ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ನಾನು ದುಬೈನಲ್ಲಿ (Dubai) ಸೇಫ್ ಆಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಯೋ ಯೋ ಹನಿ ಸಿಂಗ್ (Honey Singh) ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಸಂಘರ್ಷದಲ್ಲಿ ಅಬುಧಾಬಿ, ದುಬೈ, ಕತಾರ್ ಮತ್ತು ಕುವೈತ್ನಲ್ಲಿ ಸ್ಫೋಟ ಸಂಭವಿಸುತ್ತಿವೆ. ಇದರಿಂದ ಭಯದ ವಾತಾವರಣ ಹೆಚ್ಚಾಗುತ್ತಿದೆ. ಈ ನಡುವೆ ಹನಿ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಜೊತೆಗೆ ತಾವು ಸೇಫ್ ಇರುವುದಾಗಿ ತಿಳಿಸಿದ್ದಾರೆ. ದುಬೈ ನಗರ ಸುರಕ್ಷಿತವಾಗಿ, ಶಾಂತವಾಗಿದೆ. ಆನ್ಲೈನ್ನಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಸೇಫ್ ಆಗಿದ್ದೀನಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Khamenei Funeral | ಇಂದು ಮಧ್ಯರಾತ್ರಿ 12ರಿಂದ ಅಲಿ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭ

ಇದಕ್ಕೂ ಮೊದಲು, ಹನಿ ಸಿಂಗ್ ತಮ್ಮ ರೆಕಾರ್ಡಿಂಗ್ ಸ್ಟುಡಿಯೋದ ವೀಡಿಯೊವನ್ನು ಹಂಚಿಕೊಂಡಿದ್ದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಅನೇಕರನ್ನು ಕಳವಳಕ್ಕೆ ದೂಡಿದೆ. ಇಂದು ಬೆಳಿಗ್ಗೆ ಅಭಿಜೀತ್ ಭಟ್ಟಾಚಾರ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮಗನನ್ನು ದುಬೈನಿಂದ ಸುರಕ್ಷಿತವಾಗಿ ಮನೆಗೆ ಕರೆತರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಮಧ್ಯಪ್ರಾಚ್ಯ ಮತ್ತು ಯುಎಇಯಲ್ಲಿ ಸಿಲುಕಿಕೊಂಡಿದ್ದಾರೆ.

