ವಾಷಿಂಗ್ಟನ್: ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಇಲ್ಲವೇ ಸಾವನ್ನು ಎದುರಿಸಿ ಎಂದು ಇರಾನಿನ (Iran) ಸೈನಿಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ.
ಟೆಹ್ರಾನ್ (Tehran) ಮೇಲೆ ಇಸ್ರೇಲ್ ಪೂರ್ವಭಾವಿ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಅಮೆರಿಕದ ಪಡೆಗಳು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: Israel Strikes Iran | ಖಮೇನಿ ಟಾರ್ಗೆಟ್ ಮಾಡಿ 7 ಮಿಸೈಲ್ ಲಾಂಚ್ – ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಇರಾನ್‌ನಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇರಾನ್ ಆಡಳಿತದಿಂದ ಎದುರಾಗಬಹುದಾದ ಬೆದರಿಕೆಗಳಿಂದ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಇದು ತುಂಬಾ ಕಠಿಣ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಹಿತಾಸಕ್ತಿಗಳ ವಿರುದ್ಧ ದಶಕಗಳಿಂದ ಟೆಹ್ರಾನ್ ಸಂಚು ರೂಪಿಸುತ್ತಿದೆ. ಇನ್ಮುಂದೆ ನಾವು ಇದನ್ನು ಸಹಿಸುವುದಿಲ್ಲ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಸದಸ್ಯರು, ಸಶಸ್ತ್ರ ಪಡೆಗಳು ಮತ್ತು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಇಲ್ಲವೇ ಸಾವನ್ನು ಎದುರಿಸಿ. ನಾವು ಹೇಳಿದಂತೆ ಕೇಳಿದರೆ ನಿಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾಗುತ್ತದೆ. ಇಲ್ಲವೇ, ಸಾವು ನಿಶ್ಚಿತ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ -ಇಸ್ರೇಲ್ ಜಂಟಿ ದಾಳಿ; ಇಂಟಲಿಜೆನ್ಸ್ ಕಚೇರಿ ಸೇರಿ 30 ಗುರಿಗಳು ಟಾರ್ಗೆಟ್

