Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕವನ್ನು ಪಾಪರ್‌ ಮಾಡಲು ಮುಂದಾದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕರ್ನಾಟಕವನ್ನು ಪಾಪರ್‌ ಮಾಡಲು ಮುಂದಾದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್

Bengaluru City

ಕರ್ನಾಟಕವನ್ನು ಪಾಪರ್‌ ಮಾಡಲು ಮುಂದಾದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್

Public TV
Last updated: February 28, 2026 4:48 pm
Public TV
Share
3 Min Read
R Ashok
SHARE

-‌ ಅಂಗನವಾಡಿ ಮಕ್ಕಳಿಗೆ 50 ಪೈಸೆಗೆ ತರಕಾರಿ ಅಂತ ಸರ್ಕಾರಕ್ಕೆ ತರಾಟೆ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು (Karnataka) ಪಾಪರ್‌ ಮಾಡಲು ಮುಂದಾಗಿದೆ. ಇದರಿಂದಾಗಿ ಎಲ್ಲರೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ಸಿಎಂ ಕುರ್ಚಿ ಕಾಳಗ, ಅನುದಾನ ಕೊರತೆ ಮೊದಲಾದ ಸಾವಿರಾರು ಸಮಸ್ಯೆಗಳಲ್ಲೇ ಕಾಂಗ್ರೆಸ್ ಸರ್ಕಾರದ ಸಾವಿರದ ದಿನಗಳು ಕಳೆದುಹೋಗಿವೆ. ಸರ್ಕಾರಿ ಆಸ್ಪತ್ರೆಗಳಿಗಾಗಿ ಇನ್ನೂ ಅಗತ್ಯ ಔಷಧಿಗಳನ್ನು ಖರೀದಿ ಮಾಡಿಲ್ಲ. ಈ ನಡುವೆ, ಸ್ಥಳೀಯ ವೈದ್ಯಾಧಿಕಾರಿಗಳು ಔಷಧಿ ಖರೀದಿಸುವುದು ಬೇಡ. ಸರ್ಕಾರದಿಂದಲೇ ಖರೀದಿಸುವವರೆಗೆ ಕಾಯಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ಮಾರ್ಚ್ 13 ರಿಂದ ಸರ್ಕಾರಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದರು‌. ಇದನ್ನೂ ಓದಿ: ಹೊರೆ ಆಗುತ್ತೆ ಅಂದ್ರೆ ಗ್ಯಾರಂಟಿ ಕೊಡೋ ಮುಂಚೆನೇ ಚಿಂತನೆ ಮಾಡಬೇಕಾಗಿತ್ತು: ಡಿಕೆ ಸುರೇಶ್‌

ಆರೋಗ್ಯ ಇಲಾಖೆಯೇ ಅನಾರೋಗ್ಯ ಪೀಡಿತವಾಗಿದ್ದು, ಬಜೆಟ್‌ನಲ್ಲಿ 40% ಅನುದಾನ ಕಡಿತವಾಗಿದೆ. ಗ್ಯಾರಂಟಿಗಳು ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಎಲ್ಲ ಇಲಾಖೆಗಳಲ್ಲಿ ಅನುದಾನ ಕೊರತೆಯಾಗಿದೆ. ಇ-ಖಾತೆಯನ್ನು ಉಚಿತವಾಗಿ ಸರ್ಕಾರದಿಂದಲೇ ಮಾಡಬೇಕಿತ್ತು. ಅದನ್ನು ಬಿಟ್ಟು ಲಂಚಕ್ಕೆ ದಾರಿ ಮಾಡಿದ್ದಾರೆ. ಇ-ಖಾತಾ ಮಾಡಿಸಲು 30,000 ರೂ. ಲಂಚ ನೀಡಬೇಕಿದೆ. ನಿಗದಿತ ಗುರಿಗಿಂತ 20% ನಷ್ಟು ಆದಾಯ ಖೋತಾ ಆಗಿದೆ. ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿ ಆರಂಭಿಸಲು ಕೋಟಿಗಟ್ಟಲೆ ಹಣ ನೀಡಬೇಕಿದೆ. ಮಹಾತ್ಮ ಗಾಂಧಿಯ ಆದರ್ಶಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ನಾಯಕರು ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

