕರವಾಗಿರಲಿದೆ ಎಂದಿದ್ದಾರೆ. ಇದನ್ನೂ ಓದಿ: ಇರಾನ್ ವಿರುದ್ಧ ಕಾರ್ಯಾಚರಣೆಗೆ ವಾಯುನೆಲೆ ಕೊಡಲ್ಲ ಎಂದ ಸ್ಪೇನ್ ಜೊತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಟ್ರಂಪ್
ಇನ್ನು, ಇರಾನ್ ಮೇಲೆ ಇಸ್ರೇಲ್ ಜೊತೆ ಸೇರಿ ಆಕ್ರಮಣ ಮಾಡಿ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಲೆಕ್ಕಾಚಾರ ತಪ್ಪಿದಂತೆ ಕಾಣ್ತಿದೆ. ದಾಳಿಯ ಆರಂಭದ 2 ದಿನಗಳಲ್ಲಿ ಟ್ರಂಪ್‌ಗೆ ಇದ್ದ ಜೋಶ್ ಇಳಿದಂತೆ ಕಾಣ್ತಿದೆ. ಯಾಕೆಂದರೆ, ಸ್ಪೇನ್ ಕೈಕೊಟ್ಟಿದೆ, ಬ್ರಿಟನ್ ಉಲ್ಟಾ ಹೊಡೆದಿದೆ. ಮಾತ್ರವಲ್ಲದೆ, ನ್ಯಾಟೋ ಕೂಟದಲ್ಲಿ ಒಡಕ್ಕುಂಟಾಗಿದೆ. ನಿನ್ನೆ ಸ್ಪೇನ್ ಮೇಲೆ ವ್ಯಾಪಾರ ನಿರ್ಬಂಧವನ್ನು ಅಮೆರಿಕ ಹೇರಿದ್ದ ಬೆನ್ನಲ್ಲೇ ಟ್ರಂಪ್ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸಲು ಸಾಧ್ಯವಿಲ್ಲ ಅಂತ ಸ್ಪೇನ್ ಹೇಳಿದೆ.
ಇತ್ತ ಟರ್ಕಿ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ನ್ಯಾಟೋ ಏರ್ ಡಿಫೆನ್ಸ್ ಸಿಸ್ಟಂ ಹೊಡೆದುಹಾಕಿದೆ. ನಿನ್ನೆಗಿಂತ ಟ್ರಂಪ್ ಇವತ್ತು ಸ್ವಲ್ಪ ಸಪ್ಪೆಯಾಗಿದ್ದಾರೆ. ಇರಾನ್ ಅನ್ನು ಮತ್ತೊಂದು ವಿಯೆಟ್ನಾಂ, ವೆನಿಜುವೆಲಾ ಹಾಗೂ ಅಫ್ಘಾನಿಸ್ತಾನವನ್ನಾಗಿ ಮಾಡಲು ಹೊರಟ್ಟಿದ್ದ ಟ್ರಂಪ್‌ಗೆ ತಾನು ಅಂದುಕೊಂಡಂತೆ ಇರಾನ್ ಇಲ್ಲ ಅಂತ ಗೊತ್ತಾಗಿದೆ ಎನ್ನಲಾಗಿದೆ.
ಇನ್ನು, ಇರಾನ್ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಚೀನಾ ಆಗ್ರಹಿಸಿದೆ. ಕೆನಡಾ ಪಿಎಂ ಮಾರ್ಕ್ ಕಾರ್ನೆ ಕೂಡ ಟ್ರಂಪ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇರಾನ್ ಮೇಲಿನ ದಾಳಿ ಸಂಬಂಧ ತನ್ನ ಮಿತ್ರರಾಷ್ಟ್ರಗಳ ಸಲಹೆಯನ್ನು ಟ್ರಂಪ್ ಪಡೆದಿಲ್ಲ ಅಂದಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸೋದಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಹೇಳಿದ್ದಾರೆ. ಈ ಮಧ್ಯೆ, ಇರಾನ್ ಮೇಲಿನ ಯುದ್ಧ ಸಾರಿದ ಅಮೆರಿಕಕ್ಕೆ ಕೆಲವೊಂದು ಆತಂಕ ಎದುರಾಗಿದೆ.ಇದನ್ನೂ ಓದಿ: ಇಸ್ರೇಲ್-ಇರಾನ್ ಯದ್ಧ; ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಜನ

