Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತೈಲಕ್ಕೆ ಹಾಹಾಕಾರ – ಟ್ರಂಪ್‌ ಸಮರಕ್ಕೆ ಕ್ಯೂಬಾ ತತ್ತರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ತೈಲಕ್ಕೆ ಹಾಹಾಕಾರ – ಟ್ರಂಪ್‌ ಸಮರಕ್ಕೆ ಕ್ಯೂಬಾ ತತ್ತರ

Latest

ತೈಲಕ್ಕೆ ಹಾಹಾಕಾರ – ಟ್ರಂಪ್‌ ಸಮರಕ್ಕೆ ಕ್ಯೂಬಾ ತತ್ತರ

Public TV
Last updated: February 17, 2026 5:41 pm
Public TV
Share
5 Min Read
Cuba Oil Donald Trump
SHARE

ಒಂದು ದೇಶದ ಅಭಿವೃದ್ಧಿಗೆ ಟ್ರಾನ್ಸ್‌ಪೋರ್ಟ್‌ ವ್ಯವಸ್ಥೆ ಬಹಳ ಮುಖ್ಯ. ಇದಕ್ಕೆ ಉಸಿರಾಗಿರೋದು ಪೆಟ್ರೋಲ್‌ ಮತ್ತು ಡೀಸೆಲ್‌. ಇಂಧನ ಸಿಗದಿದ್ದರೆ ಇಡೀ ದೇಶದ ವ್ಯವಸ್ಥೆಯೇ ರಕ್ತ ಇಲ್ಲದ ದೇಹದಂತೆ ನಿಶ್ಚಲವಾಗಿ ಹೋಗುತ್ತದೆ. ಈಗ ಕ್ಯೂಬಾ ಇಂತಹದ್ದೇ ಪರಿಸ್ಥಿತಿ ಎದುರಿಸುತ್ತಿದೆ. ಕ್ಯೂಬಾದಲ್ಲಿ ಇಂಧನಕ್ಕೆ ಹಾಹಾಕಾರ ಎದ್ದಿದೆ.

ಟ್ರಂಪ್ ಕೋಪವೇ ಕಾರಣ
ಎಲ್ಲಾ ತಾನು ಅಂದುಕೊಂಡಂತೇ ನಡೆಯಬೇಕು ಎಂಬ ಬಯಕೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತನ್ನ ಸುತ್ತಮುತ್ತಲಿನ ದೇಶಗಳ ನಿದ್ರೆ ಗೆಡೆಸಿದ್ದಾರೆ. ಇದರಿಂದ ಅಮೆರಿಕದ ಅಕ್ಕಪಕ್ಕದ ದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದೋ ಟ್ರಂಪ್ ಅವರ ಆದೇಶ ಪಾಲನೆ ಮಾಡಬೇಕು, ಇಲ್ಲವಾದರೆ ಮುಂದೆ ಬರುವ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂಬ ವಾತಾವರಣ ಇದೆ. ಇದೇ ರೀತಿಯ ಪರಿಣಾಮವನ್ನು ಕ್ಯೂಬಾ ಅನುಭವಿಸುತ್ತಿದೆ.

Donald Trump finally gets Nobel Peace Prize medal Venezuelas Machado presents her Nobel Peace Prize

ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೆರೆಹಿಡಿದ ಬಳಿಕ, ಮಾಜಿ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಅವರು ಅಮೆರಿಕದ ಮೇಲ್ವಿಚಾರಣೆಯಲ್ಲಿ ದೇಶದ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಕ್ಯೂಬಾದ ಆಪ್ತ ರಾಷ್ಟ್ರ ವೆನೆಝುವೆಲಾದಿಂದ ತೈಲ ಮತ್ತು ಹಣ ತಲುಪದಂತೆ ಟ್ರಂಪ್‌ ತಡೆದಿದ್ದಾರೆ.

