Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಕಲಿಸಬೇಕು: ಸಿದ್ದರಾಮಯ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಕಲಿಸಬೇಕು: ಸಿದ್ದರಾಮಯ್ಯ

Bengaluru City

ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಕಲಿಸಬೇಕು: ಸಿದ್ದರಾಮಯ್ಯ

Public TV
Last updated: February 28, 2026 9:03 pm
Public TV
Share
3 Min Read
Siddaramaiah 1 4
SHARE

ಬೆಂಗಳೂರು: ಶಿಕ್ಷಕರು (Teachers) ಮಕ್ಕಳಿಗೆ (Students) ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ, ಧನ್ಯತಾ ಸಮರ್ಪಣೆ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.

ಶಿಕ್ಷಕರು ದೇಶದ ಭವಿಷ್ಯ ರೂಪಿಸುವವರು. ಒಂದು ಕಾಲದಲ್ಲಿ ಶಿಕ್ಷಣ 12-15% ಮಾತ್ರ ದೇಶದಲ್ಲಿ ಇತ್ತು. 74% ಇವತ್ತು ಸಾಕ್ಷರತೆ ಇದೆ. ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಸಮಸ್ಯೆಗೆ ಸ್ಪಂದಿಸೋ ಶಿಕ್ಷಣ ಸಿಕ್ಕಿದೆಯಾ ಅಂತ ನೋಡಬೇಕು. ವ್ಯವಸ್ಥೆ ಪರಿಣಾಮವಾಗಿ ಹೀಗೆ ಆಗಿದೆ. ಜಾತಿ ವ್ಯವಸ್ಥೆ ಸಮಾಜದಲ್ಲಿ ಭದ್ರವಾಗಿ ನೆಲೆಯಾಗಿದೆ. ಹೀಗಾಗಿ ಶಿಕ್ಷಣದಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ನೆಹರು ಅವರು ತರಗತಿಯಲ್ಲಿ ಭವಿಷ್ಯ ರೂಪಿತ ಆಗೋದು ಅಂತ ಹೇಳಿದ್ದರು. ಶಿಕ್ಷಣ ಪಡೆದ ವ್ಯಕ್ತಿ ಎಂತಹ ಶಿಕ್ಷಣ ಪಡೆಯಬೇಕು ಅಂತ ಯೋಚನೆ ಮಾಡಬೇಕು. ಸಂವಿಧಾನದಲ್ಲಿ ನಮಗೆ ಎಂತಹ ಶಿಕ್ಷಣ ಸಿಗಬೇಕು ಅಂತ ಹೇಳುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರಿಯಕರನೂ ನೇಣಿಗೆ ಶರಣು

CM Siddaramaiah DK Shivakumar

ವೈಜ್ಞಾನಿಕ, ವೈಚಾರಿಕ ಶಿಕ್ಷಣ ಸಿಗಬೇಕು. ನಮ್ಮದು ಜಾತಿ ವ್ಯವಸ್ಥೆ, ಮೌಢ್ಯಗಳಿಂದ ಕೂಡಿರೋ ಸಮಾಜ. ಕಂದಾಚಾರ ಆಚರಣೆ ಮಾಡೋ ಸಮಾಜ. ಇದೆಲ್ಲವನ್ನೂ ದೂರ ಮಾಡೋ ಶಿಕ್ಷಣ ಪಡೆಯಬೇಕು. ಸಮಾಜ ಬದಲಾವಣೆ ಆಗಬೇಕು. ಬದಲಾವಣೆ ಆಗಬೇಕಾದ್ರೆ ಅಸಮಾನತೆ ಹೋಗಬೇಕು. ಅಂಬೇಡ್ಕರ್ ಈ ಬಗ್ಗೆ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಹೇಳಿದ್ದರು. ಸ್ವಾತಂತ್ರ‍್ಯ ಬಂದಿದೆ ನಮಗೆ. ಸ್ವಾತಂತ್ರ‍್ಯ ಯಶಸ್ವಿಯಾಗಬೇಕಾದ್ರೆ ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ‍್ಯ ಸಿಗಬೇಕು ಅಂತ ಅಂಬೇಡ್ಕರ್ ಹೇಳಿದ್ದರು. ಶಿಕ್ಷಕರು ವೈಚಾರಿಕತೆ, ವೈಜ್ಞಾನಿಕತೆ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಸಾಮಾನ್ಯರನ್ನ ಅಸಾಮಾನ್ಯರನ್ನಾಗಿ ಮಾಡೋ ಶಕ್ತಿ ಇರೋದು ಶಿಕ್ಷಕರಿಗೆ ಅಂತ ಅಬ್ದುಲ್ ಕಲಾಂ ಹೇಳಿದ್ರು. ಹುಟ್ಟಿನಿಂದ ನಾವು ದಡ್ಡರಲ್ಲ. ಕೆಳವರ್ಗದಿಂದಲೂ, ಸಾಮಾನ್ಯ ವರ್ಗದಿಂದ ಶಿಕ್ಷಕರು ಬಂದಿದ್ದಾರೆ. ದೇಶವನ್ನು ಸುಭದ್ರವಾಗಿ ನಿರ್ಮಿಸೋ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು. ಇದನ್ನೂ ಓದಿ: ಅಬುಧಾಬಿ, ದೋಹಾ, ರಿಯಾದ್ ಮೇಲೆ ಇರಾನ್‌ ದಾಳಿ – ದುಬೈನಲ್ಲೂ ಸ್ಫೋಟ

