Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: NCERT ಪಠ್ಯ ವಿವಾದ| ಸುಪ್ರೀಂ ಮುಂದೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಸರ್ಕಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | NCERT ಪಠ್ಯ ವಿವಾದ| ಸುಪ್ರೀಂ ಮುಂದೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಸರ್ಕಾರ

Court

NCERT ಪಠ್ಯ ವಿವಾದ| ಸುಪ್ರೀಂ ಮುಂದೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಸರ್ಕಾರ

Public TV
Last updated: February 26, 2026 11:40 am
Public TV
Share
2 Min Read
supreme Court 1
SHARE

ನವದೆಹಲಿ: NCERT ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (Union Government) ಸುಪ್ರೀಂ ಕೋರ್ಟ್ (Supreme Court) ಮುಂದೆ ಬೇಷರತ್ ಕ್ಷಮೆಯಾಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ಬೇಷರತ್ ಕ್ಷಮೆಯಾಚಿಸುತ್ತೇವೆ. ಈ ವಿಚಾರವನ್ನು  ನಾವು ಸಮರ್ಥಿಸುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ವಿವಾದಾತ್ಮಕ ಅಧ್ಯಾಯವನ್ನು ಸಿದ್ಧಪಡಿಸಿದ ಇಬ್ಬರು ವ್ಯಕ್ತಿಗಳು ಸಚಿವಾಲಯ ಅಥವಾ ಯಾವುದೇ ಇತರ ಸಚಿವಾಲಯದೊಂದಿಗೆ ಸಂಬಂಧ ಹೊಂದಿಲ್ಲಎಂದು ಭರವಸೆ ನೀಡಿದರು.

ಸಿಜೆಐ ಪ್ರತಿಕ್ರಿಯಿಸಿ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರದ ಕುರಿತು ಸಂಪೂರ್ಣ ಅಧ್ಯಾಯವನ್ನು ಮೀಸಲಿಟ್ಟಿದ್ದರೂ ಈ ಪಠ್ಯದಿಂದ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಬಗ್ಗೆ ಪಾತ್ರವನ್ನು ಮರೆ ಮಾಚುತ್ತದೆ. ಪ್ರಜಾಪ್ರಭುತ್ವದ ರಚನೆಯ ಸಂರಕ್ಷಣೆಯಲ್ಲಿ ಸಂಸ್ಥೆಯು ವಹಿಸಿದ ಪಾತ್ರವನ್ನು ಗುರುತಿಸುವಲ್ಲಿ ಪಠ್ಯವು ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಹಳ ಚೆನ್ನಾಗಿ ಯೋಚಿಸಿ ಯೋಜಿತವಾಗಿ ಪಠ್ಯವನ್ನು ರೂಪಿಸಲಾಗಿದೆ. ನಾನು ಈ ವಿಚಾರಣೆಯನ್ನು ಮುಕ್ತಾಯಗೊಳಿಸುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಕಂಡುಹಿಡಿಯುತ್ತೇವೆ. ನ್ಯಾಯಾಲಯವು ಸಂಪೂರ್ಣವಾಗಿ ತೃಪ್ತಿ ಹೊಂದುವವರೆಗೆ ಈ ಪ್ರಕರಣ ಮುಂದುವರಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡಲ್ಲ – NCERT ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಗರಂ

ಕ್ಷಮೆಯಾಚನೆಯಿಂದ ಅಧಿಕಾರಿಗಳು ತಪ್ಪಿಸಿಕೊಳ್ಳಲು ನಾವು ಬಿಡಲು ಸಾಧ್ಯವಿಲ್ಲ. ಪಠ್ಯವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರೆ ನಾವು ಒಪ್ಪುವುದಿಲ್ಲ. ಪುಸ್ತಕವು ಈಗಾಗಲೇ ಮಾರುಕಟ್ಟೆಗೆ ಬಂದಿದ್ದು ನಾನು ಒಂದು ಪ್ರತಿಯನ್ನು ಸಹ ನೋಡಿದ್ದೇನೆ ಎಂದು ಚಾಟಿ ಬೀಸಿದರು.

ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿ, ಈ ಪ್ರಕರಣವನ್ನು ಸಮರ್ಥಿಸಿಕೊಂಡರೆ ಅದು ತಪ್ಪಾಗುತ್ತದೆ. ಭವಿಷ್ಯದಲ್ಲಿ ಯಾವುದೇ ಇಲಾಖೆಯು ಈ ರೀತಿಯ ತಪ್ಪು ಮಾಡದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಪರಿಷ್ಕೃತ ಪಠ್ಯದಲ್ಲಿ ಏನಿದೆ?
ಎನ್‌ಸಿಇಆರ್‌ಟಿಯು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಹಾಗೂ ‘ಸಾಕಷ್ಟು ಪ್ರಕರಣಗಳು ಬಾಕಿ’ ವಿಷಯಗಳನ್ನು ಸೇರಿಸಿವೆ. ‘ಸಮಾಜದಲ್ಲಿ ನ್ಯಾಯಾಂಗ ಪಾತ್ರ’ ಶೀರ್ಷಿಕೆಯ ಅಧ್ಯಾಯದಲ್ಲಿ ಈ ವಿಚಾರಗಳು ಇವೆ. ‘ನ್ಯಾಯದಾನ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ’ ಹಾಗೂ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗಗಳಲ್ಲಿ ಭ್ರಷ್ಟಾಚಾರ ಹಾಗೂ ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲಾಗಿದೆ.

TAGGED:apologyNCERTSupreme Courtಎನ್‌ಸಿಇಆರ್‌ಟಿಕೇಂದ್ರ ಸರ್ಕಾರತುಷಾರ್ ಮೆಹ್ತಾಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories
Zee Short Film Contest
ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಜೀ ಕಿರುಚಿತ್ರ ಸ್ಪರ್ಧೆ
Cinema Latest Top Stories

You Might Also Like

Delhi Police 1
Latest

ಭಾರೀ ಹೈಡ್ರಾಮಾ – ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನ ಬಂಧಿಸಲು ಶಿಮ್ಲಾಕ್ಕೆ ತೆರಳಿದ್ದ ದೆಹಲಿ ಪೊಲೀಸರೇ ವಶಕ್ಕೆ

Public TV
By Public TV
53 seconds ago
Siddaramaiah Cycle
Bellary

ಸಿದ್ದರಾಮಯ್ಯ ಸರ್ಕಾರದಿಂದ್ಲೂ ಕಳಪೆ ಸೈಕಲ್ – ಟೈಯರ್ ಕಿತ್ತು, ಬೆಂಡ್ ಆಗಿ ಮೂರೇ ತಿಂಗಳಲ್ಲಿ ದುರಸ್ತಿಗೆ

Public TV
By Public TV
38 minutes ago
JDS
Districts

ನಾಳೆ ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಭಾಗದ ʻಜೆಡಿಎಸ್ ಬೆಳ್ಳಿಹಬ್ಬʼ ಸಮಾವೇಶ

Public TV
By Public TV
1 hour ago
Kolar Suicide
Crime

ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸೂಸೈಡ್

Public TV
By Public TV
2 hours ago
Narendra Modi 5
Latest

ಇನ್‌ಸ್ಟಾಗ್ರಾಮ್‌ನಲ್ಲಿ 10,00,00,000 ಫಾಲೋವರ್ಸ್‌ ದಾಟಿದ ಮೊದಲ ವಿಶ್ವನಾಯಕ ಮೋದಿ

Public TV
By Public TV
3 hours ago
Team India
Cricket

Ind Vs Zim | ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ – ಸಂಜು, ಅಕ್ಷರ್‌ ಮತ್ತೆ ಕಣಕ್ಕಿಳಿಯುವ ಸಾಧ್ಯತೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?