ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ (Vijay) ಪತ್ನಿ ಸಂಗೀತಾ ಸೊರ್ನಲಿಂಗಂ (Sangeetha Sornalingam) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ನಟನ ಜೊತೆಗಿನ 27 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.
1999 ರ ಆಗಸ್ಟ್‌ನಲ್ಲಿ ವಿವಾಹವಾದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ
ವಿಜಯ್ ಅವರು ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ನಿಲ್ಲಿಸುತ್ತೇನೆ ಅಂತ ವಿಜಯ್ ಭರವಸೆ ಕೊಟ್ಟಿದ್ದರು. ಆದರೆ, ಅದು ಹಾಗೆಯೇ ಮುಂದುವರಿದಿದೆ ಎಂದು ಅರ್ಜಿಯಲ್ಲಿ ಸಂಗೀತಾ ಉಲ್ಲೇಖಿಸಿದ್ದಾರೆ.
ಪತಿ ನನ್ನನ್ನು ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ದೂರ ಇಟ್ಟಿದ್ದಾರೆ. ವಿದೇಶ ಪ್ರವಾಸ ಮಾಡುವುದು ಮತ್ತು ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದಾರೆ. ಈ ಪ್ರವಾಸದ ಫೋಟೊಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ನನಗೆ ಮತ್ತು ಮಕ್ಕಳಿಗೆ ಅವಮಾನವಾಗಿದೆ ಎಂದು ವಿಜಯ್ ಪತ್ನಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್ ರಿಲೀಫ್ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ತಮಿಳು ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಂಗೀತಾ ಅವರು 1999ರ ಆಗಸ್ಟ್ 25 ರಂದು ವಿಜಯ್ ಅವರೊಂದಿಗೆ ವಿವಾಹವಾದರು. ಇದಕ್ಕೂ ಮೊದಲು ವಿಜಯ್ ಕಟ್ಟಾ ಅಭಿಯಾನಿಯಾಗಿದ್ದರು. ಇಬ್ಬರ ವಿವಾಹವು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿತ್ತು.