3ಹೆಚ್ ಮಹತ್ವದ ಬಗ್ಗೆ ಗಾಂಧಿ ಹೇಳ್ತಾರೆ. ಬುದ್ದಿ, ಕರುಣೆ, ಕೌಶಲ್ಯದ ಬಗ್ಗೆ ಗಾಂಧಿ ಹೇಳ್ತಾರೆ. ಈ ಮೂರು ಮಿಡಿತ ಆದಾಗ ಮಾತ್ರ ವಿಕಾಸ ಆಗೋಕೆ ಸಾಧ್ಯ. ಯಾವುದೇ ಜಾತಿ, ಧರ್ಮ, ಭಾಷೆ ಮಾತಾಡೋದನ್ನ ನಾನು ಪ್ರೀತಿ ಮಾಡ್ತೀನಿ. ಶಿಕ್ಷಕರನ್ನ ನಾನು ಹೆಚ್ಚು ಗೌರವದಿಂದ ಕಾಣುತ್ತೇನೆ. ಶಾಲಾ ಶಿಕ್ಷಕರಿಗೆ ಹೆಚ್ಚು ಗೌರವ ಕೊಡುತ್ತೇನೆ. ಎಂತಹ ಸ್ಥಾನದಲ್ಲಿ ಇದ್ದೀವಿ ನೋಡಿ ನಾವು ಎಂದರು. ಇದನ್ನೂ ಓದಿ: ಎರಡನೇ & 4ನೇ ಶನಿವಾರ ರಜೆ ಕೊಡಿ – ಪ್ರಾಥಮಿಕ ಶಿಕ್ಷಕರಿಂದ ಸಿಎಂಗೆ ಮನವಿ

ರಾಜಪ್ಪ ಅನ್ನೋ ಮೇಷ್ಟ್ರು ಇಲ್ಲದೇ ಹೋಗಿದ್ರೆ ನಾನು ಲಾಯರ್ ಆಗ್ತಿರಲಿಲ್ಲ. ಸಿಎಂ ಕೂಡಾ ಆಗ್ತಾ ಇರಲಿಲ್ಲ ಗೌರವಕ್ಕೆ ಅರ್ಹವಾದ ವ್ಯಕ್ತಿ ಯಾರು ಅಂದರೆ ಶಿಕ್ಷಕರು. ಶಿಕ್ಷಕರನ್ನ ಪ್ರೀತಿ, ಗೌರವದಿಂದ ಕಾಣ್ತೀನಿ .ದೊಡ್ಡ ಬೇಡಿಕೆ ಪಟ್ಟಿ ಸಂಘ ಕೊಟ್ಟಿದೆ. ಕೆಲವು ಈಡೇರಿಕೆ ಮಾಡಿದ್ದೇವೆ. ಇನ್ನು ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಕೆ ಮಾಡ್ತೀನಿ. ಹಿಂದೆ ನಾನು ಹಣಕಾಸು ಮಂತ್ರಿ ಆದಾಗ ಗೋವಿಂದಗೌಡ್ರಿಗೆ ಪ್ರತಿ ವರ್ಷ 20 ಸಾವಿರ ಶಿಕ್ಷಕರ ನೇಮಕ ಮಾಡೋಣ ಅಂತ ಹೇಳಿದ್ದೆ. 5 ವರ್ಷದಲ್ಲಿ 1 ಲಕ್ಷ ಹುದ್ದೆ ಭರ್ತಿ ಮಾಡಿದ್ವಿ.ಸರ್ಕಾರಿ ನೌಕರರ ಪೈಕಿ 50% ನೀವೇ ಇದ್ದೀರಾ. 6 ಮತ್ತು 7ನೇ ವೇತನ ಜಾರಿ ಮಾಡಿದ್ದೇನೆ. ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪದವೀಧರ ಶಿಕ್ಷಕರಿಗೆ ಬಡ್ತಿ ವೇತನ ಕೊಡೋ ಪ್ರಯತ್ನ ಮಾಡುತ್ತೇನೆ ಅಂತ ಭರವಸೆ ಕೊಟ್ಟರು. ಇದನ್ನೂ ಓದಿ: ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ – 96.87% ಹಾಜರಾತಿ ದಾಖಲು

