ಸೌತ್‌ನ ಕ್ಯೂಟ್ ಕಪಲ್ ಎಂದೇ ಕರೆಯುವ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಈಗ ಈ ಜೋಡಿ ತಮ್ಮ ಮಾನವೀಯ ಗುಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ.
View this post on Instagram
ಮದುವೆಯಾದ ಬಳಿಕ ವಿಜಯ್ ಮೊದಲ ಬಾರಿಗೆ ಪತ್ನಿ ರಶ್ಮಿಕಾ ಜೊತೆ ತಮ್ಮ ಹುಟ್ಟೂರಾದ ತೆಲಂಗಾಣದ ನಾಗರ್ಕುರ್ಣೂಲ್ ಜಿಲ್ಲೆಯ ತಮ್ಮನಪೇಟೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ವಿದ್ಯಾರ್ಥಿವೇತನ (Scholarship) ಘೋಷಿಸುವ ಮೂಲಕ ಮದುವೆಯ ಸಂಭ್ರಮ ಸಾರ್ಥಕಗೊಳಿಸಿದ್ದಾರೆ. ಇದನ್ನೂ ಓದಿ: ಮೋಜು, ಮಸ್ತಿ, ಡ್ಯಾನ್ಸ್ ಅದೊಂದು ಅದ್ಭುತ ರಾತ್ರಿ – ಸಂಗೀತ್ ಫೋಟೋ ಹಂಚಿಕೊಂಡ ವಿಜಯ್, ರಶ್ಮಿಕಾ
ಈ ಗ್ರಾಮದ ವ್ಯಾಪ್ತಿಗೆ ಬರುವ ಒಟ್ಟು 40 ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಆಯ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ನೀಡೋದಾಗಿ ಘೋಷಿಸಿದ್ದಾರೆ. ಇದನ್ನು ವಿಜಯ್ ದೇವರಕೊಂಡ ಟ್ರಸ್ಟ್ ಮೂಲಕ ನೀಡೋದಾಗಿ ವಿಜಯ್ ಅನೌನ್ಸ್ ಮಾಡಿದ್ದಾರೆ.

ಮದುವೆಯಲ್ಲಿ ಪರಂಪರೆ ಕಾಪಾಡಿಕೊಂಡ ವಿಜಯ್ – ರಶ್ಮಿಕಾ ಇಲ್ಲಿವರೆಗೂ ಸರಳತೆಗೆ ಸಾಕ್ಷಿಯಾಗಿದ್ರು. ಮದುವೆಯ ಬಳಿಕ ವಿಜಯ್ ಪೂರ್ವಿಕರ ಸಂಪ್ರದಾಯದಂತೆ ಮೂಲ ಬೇರಿರುವ ಹುಟ್ಟೂರಿನ ನಿವಾಸಕ್ಕೆ ಪ್ರವೇಶಿಸಿ ಅಲ್ಲಿಯೇ ರಶ್ಮಿಕಾಗೆ ಮನೆತುಂಬಿಸಿಕೊಳ್ಳುವ ಶಾಸ್ತ್ರವನ್ನೂ ಮಾಡಿದ್ದಾರೆ. ಬಳಿಕ ಸಾರ್ವಜನಿಕ ಸ್ಥಳದಲ್ಲೇ ಸತ್ಯನಾರಾಯಣ ಪೂಜೆ ನಡೆಸಿ ಗ್ರಾಮಸ್ಥರಿಗೆಲ್ಲ ಊಟ ಹಾಕಿದ್ದಾರೆ ನೂತನ ದಂಪತಿ. ಇದನ್ನೂ ಓದಿ: ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್-ರಶ್ಮಿಕಾ

ಬಳಿಕ ಗ್ರಾಮದಲ್ಲಿ ಓದುತ್ತಿರುವ ಪ್ರತಿಭಾವಂತ ಮಕ್ಕಳಿಗೆ ಸ್ಕಾಲರ್‌ಶಿಪ್ ಘೋಷಿಸುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಗೃಹಲಕ್ಷ್ಮಿಯಾಗಿ ಆಗಮಿಸಿರುವ ಈ ಶುಭಗಳಿಗೆಯಲ್ಲಿ ಒಳ್ಳೆಯ ಕೆಲಸಕ್ಕೆ ಮುಂದಾಗಿರೋದು ಇಡೀ ಗ್ರಾಮಸ್ಥರಿಗೆ ಖುಷಿ ತಂದಿದೆ, ಜೊತೆಗೆ ವಿಜಯ್ ದೇವರಕೊಂಡ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಇದನ್ನೂ ಓದಿ: ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್

