Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದಲ್ಲಿ ದಾಳಿಗೆ ಸಂಚು ಪ್ರಕರಣ – ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಸಂಪರ್ಕದಲ್ಲಿದ್ದ ಕಾಶ್ಮೀರಿ ಉಗ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತದಲ್ಲಿ ದಾಳಿಗೆ ಸಂಚು ಪ್ರಕರಣ – ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಸಂಪರ್ಕದಲ್ಲಿದ್ದ ಕಾಶ್ಮೀರಿ ಉಗ್ರ

Latest

ಭಾರತದಲ್ಲಿ ದಾಳಿಗೆ ಸಂಚು ಪ್ರಕರಣ – ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಸಂಪರ್ಕದಲ್ಲಿದ್ದ ಕಾಶ್ಮೀರಿ ಉಗ್ರ

Public TV
Last updated: February 22, 2026 8:19 pm
Public TV
Share
2 Min Read
Lashkar Module
SHARE

– ಲಷ್ಕರ್ ಮಾಡ್ಯೂಲ್‌ನ ಪ್ರಕರಣದ ಮತ್ತಷ್ಟು ರಹಸ್ಯ ಸ್ಫೋಟ

ನವದೆಹಲಿ: ಭಾರತದಲ್ಲಿ ವಿವಿಧೆಡೆ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ (Pakistan) ಐಸಿಸ್‌ (ISI), ಬಾಂಗ್ಲಾದೇಶದೊಂದಿಗೆ (Bangladesh) ಸಂಪರ್ಕ ಹೊಂದಿರುವ 8 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಇನ್ನಷ್ಟು ರೋಚಕ ಸಂಗತಿಗಳು ತನಿಖೆ ವೇಳೆ ಬಯಲಾಗಿವೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟ ಲಷ್ಕರ್‌ ಸಂಘಟನೆಯ 8 ಕಾರ್ಯಕರ್ತರು ಮುಂಬೈ ದಾಳಿಯ (Mumbai Attack) ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ (Hafiz Saeed) ಹಾಗೂ ಹಿರಿಯ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಸೇರಿದಂತೆ ಲಷ್ಕರ್‌ ಸಂಘಟನೆಯ ಉನ್ನತ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ವರದಿಗಳು ತಿಳಿಸಿವೆ.

arrest

ಮೂಲಗಳ ಪ್ರಕಾರ, ಪ್ರಸ್ತುತ ಬಾಂಗ್ಲಾದೇಶದಲ್ಲಿ (Bangladesh) ನೆಲೆಸಿರುವ ಕಾಶ್ಮೀರಿ ಉಗ್ರ ಶಬ್ಬೀರ್‌ ಅಹ್ಮದ್‌ ಲೋನ್‌ ಎನ್ನುವ ಹ್ಯಾಂಡ್ಲರ್‌ 2007 ರಿಂದ ಲಷ್ಕರ್‌ ಎ ತೈಬಾ (LTE) ನಾಯಕರೊಂದಿಗೆ ಸಂಪರ್ಕಸಲ್ಲಿದ್ದಾನೆ. ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್ ಮಾಡ್ಯೂಲ್‌ ಸಂಘಟನೆ ಮಾಡುವಲ್ಲಿ ಶಬ್ಬೀರ್‌ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತಿಳಿದುಬಂದಿದೆ.

2007 ರಲ್ಲೇ ದೆಹಲಿ ಪೊಲೀಸ್‌ ವಿಶೇಷ ಪಡೆಯು ಸಯೀದ್‌ ಮತ್ತು ಲಖ್ವಿ ಲಷ್ಕರ್‌ ಪಡೆಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಬಗ್ಗೆ ಸಾಕ್ಷ್ಯಗಳನ್ನ ವಶಪಡಿಸಿಕೊಂಡಿತ್ತು. ಆದ್ರೆ ಇತ್ತೀಚಿನ ತನಿಖೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಭಾಗಿಯಾಗಿರುವುದನ್ನ ಸಾಬೀತುಪಡಿಸಿವೆ. ಈ ಮಾಡ್ಯೂಲ್‌ನ ನೇಮಕಾತಿ ಮತ್ತು ಕಾರ್ಯಾಚರಣೆ ಯೋಜನೆಗೆ ಐಎಸ್‌ಐ ಹಣಕಾಸು ನೆರವು ನೀಡುತ್ತಿದೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

Delhi Police 3

ಏನಿದು ಪ್ರಕರಣ?
ದೇಶದಲ್ಲಿ ಇತ್ತೀಚೆಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಹೊಂದಿರುವ ಸ್ಲಿಪರ್‌ ಸೆಲ್‌ ಗಳನ ಹಾವಳಿ ಹೆಚ್ಚಾಗಿದ್ದು, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಪಾಕಿಸ್ತಾನದ ISI ಹಾಗೂ ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕಹೊಂದಿದ್ದ 8 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರು ಬಾಂಗ್ಲಾದೇಶದ ಪ್ರಜೆಗಳು ಎಂದು ನಕಲಿ ಆಧಾರ್ ಕಾರ್ಡ್‌ ಬಳಸಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುತ್ತಾ ಸಮಾಜಘಾತುಕ ಕೆಲಸಗಳನ್ನು ಮಾಡುತ್ತಾ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಫ್ರೀ ಕಾಶ್ಮೀರದಂತಹ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಇವರ ಬಳಿಯಿದ್ದ 8 ಫೋನ್‌ ಸೇರಿದಂತೆ 16 ಸಿಮ್‌ ಗಳನ್ನು ವಶ ಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಇವರು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಯೋಜಿತ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂಬ ಶಂಕೆ ಇದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ.

TAGGED:bangladeshHafiz SaeedisiLashkar ModuleMumbai Attackpakistanದೆಹಲಿ ಪೊಲೀಸ್ಮುಂಬೈ ದಾಳಿಲಷ್ಕರ್‌ ಸಂಘಟನೆ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
10 minutes ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
22 minutes ago
S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
44 minutes ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
1 hour ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
1 hour ago
Nitin Gadkari
Latest

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?