CM Siddaramaiah

 

ಮೌಢ್ಯವನ್ನ ಶಿಕ್ಷಕರು ಆಚರಣೆ ಮಾಡಬಾರದು. ನಿಮ್ಮ ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ನಡವಳಿಕೆ ಶುದ್ಧವಾಗಿ ಇರಬೇಕು. ಪ್ರಾಥಮಿಕ ಶಿಕ್ಷಕರ ನಡವಳಿಕೆ ಮಕ್ಕಳು ಪಾಲನೆ ಮಾಡುತ್ತಾರೆ. ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕತೆ ಕಲಿಸಿ. ಆಗ ಸುಭದ್ರ ದೇಶ ನಿರ್ಮಾಣ ಆಗುತ್ತದೆ.ನಿಮ್ಮ ಬೇಡಿಕೆ ಈಡೇರಿಸೋಣ. ಆದ್ರೆ ನಿಮ್ಮ ಕೆಲಸ ನೀವು ಮಾಡಿ. ನೀವು ಏನು ಮಾಡಬೇಕು ಅಂತ ಹೇಳೋಕೆ ಬಂದಿದ್ದೇವೆ. ಎನ್‌ಪಿಎಸ್ – ಓಪಿಎಸ್ ಬಗ್ಗೆ ಚರ್ಚೆ ಮಾಡಿ, ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಇಸ್ರೇಲ್-ಅಮೆರಿಕ ದಾಳಿ – ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿ 40 ಮಂದಿ ಸಾವು

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಂಘದಿಂದ ಬೆಳ್ಳಿ ಗಧೆ ಕೊಟ್ಟು ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ ಸೇರಿ ಹಲವರು ಉಪಸ್ಥಿತಿ ಇದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಕುಸ್ತಿಯ ಗುದ್ದಾಟ ಬಜೆಟ್ ನಂತರ ಅಂತಿಮ ಘಟ್ಟಕ್ಕೆ ತಲುಪಲಿದೆ: ಬೊಮ್ಮಾಯಿ

TAGGED:bengalurucongresseducationsiddaramaiahstudentsteachersಕಾಂಗ್ರೆಸ್ಬೆಂಗಳೂರುಮಕ್ಕಳುಶಿಕ್ಷಕರುಶಿಕ್ಷಣಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Amir Nasirzadeh
Latest

ಇಸ್ರೇಲ್‌ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮೀರ್ ಬಲಿ?

Public TV
By Public TV
48 minutes ago
P.V.Sindhu stranded at Dubai airport
Latest

ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು

Public TV
By Public TV
1 hour ago
Whitefield Water Sump Death
Bengaluru City

ನೀರಿನ ಸಂಪ್ ಸ್ವಚ್ಛ ಮಾಡಲು ಇಳಿದ ಮೂವರು ದುರ್ಮರಣ

Public TV
By Public TV
1 hour ago
pakistan
Cricket

ಟಿ20 ವಿಶ್ವಕಪ್‌ನಿಂದ ಪಾಕ್‌ ಔಟ್‌ – ನ್ಯೂಜಿಲೆಂಡ್‌ ಸೆಮಿಗೆ

Public TV
By Public TV
1 hour ago
Srisailam Ugadi Mahotsav
Latest

ಮಾ.16ರಿಂದ 20ರವರೆಗೆ ಶ್ರೀಶೈಲ ಯುಗಾದಿ ಉತ್ಸವ – 10 ದಿನ 4 ಹಂತಗಳಲ್ಲಿ ಸ್ಪರ್ಶ ದರ್ಶನಕ್ಕೆ ಅವಕಾಶ

Public TV
By Public TV
2 hours ago
vinay kulkarni
Bengaluru City

ಜೈಲಿನಿಂದ ರಿಲೀಸ್ ಆದ ಶಾಸಕ ವಿನಯ್ ಕುಲಕರ್ಣಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?