Venezuela Oil Reserve 2

ಕ್ಯೂಬಾವು ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಈ ತಿಂಗಳ ಆರಂಭದಲ್ಲಿ ನೀಡಿದ್ದ ಸಲಹೆಯನ್ನು ಕ್ಯೂಬಾ ಅಧ್ಯಕ್ಷರು ತಿರಸ್ಕರಿಸಿದ್ದರು. ಒಪ್ಪಂದಕ್ಕೆ ಒತ್ತಾಯಿಸುವ ನೈತಿಕ ಅಧಿಕಾರ ಅಮೆರಿಕಕ್ಕೆ ಇಲ್ಲ ಎಂದು ಅವರು ಹೇಳಿದ್ದರು. ಇದರ ಪರಿಣಾಮ ಅಲ್ಲಿ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಕ್ಯೂಬಾಕ್ಕೆ ತೈಲ ಕೊಡಲು ಹಿಂದೇಟು
ಗ್ರೀನ್‌ಲ್ಯಾಂಡ್, ಕೆನಡಾ, ಯುರೋಪ್ ದೇಶಗಳು ಸೇರಿದಂತೆ ಡೊನಾಲ್ಡ್ ಟ್ರಂಪ್ ಅವರು ಹಲವು ಒಕ್ಕೂಟಗಳ ಜೊತೆಗೆ ಈಗಾಗಲೇ ಒಂದು ಸುತ್ತಿನ ಸಮರ ನಡೆಸಿದ್ದಾರೆ. ಇಂತಹ ವಾತಾವರಣದಲ್ಲಿ ಕ್ಯೂಬಾ ಜೊತೆಗೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೊಸ ತೆರಿಗೆ ನಿರ್ಬಂಧ ಹೇರಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಕ್ಯೂಬಾ ಜೊತೆಗೆ ಕಾನೂನು ಬದ್ಧ ವ್ಯಾಪಾರ ಸಂಬಂಧ ಕಾಪಾಡಿಕೊಳ್ಳಲು ಯತ್ನಿಸುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಸ್ಪಷ್ಟವಾಗಿ ಹೇಳಿದೆ. ಇದರಿಂದ ಹೆದರಿ ಹೋದ ತೈಲ ಸರಬರಾಜು ಮಾಡುವ ದೇಶಗಳು, ದ್ವೀಪರಾಷ್ಟ್ರ ಕ್ಯೂಬಾಕ್ಕೆ ತೈಲ ಕೊಡಲು ಹಿಂದೇಟು ಹಾಕುತ್ತಿವೆ.

Cuba

ಕ್ಯೂಬಾದಲ್ಲಿ ಇಂಧನ ಹಾಹಾಕಾರ
ಅಮೆರಿಕದ ನಿಯಂತ್ರಣದಲ್ಲಿ ಇರುವ ವೆನಿಜುವೆಲಾಲ್ಲಿ ಭಾರಿ ದೊಡ್ಡ ಪ್ರಮಾಣದ ತೈಲ ಇದ್ದು, ತನ್ನ ಪಕ್ಕದಲ್ಲೇ ಇರುವ ತೈಲ ಸಂಪತ್ತಿನಿಂದ ಕೂಡ ಕ್ಯೂಬಾ ವಂಚಿತವಾಗಲಿದೆ. ಈ ವಿಚಾರವಾಗಿ ಈಗಾಗಲೇ ವೆನಿಜುವೆಲಾ ತೀಕ್ಷ್ಣ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಕ್ರಮ ಕೈಗೊಂಡರೆ ಎದುರಾಗುವ ಪರಿಣಾಮವನ್ನ ಪರಿಹರಿಸಲು ಇಡೀ ಜಗತ್ತು ಒಂದಾಗುವಂತೆ ಕರೆ ಕೂಡ ನೀಡಿತ್ತು.

CUBA 1

ಎಲ್ಲಾ ತಿಕ್ಕಾಟಗಳ ನಡುವೆ ಕ್ಯೂಬಾ ಇದೀಗ ಇಂಧನ ಇಲ್ಲದೆ ಒದ್ದಾಡಿ ಹೋಗುತ್ತಿದೆ. ಏಕೆಂದರೆ ಕ್ಯೂಬಾ ನೆಲದಲ್ಲಿ ಉತ್ಪಾದನೆ ಆಗುತ್ತಿರುವ ತೈಲ ಅದಕ್ಕೆ ಸಾಲುತ್ತಿಲ್ಲ.‌

ಕ್ಯೂಬಾಕ್ಕೆ ತೈಲ ದಿಗ್ಬಂಧನ!
ಕ್ಯೂಬಾಗೆ ತೈಲ ಸರಬರಾಜು ಮಾಡದಂತೆ ಎಲ್ಲಾ ದೇಶಗಳಿಗೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕ್ಯೂಬಾಗೆ ತೈಲ ಮಾರಾಟ ಮಾಡುವ ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.

ಟ್ರಂಪ್‌ ಬೆದರಿಕೆ ಬಳಿಕ ಮೆಕ್ಸಿಕನ್ ಸರ್ಕಾರ ಕ್ಯೂಬಾಗೆ ತೈಲ ಸರಬರಾಜನ್ನು ನಿಲ್ಲಿಸಿದೆ. ಆದರೂ ಇತ್ತೀಚೆಗೆ ಮೆಕ್ಸಿಕೊ ಮಾನವೀಯ ನೆರವಾಗಿ ಹಡಗುಗಳನ್ನು ಕ್ಯೂಬಾಗೆ ಕಳುಹಿಸಿತ್ತು.

