ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು 6ನೇ ಗ್ಯಾರಂಟಿ ನೀಡಲು ಮುಂದಾಗಿದ್ದಾರೆ. ಓಸಿ ಇಲ್ಲದೇ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗದೇ ಪರದಾಡುತ್ತಾ ಇದ್ದವರಿಗೆ ನಾಳೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ.
3000 ಚದರ ಅಡಿ ನಿವೇಶನಗಳಿಗೆ ಓಸಿ ವಿನಾಯಿತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸರ್ಕಾರ ಓಸಿ ವಿನಾಯಿತಿ ನೀಡಿ ವಿದ್ಯುತ್ ನೀರಿನ ಸಂಪರ್ಕಕ್ಕೆ ಅನುಕೂಲ ಮಾಡಿಕೊಡಲಿದೆ ಎನ್ನಲಾಗಿದೆ. ಓಸಿ ವಿನಾಯಿತಿ ಸಿಕ್ಕಿದ್ರೆ 40×60 ಅಳತೆಯ ಲಕ್ಷಾಂತರ ಕಟ್ಟಡಗಳಿಗೆ ಅನುಕೂಲವಾಗಲಿದೆ.
ಒನ್ ಟೈಂ ಓಸಿ ವಿನಾಯ್ತಿ ಈಗಾಗಲೇ ನಿರ್ಮಾಣ ಆಗಿರುವ ಕಟ್ಟಡಗಳಿಗೆ ಅನ್ವಯ ಆಗಲಿದೆ. ಮುಂದೆ ನಿರ್ಮಾಣವಾಗುವ ಕಟ್ಟಡಗಳಿಗೆ ಓಸಿ ವಿನಾಯ್ತಿ ಅನ್ವಯ ಆಗಲ್ಲ.