siddaramaiah d.k.shivakumar oath

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಸಚಿವರ ಬದಲಾವಣೆಯ ಸುದ್ದಿ ಬಂದರೆ ಸಚಿವರು ಹೈಕಮಾಂಡ್‌ಗೆ ಹಣ ನೀಡಬೇಕಾಗುತ್ತದೆ. ಡಿ.ಕೆ.ಶಿವಕುಮಾರ್, ಜಾರ್ಜ್ ಮೊದಲಾದವರನ್ನು ಚುನಾವಣೆಗೆ ನೇಮಿಸಲಾಗಿದೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ. ಇದರ ಪರಿಣಾಮ ಪ್ರತಿಭಟನೆಯ ಪರ್ವ ಶುರುವಾಗಿದೆ. ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೊಕ್ಕಸ ಖಾಲಿಯಾಗಿರುವುದರಿಂದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ತರಕಾರಿಗೆ 50 ಪೈಸೆ ನೀಡುತ್ತಿದ್ದಾರೆ. ಅಂದರೆ ಹತ್ತು ಮಕ್ಕಳಿಗೆ 5 ರೂ. ನೀಡಲಾಗುತ್ತದೆ. ಅರ್ಧ ಕೆಜಿ ತರಕಾರಿಯನ್ನು ಹತ್ತು ಮಕ್ಕಳಿಗೆ ನೀಡಬೇಕಾಗುತ್ತದೆ. ಆದರೆ, ಒಂದು ಕೆಜಿ ತರಕಾರಿಗೆ ಕನಿಷ್ಠ 40 ರೂ. ಇದೆ. ಗ್ಯಾರಂಟಿಗಳಿಂದಾಗಿ ಹಣವಿಲ್ಲದೆ ಇಷ್ಟು ದರದಲ್ಲಿ ತರಕಾರಿ ಖರೀದಿ ಮಾಡಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಹಿಂದಿನ ಯಾವುದೇ ಮುಖ್ಯಮಂತ್ರಿ ಇಷ್ಟು ಸಾಲ ಮಾಡಿಲ್ಲ. ಐದು ವರ್ಷ ಪೂರ್ಣಗೊಳ್ಳುವಾಗ ಒಟ್ಟು ಸಾಲ 6 ಲಕ್ಷ ಕೋಟಿ ರೂ.ಗೆ ಏರಲಿದೆ. ಪ್ರತಿ ವ್ಯಕ್ತಿಯ ಮೇಲೆ 1 ಲಕ್ಷ ರೂ. ಸಾಲವಿದ್ದು, ಇನ್ನೂ 1 ಲಕ್ಷ ರೂ. ಸಾಲ ಹೇರಿಕೆಯಾಗಲಿದೆ. ಜನರ ಮೇಲೆ ಸಾಲ ಮತ್ತು ತೆರಿಗೆಗಳ ಹೊರೆಯನ್ನು ಹಾಕಿದ್ದಾರೆ. ಕೇಂದ್ರ ಸರ್ಕಾರ ತುಪ್ಪದ ದರ ಇಳಿಸಿದರೆ, ಕೂಡಲೇ ತುಪ್ಪದ ದರ ಹೆಚ್ಚು ಮಾಡಿದ್ದಾರೆ. ಮಾರ್ಗಸೂಚಿ ದರವನ್ನು ನಾಲ್ಕು ಪಟ್ಟು ಏರಿಸಿದ್ದಾರೆ. ಕಸಕ್ಕೆ ಮೂರು ಪಟ್ಟು ಅಧಿಕ ತೆರಿಗೆ ನೀಡಬೇಕಿದೆ. ಕಾಂಗ್ರೆಸ್‌ ದಿವಾಳಿಯಾಗಿ ಕರ್ನಾಟಕವನ್ನು ಪಾಪರ್‌ ರಾಜ್ಯ ಮಾಡಲು ಮುಂದಾಗಿದೆ ಎಂದರು. ಇದನ್ನೂ ಓದಿ: ಫೀಸ್ ಕಟ್ಟಿಲ್ಲ ಅಂತ ಹಾಲ್ ಟಿಕೆಟ್ ನೀಡದ ಆಡಳಿತ ಮಂಡಳಿ – ಪುಕ್ಸಟ್ಟೆ ಕಲಿಸ್ತಾರಾ ಅಂತ ಶಿಕ್ಷಕಿ ಕಿರಿಕ್‌,  ವಿದ್ಯಾರ್ಥಿನಿ ಪರದಾಟ