ಕ್ಯೂಬಾ ಜನರು ಈಗಾಗಲೇ ತಮ್ಮ ಹೊಟ್ಟೆಪಾಡಿನ ಕುರಿತು ಆತಂಕಕ್ಕೆ ಒಳಗಾಗಿದ್ದು, ವಲಸೆಯ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮೆಕ್ಸಿಕನ್ನರು ಟ್ರಂಪ್‌ ಟ್ಯಾರಿಫ್‌ ಪರಿಣಾಮವಾಗಿ ಆರ್ಥಿಕ ಹಾನಿಯ ಚಿಂತೆಗೊಳಗಾಗಿದ್ದು, ತಮ್ಮ ನೆಲದ ಮೇಲೆ ಸಂಭಾವ್ಯ ಡ್ರೋನ್‌ ದಾಳಿ ಅವರನ್ನು ಆತಂಕಕ್ಕೆ ತಳ್ಳಿದೆ. ಕ್ಯೂಬಾ ಜನರು ಈಗಾಗಲೇ ಬಡತನದ ಸುಳಿಗೆ ಸಿಲುಕಿ ನರಳುತ್ತಿದ್ದು, ಅವರ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ.

Nicolas Maduro 3

10 ದಿನಗಳಿಗೆ ಆಗುವಷ್ಟು ತೈಲ ಬಾಕಿ!
ಕ್ಯೂಬಾ ದೇಶಕ್ಕೆ ಹೊರಗಿನಿಂದ ಬರುತ್ತಿದ್ದ ಕಚ್ಚಾತೈಲ ಹಾಗೂ ತೈಲ ನಿಂತು ಹೋಗಿರುವ ಕಾರಣ ಸಾಕಷ್ಟು ಸವಾಲು ಎದುರಾಗಿದೆ. ಮತ್ತೊಂದು ಕಡೆ ಕ್ಯೂಬಾ ಸ್ಥಳೀಯವಾಗಿ ಉತ್ಪಾದನೆ ಮಾಡುವ ತೈಲ ಯಾವುದಕ್ಕೂ ಸಾಲುವುದಿಲ್ಲ ಎಂಬಂತೆ ಆಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದ್ದು, ಕ್ಯೂಬಾ ಜನರು ಒದ್ದಾಡುವ ಸ್ಥಿತಿ ಎದುರಾಗಲಿದೆ. ಸೂಕ್ತ ತಂತ್ರಜ್ಞಾನ ಇಲ್ಲದೆ ಇಂಧನ ಕ್ಷೇತ್ರದಲ್ಲಿ ಕ್ಯೂಬಾ ಸಂಪೂರ್ಣವಾಗಿ ಬೇರೆ ಬೇರೆ ದೇಶಗಳ ಮೇಲೆ ಅವಲಂಬಿತ ಜೀವನ ನಡೆಸುವ ಅನಿವಾರ್ಯತೆ ಇದೆ.

ಇದು ಬದಲಾದ ಯುದ್ಧದ ಸ್ಥಿತಿ
ತೈಲವಿಲ್ಲದೇ ವಾಹನಗಳು ಕ್ಯೂಬಾದ ರಸ್ತೆ ರಸ್ತೆಗಳಲ್ಲಿ ನಿಂತಿವೆ. ಇದು ಅಲ್ಲಿನ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಕೊಟ್ಟಿದೆ. ಇದರಿಂದ ಜನರ ಕೈಯಲ್ಲಿ ಹಣ ಇಲ್ಲದಂತಾಗುತ್ತಿದೆ. ಇದರ ಪರಿಣಾಮ, ಊಟಕ್ಕೂ ಪರದಾಡುವ ಸ್ಥಿತಿಗೆ ಕ್ಯೂಬಾ ಜನರು ಬರುವ ಸಾಧ್ಯತೆ ಇದೆ. ಇದು ಬದಲಾದ ಯುದ್ಧದ ಸ್ವರೂಪವನ್ನು ಎತ್ತಿ ತೋರಿಸುತ್ತಿದೆ.

