ದುಬೈ: Al Mirath Real Estates ವಾರ್ಷಿಕೋತ್ಸವ ಫೆಬ್ರವರಿ 14 ರಂದು ದುಬೈನ ಶೇಖ್ ಝಾಯೆದ್ ರಸ್ತೆಯ ಪಂಚತಾರಾ ಹೋಟೆಲ್ ಹಿಲ್ಟನ್‌ನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಬ್ದುಲ್ಲಾ ಅಬ್ದುಲ್ ಖಾದರ್ ಶಿಜಾವಿ (Chairman, Total contracting LLC) ಅವರು ಕಂಪನಿಯ ನಿರಂತರ ಬೆಳವಣಿಗೆ ಮತ್ತು ದುಬೈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪ್ರಶಂಸಿಸಿದರು. ಬಲವಾದ ನಾಯಕತ್ವ, ಮಾರ್ಗದರ್ಶನ ಮತ್ತು ತಂಡದ ಪರಿಶ್ರಮವು ಯಶಸ್ಸಿಗೆ ಮೂಲ ಕಾರಣ ಎಂದು ಅವರು ಒತ್ತಿ ಹೇಳಿದರು ಮತ್ತು ಕಂಪನಿಯ ನಿರಂತರ ಪ್ರಗತಿಗೆ ಶುಭ ಹಾರೈಸಿದರು.
ಮಿರಾತ್ ರಿಯಲ್ ಎಸ್ಟೇಟ್ ನ ಚೇರ್ಮನ್ ಸಾದಿಕ್ ಅಲಿ ಯವರು ಮಾತನಾಡಿ ರಿಯಲ್ ಎಸ್ಟೇಟ್ ನ ಹೂಡಿಕೆಗೆ ದುಬೈ ಅತ್ಯುತ್ತಮ ಮಾರುಕಟ್ಟೆಯಾಗಿದೆ. ಪ್ರತೀ ವರ್ಷವೂ ವಿದೇಶಿ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಉತ್ತಮ ಗುಣಮಟ್ಟ ಹಾಗೂ ವ್ಯಾವಹಾರಿಕ ನಿಯಮಗಳ ಪಾರದರ್ಶಕತೆ ಮೂಲ ಕಾರಣ ಎಂದರು. ನಮ್ಮ ಸಂಸ್ಥೆಯ ಸೇವೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೆಮ್ಮೆಪಟ್ಟರು.

2025 ನೇ ವರ್ಷದ ಪ್ರಶಸ್ತಿಗಳನ್ನು ಮಹಮ್ಮದ್ ಮುಸ್ತಫಾ (Performer of the year ) ಮೊಹಮ್ಮದ್ ಅಬ್ದುಲ್ಲಾ ಹಮ್ದಾನ್ (Rising Star ), ಅಬ್ದುಲ್ ಜಲೀಲ್ (Top Closer), ಹಾಗೂ ಲಾನಾ ಗೆವೋರ್ಕಿಯನ್ (Employ of the year ) ರವರಿಗೆ ನೀಡಿ ಗೌರವಿಸಲಾಯಿತು.

ಆಚರಣೆಯು ಭೋಜನ ಮತ್ತು ನೆಟ್‌ವರ್ಕಿಂಗ್ ಕಾರ್ಯಕ್ರಮದೊಂದಿಗೆ ಸಮಾಪ್ತಿಯಾಯಿತು. ಈ ಸಂದರ್ಭದಲ್ಲಿ ಸಹೋದ್ಯೋಗಿಗಳು ಪರಸ್ಪರ ಸಂವಹನ ನಡೆಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದು ಸಹೋದ್ಯೋಗಿಗಳ ನಡುವೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಹೊಸ ಅವಕಾಶಗಳನ್ನು ಅನ್ವೇಷಿಸಲು ಮತ್ತು ಭವಿಷ್ಯದ ಸಾಧನೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಲು ಪ್ರೇರಣೆಯನ್ನು ನೀಡಿತು.
ಇತರ ಗಣ್ಯ ಅತಿಥಿಗಳಾಗಿ ಖಾಲಿದ್ ಯೂಸಫ್ , ಖಾಲಿದ್ ಅಬ್ದುಲ್ಲಾ, ಇಲ್ಯಾಸ್ ಉಮ್ಮರ್ ಹಾಗೂ ಹಮೀದ್ ಸತ್ತಿಕಲ್ ಉಪಸ್ಥಿತರಿದ್ದರು. ರಿಧಾನ್ ರಶೀದ್ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದಗಳನ್ನು ಸಲ್ಲಿಸಿದರು.ಕಾರ್ಯಕ್ರಮವನ್ನು ಕು. ಆರತಿ ರಮ್ಯಾ ನಿರೂಪಿಸಿದರು.