ಹೋರಾಟ
ಬಜೆಟ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಮಾಡಿರುವ ತಪ್ಪುಗಳ ಬಗ್ಗೆ ಚರ್ಚೆಯಾಗಲಿದೆ. ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಹೋರಾಟ ಮಾಡಲಿದೆ. ಸಿಎಂ ಸಿದ್ದರಾಮಯ್ಯನವರ ಆಡಳಿತದಿಂದಾಗಿ ಹಿಂದುಳಿದ ತಾಲೂಕುಗಳ ಪಟ್ಟಿಗೆ ಇನ್ನೂ 20 ತಾಲೂಕುಗಳು ಸೇರ್ಪಡೆಯಾಗಿವೆ. ವಿದ್ಯಾರ್ಥಿಗಳ ಹೋರಾಟಕ್ಕೆ ಹೆದರಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಬಿಜೆಪಿಯಿಂದ 2 ಲಕ್ಷ ಹುದ್ದೆಗಳ ನೇಮಕಾತಿಗೆ ಆಗ್ರಹಿಸಲಾಗಿತ್ತು. ಒಳಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಸರ್ಕಾರ ಅಫಿಡವಿಟ್‌ ನೀಡಬೇಕಿದೆ. ಕೋರ್ಟ್‌ ಆದೇಶದಂತೆ ಸರ್ಕಾರ ಕ್ರಮ ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಹಿಂದೂ ಸಮಾಜೋತ್ಸವದ ಹಿಂದಿನ ದಿನ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಈ ರೀತಿಯ ಘಟನೆಗಳು ಹೆಚ್ಚಾಗಿವೆ. ಕಾಂಗ್ರೆಸ್‌ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುತ್ತಿದೆ. ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಗೆ ಕಲ್ಲು ತೂರಾಟ ಮಾಡಲಾಗಿತ್ತು. ಎಲ್ಲ ಜಿಲ್ಲೆಗಳ ಹಿಂದೂ ಕಾರ್ಯಕ್ರಮಗಳ ಮೇಲೆ ಕಲ್ಲು ತೂರಾಟವಾಗುತ್ತಿದೆ. ಕಾಂಗ್ರೆಸ್‌ ಇದನ್ನು ಮಾಡಿಸುತ್ತಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಲ್ಲಿ ಬಿಜೆಪಿ ನಡೆಸಿದ ಹೋರಾಟದಿಂದಲೇ ಬದಲಾವಣೆ ಸಾಧ್ಯವಾಗಿದೆ. ರಾಜ್ಯದಲ್ಲಿ ಎಲ್ಲೇ ಏನೇ ಆದರೂ ಹೋರಾಟ ಮಾಡುತ್ತೇವೆ ಎಂದರು. ಸಿದ್ದರಾಮಯ್ಯ ಕುರ್ಚಿ ಬಿಡುವ ರಾಮಯ್ಯ ಅಲ್ಲ. ಇವರೆಲ್ಲರೂ ಸೇರಿ ಡಿ.ಕೆ.ಶಿವಕುಮಾರ್‌ಗೆ ನಾಮ ಹಾಕುತ್ತಾರೆ ಲೇವಡಿ ಮಾಡಿದರು.

TAGGED:bengalurucongress govtkarnatakar ashokಆರ್‌.ಅಶೋಕ್‌ಕರ್ನಾಟಕಕಾಂಗ್ರೆಸ್ ಸರ್ಕಾರಬೆಂಗಳೂರು
Share This Article
Facebook Whatsapp Whatsapp Telegram

Cinema news

Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories

You Might Also Like

In A First Chinese Humanoid Robots Outrun Humans In Beijing Half Marathon Human world record broken Lightning Beijing E Town
Latest

21 ಕಿ.ಮೀ ದೂರವನ್ನು ಜಸ್ಟ್‌ 50 ನಿಮಿಷದಲ್ಲಿ ಓಡಿದ ಚೀನಿ ರೊಬೊಟ್‌ – ಮನುಷ್ಯರ ವಿಶ್ವ ದಾಖಲೆ ಬ್ರೇಕ್‌!

Public TV
By Public TV
32 minutes ago
Rajasthan Refinery Unit Fire
Latest

ನಾಳೆ ಪಿಎಂ ಮೋದಿ ಉದ್ಘಾಟಿಸಬೇಕಿದ್ದ 79,000 ಕೋಟಿ ಮೌಲ್ಯದ ರಿಫೈನರಿ ಘಟಕಕ್ಕೆ ಬೆಂಕಿ

Public TV
By Public TV
1 hour ago
Private Plane Flying 30 Feet Above Ground Crashes Into Tree In Chhattisgarh
Latest

ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ

Public TV
By Public TV
2 hours ago
bjp flag
Bengaluru City

ಭ್ರಷ್ಟಾಚಾರವೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ – ಇಡಿ ದಾಳಿಗೆ ಬಿಜೆಪಿ ಟೀಕೆ

Public TV
By Public TV
2 hours ago
Sadhvi Satish Sail
Latest

ಮಗಳು ಬಿಸಿನೆಸ್ ಮಾಡಲಿ ಅಂತ ಸಿಎಂ, ಡಿಸಿಎಂ ಬಳಿ ಬುದ್ದಿ ಹೇಳಿಸಿದ್ದೆ: ‘ಫೆಮಿನಾ ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮಗಳ ಬಗ್ಗೆ ಸತೀಶ್‌ ಸೈಲ್‌ ಮಾತು

Public TV
By Public TV
2 hours ago
Doctor Ramesh who was supposed to marry his wifes sister tomorrow murdered Sirsi KHB Colony
Crime

ಇಂದು ಮದುವೆ ಆಗ್ಬೇಕಿದ್ದ ವೈದ್ಯನ ಹತ್ಯೆ ಕೇಸ್‌ – ಚಿನ್ನದ ಆಸೆಗೆ ಸ್ನೇಹಿತನಿಂದಲೇ ಮರ್ಡರ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?