ಬೆಂಗಳೂರು: ಸರ್ಕಾರದ ವಿರುದ್ಧ ಮಾತನಾಡುವ ಬಿಜೆಪಿ ನಾಯಕರು, ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಲಂಚ ಪ್ರಕರಣದಲ್ಲಿ ಏನು ಮಾತನಾಡ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರನ್ನು ಯಾಕೇ ಕೇಳ್ತೀರಾ, ಹೋಗಿ ಬಿಜೆಪಿಯವರನ್ನೇ ಕೇಳಿ. ನಿನ್ನೆ ಬಿಜೆಪಿ ನಾಯಕರ ಹೇಳಿಕೆ ಗಮನಿಸಿದ್ದೇನೆ. ಮಾಹಿತಿ ಇಲ್ಲ, ತರಿಸಿಕೊಂಡು ನೋಡ್ತೀನಿ ಅಂದ್ರು. ಇವಾಗ 24 ಗಂಟೆ ಆಯ್ತಲ್ಲ, ಮಾತಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಾಸಕ ಚಂದ್ರು ಲಮಾಣಿಗೆ ಮಾ.2ರ ತನಕ ನ್ಯಾಯಾಂಗ ಬಂಧನ

ಎಐ ಶೃಂಗಸಭೆ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸುದ್ದಿಗೋಷ್ಠಿ ಮಾಡಿದ್ರಲ್ಲ, ದೆಹಲಿಯಿಂದ ಮಾಹಿತಿ ಬಂತು ಅಂತಾ. ಇವಾಗ ಶಿರಹಟ್ಟಿಯಿಂದ ಇನ್ನೂ ಮಾಹಿತಿ ಬಂದಿಲ್ಲವ? ರಾಹುಲ್ ಗಾಂಧಿ ಟೀಕಿಸಲು ಡೆಲ್ಲಿಯಿಂದ ಮಾಹಿತಿ ಬರುತ್ತದೆ. ಆದರೆ, ಅವರ ಶಾಸಕರ ಬಗ್ಗೆ ಯಾಕೇ ಇನ್ನೂ ಮಾಹಿತಿ ಬಂದಿಲ್ಲ? ಈ ಪ್ರಶ್ನೆಗೆ ವಿಜಯೇಂದ್ರ, ಅಶೋಕ್, ಛಲವಾದಿ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.
ದೊಡ್ಡದಾಗಿ ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮಾಡಿದ್ರಲ್ಲ ಇವಾಗ ಯಾರಪ್ಪ ರಾಜೀನಾಮೆ ಕೊಡ್ತೀರಾ? ಛಲವಾದಿ ಕೊಡ್ತಾರಾ ಅಶೋಕ್ ಕೊಡ್ತಾರಾ ವಿಜಯೇಂದ್ರ ಕೊಡ್ತಾರಾ? ಇದು ಕಾಂಗ್ರೆಸ್ ಷಡ್ಯಂತ್ರ ಅಂತಾರೆ. ಸ್ವಲ್ಪನೂ ಕಾಮನ್‌ಸೆನ್ಸ್ ಇಲ್ವಾ? ಇದು ಲೋಕಾಯುಕ್ತ ಟ್ರ್ಯಾಪ್ ರೀ. ಬಿಜೆಪಿ ನಾಯಕರು ಇದರ ಬಗ್ಗೆ ಮಾತಾಡಿದ್ರೆ ಉತ್ತಮ ಎಂದಿದ್ದಾರೆ. ಇದನ್ನೂ ಓದಿ: ಚೀನಾಗೆ ಭೂಮಿ ಕೊಟ್ಟಾಗ ದೇಶದ ಮರ್ಯಾದೆ ಹಾಳಾಗ್ಲಿಲ್ವಾ? – ಎಲ್ಲದಕ್ಕೂ ರಾಹುಲ್ ಗಾಂಧಿನೇ ಹೊಣೆನಾ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

