ನವದೆಹಲಿ: ಚಿನ್ನದ ಬೆಲೆಗಳನ್ನು (Gold Price) ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದ್ದಾರೆ.
ಬಜೆಟ್ ಬಳಿಕ ಆರ್‌ಬಿಐನ (RBI) ಕೇಂದ್ರೀಯ ನಿರ್ದೇಶಕರ ಮಂಡಳಿಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಮಂದಿ ಮೊದಲಿನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಹಬ್ಬದ ಋತುವಿನಲ್ಲಿ ಏರಿಕೆಯಾಗುವುದನ್ನು ನಾವು ನೋಡಿದ್ದೇವೆ ಎಂದರು.
ಭಾರತದಲ್ಲಿ ಚಿನ್ನ ಲಭ್ಯವಿಲ್ಲದ ಕಾರಣ ಹೊರಗಡೆಯಿಂದ ಆಮದು ಮಾಡುತ್ತಿದ್ದೇವೆ. ಚಿನ್ನವನ್ನು ಅನ್ವೇಷಿಸಲು ಮತ್ತು ಹೊರತೆಗೆಯಲು ನಮಗೆ ನಮ್ಮದೇ ಆದ ಮೂಲವಿಲ್ಲ. ನಮ್ಮ ಚಿನ್ನದ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಹೇಳಿದರು.
ನಾವು ಚಿನ್ನದ ಬೆಲೆಯನ್ನು ಗಮನಿಸುತ್ತಿದ್ದೇವೆ. ಆದರೆ ಅದು ಅಷ್ಟೊಂದು ಆತಂಕಕಾರಿ ಮಟ್ಟವನ್ನು ತಲುಪಿದೆ ಎಂದು ಖಚಿತವಾಗಿ ತಿಳಿದಿಲ್ಲ. ಅದು ಒಂದು ನಿರ್ದಿಷ್ಟ ಮಿತಿಯನ್ನು ಮೀರಿಲ್ಲ ಎಂದು ನಾನು ಭಾವಿಸುತ್ತೇನೆ. ಸಹಜವಾಗಿಯೇ ಆರ್‌ಬಿಐ ದರವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇಂದು ಹೆಚ್ಚಿನ ದೇಶಗಳು, ವಿಶೇಷವಾಗಿ ಆ ದೇಶಗಳ ಕೇಂದ್ರೀಯ ಬ್ಯಾಂಕುಗಳು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿ ಸಂಗ್ರಹಿಸುತ್ತಿವೆ ಎಂದು ತಿಳಿಸಿದರು.
VIDEO | Delhi: Addressing RBI Central Board Directors in post-budget meeting, Finance Minister Nirmala Sitharaman (@nsitharaman) says, “Gold price spike because central banks globally buying a lot of it.”
(Full video available on PTI Videos – https://t.co/n147TvrpG7) pic.twitter.com/HkisYCFmV8
— Press Trust of India (@PTI_News) February 23, 2026
ಅಮೆರಿಕದ ಸುಂಕ ವಿಷಯದ ಕುರಿತು ಪ್ರತಿಕ್ರಿಯಿಸಿದ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಈಗಲೇ ಪ್ರತಿಕ್ರಿಯೆ ನೀಡುವ ಸಮಯವಲ್ಲ ಎಂದರು. ಇದನ್ನೂ ಓದಿ: ಅಮೆಜಾನ್ ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಎಂ.ಬಿ ಪಾಟೀಲ್
ಬಜೆಟ್ ನಂತರ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರೊಂದಿಗೆ ಆರ್‌ಬಿಐನ ಕೇಂದ್ರ ನಿರ್ದೇಶಕರ ಮಂಡಳಿಯೊಂದಿಗೆ ಸಾಂಪ್ರದಾಯಿಕ ಸಭೆಯನ್ನು ನಡೆಸಿದರು.

