ಬೆಂಗಳೂರು: ಕುರಿ ಕಾಯುವವರನ್ನ ಕುರಿಗಾಹಿಗಳ ನಿಗಮಕ್ಕೆ ಅಧ್ಯಕ್ಷನಾಗಿ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯಗೆ (Siddaramaiah) ಕುರಿಗಾಹಿಗಳು ಮನವಿ ಮಾಡಿದ್ದಾರೆ.
ಕಾವೇರಿ ನಿವಾಸದ ಬಳಿ ಸಿಎಂ ಭೇಟಿ ಮಾಡಿದ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಹಿತರಕ್ಷಣಾ ಸಮಿತಿ ಸದಸ್ಯರು ಸಿಎಂಗೆ ಮನವಿ ಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಮಂಜುನಾಥ್, ನಮ್ಮ ಭಾಗದಲ್ಲಿ ಕುರಿಗಾಹಿಗಳ ಮೇಲೆ ಹಲ್ಲೆ ಮಾಡ್ತಾ ಇದ್ದಾರೆ. ಕಾನೂನು ಇದ್ದರೂ ಇಂತಹ ಘಟನೆ ಆಗ್ತಿದೆ. ಈ ಬಗ್ಗೆ ಕ್ರಮ ಆಗಬೇಕು. ನಿಗಮಕ್ಕೆ ಹಣಕಾಸು ಕೊರತೆ ಇದೆ. ಹಣಕಾಸು ಕೊಡಬೇಕು. ಕುರಿ ಕಾಯುವವನನ್ನ ನಿಗಮದ ಅಧ್ಯಕ್ಷ ಮಾಡಬೇಕು. ಕುರಿ ಕಾಯೋರನ್ನ ನಿಗಮಕ್ಕೆ ಸೇರಿಸಬೇಕು ಅಂತ ಮನವಿ ಮಾಡಿದರು. ಇದನ್ನೂ ಓದಿ: ಸಿ.ಜೆ.ರಾಯ್ ಕೇಸ್ – ಆತ್ಮಹತ್ಯೆ ಹಿಂದಿನ ಕಾರಣ ಮೇಲ್ನೋಟಕ್ಕೆ ರಿವೀಲ್
ಕುರಿ ಸತ್ತಿದ್ದಕ್ಕೆ ಪರಿಹಾರ ಸಿಗ್ತಿಲ್ಲ. ಇದರಲ್ಲೂ ಅನ್ಯಾಯ ಆಗ್ತಿದೆ. ನಮಗೆ ಚಿತ್ರಹಿಂಸೆ ಕೊಡ್ತಾ ಇದ್ದಾರೆ. ನಮಗೆ ಗನ್ ಲೈಸೆನ್ಸ್ ಕೊಡ್ತೀನಿ ಅಂದರು ಕೊಟ್ಟಿಲ್ಲ. ಪಶು ಆಸ್ಪತ್ರೆಗೆ ಹೋದ್ರೆ ನಮ್ಮ ಕುರಿಗಳಿಗೆ ಚಿಕಿತ್ಸೆ ಕೊಡಲ್ಲ. ಈ ಬಗ್ಗೆ ಸಿಎಂ ಕ್ರಮ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದರು.
ಸಿಎಂಗೆ ಮನವಿ ಕೊಡುವ ವೇಳೆ ಕುರಿಗಾಹಿಗಳಿಗೆ ರಕ್ಷಣೆ ಕೊಡಿ ಎಂದು ಸಿಎಂಗೆ ಕುರಿಗಾಹಿಗಳು ಮನವಿ ಮಾಡಿದ್ರು. ಇದಕ್ಕೆ ಏಯ್ ಕಾಯ್ದೆ ಮಾಡಿದ್ದೀವಲ್ಲಯ್ಯ ಎಂದು ಕುರಿಗಾಹಿಗಳ ಮೇಲೆ ಸಿಎಂ ರೇಗಿದ ಘಟನೆ ನಡೀತು. ಇದೇ ವೇಳೆ ಕುರಿಗಾಹಿಗಳಿಗೆ ಮಂಡಳಿ ರಚನೆ ಮಾಡಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಘವೇಂದ್ರ ರಾಜಕುಮಾರ್‌ಗೆ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪ್ರದಾನ – ಶ್ರೀಗಳಿಂದ ಸನ್ಮಾನ