ಕ್ಯೂಬಾ ಸುದೀರ್ಘ ಶೀತಲ ಸಮರ
ಅಮೆರಿಕ ಮತ್ತು ಕ್ಯೂಬಾ ಹಲವು ದಶಕಗಳ ಕಾಲ ಅವುಗಳು ಶತ್ರುಗಳೇ ಆಗಿದ್ದವು. 1950ರ ದಶಕದಲ್ಲಿ ಫಿಡೆಲ್‌ ಕ್ಯಾಸ್ಟ್ರೋ ಅವರ ಕ್ರಾಂತಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಉರುಳಿಸಿದ ಬಳಿಕ, ಕ್ಯೂಬಾ ಸೋವಿಯತ್‌ ಒಕ್ಕೂಟಕ್ಕೆ ಹೆಚ್ಚು ಆತ್ಮೀಯವಾಗುತ್ತಾ ಸಾಗಿತು. ಅಮೆರಿಕ ಇದಕ್ಕೆ ವ್ಯಾಪಾರ ನಿಷೇಧ ಮತ್ತು ಆರ್ಥಿಕ ನಿರ್ಬಂಧಗಳ ಮೂಲಕ ಪ್ರತಿಕ್ರಿಯಿಸಿದ್ದು, ಇದೇ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ.

ಇದಾದ ಬಳಿಕ ಕ್ಯೂಬಾ ತೈಲಕ್ಕಾಗಿ ವೆನೆಜುವೆಲಾ ಮೇಲೆ ಅವಲಂಬಿತವಾಗಿತ್ತು. ಚೀನಾ ಮತ್ತು ರಷ್ಯಾಗಳಿಂದ ಭಾರೀ ಹೂಡಿಕೆ ಪಡೆಯುತ್ತಿದೆ. ಈಗ ವೆನೆಜುವೆಲಾದ ಭವಿಷ್ಯ ಅನಿಶ್ಚಿತವಾಗಿದ್ದು, ಕ್ಯೂಬಾ ರಷ್ಯಾ ಕಡೆಗೆ ಹೆಚ್ಚು ವಾಲುವ ಸಾಧ್ಯತೆಗಳಿವೆ.

ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ 2008ರಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿದ್ದರು. ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿ, 2014ರಲ್ಲಿ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸಿದರು. ಆದರೆ, ಟ್ರಂಪ್‌ ತನ್ನ ಮೊದಲ ಅವಧಿಯಲ್ಲೇ ಎಲ್ಲವನ್ನೂ ಮತ್ತೆ ಹಿಂಪಡೆದರು. ಅವರು ವ್ಯಾಪಾರ ನಿರ್ಬಂಧಗಳನ್ನು ಇನ್ನಷ್ಟು ಕಠಿಣವಾಗಿಸಿ, ಕ್ಯೂಬಾಗೆ ವೆನೆಜುವೆಲಾದ ತೈಲ ಪೂರೈಕೆಯನ್ನು ತಡೆದರು. ಇದು ಸಾಲದೆಂಬಂತೆ, ಟ್ರಂಪ್‌ ಕ್ಯೂಬಾವನ್ನು ಮತ್ತೆ ಭಯೋತ್ಪಾದನೆಯ ಪ್ರಾಯೋಜಕ ಎಂದು ಕರೆದಿದ್ದಾರೆ.

ಕ್ಯೂಬಾದ ಪ್ರವಾಸೋದ್ಯಮ ವಲಯದ ಮೇಲೆ ನಿರ್ಬಂಧಗಳನ್ನು ಹೇರಿದರು. ಕೋವಿಡ್‌ಗೆ ಮುನ್ನ ಪ್ರವಾಸೋದ್ಯಮ ಕ್ಯೂಬಾದ ಆರ್ಥಿಕತೆಗೆ 10% ಕೊಡುಗೆ ನೀಡುತ್ತಿತ್ತು. ಕ್ಯೂಬಾದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದ್ದು, ಜಿಡಿಪಿ ದರ 1.1% ಪತನ ಕಂಡಿದೆ. 2024ರಲ್ಲಿ ಹಣದುಬ್ಬರ 24% ತಲುಪಿದೆ. ಟ್ರಂಪ್‌ ಇತ್ತೀಚೆಗೆ ಕ್ಯೂಬಾ ಕುಸಿಯುತ್ತಿದೆ ಎಂದಿದ್ದರು. ಈಗ ವೆನೆಜುವೆಲಾದ ತೈಲವಿಲ್ಲದೆ ಅದರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

TAGGED:americacubadonald trumpoilTrump TariffVenezuela
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

CRIME
Bengaluru City

ಹೆಂಡತಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪತಿ

Public TV
By Public TV
5 minutes ago
Team India 2
Cricket

T20 World Cup | ಟೀಂ ಇಂಡಿಯಾದ ‘ಸೂಪರ್-8’ ಸಂಗ್ರಾಮ – ಹೀಗಿದೆ ವೇಳಾಪಟ್ಟಿ

Public TV
By Public TV
22 minutes ago
HISTORIC After Lok Sabha Rajya Sabha Passes Womens Reservation Bill With Majority Votes
Latest

Rajya Sabha Elections: 10 ರಾಜ್ಯಗಳ 37 ಸ್ಥಾನಗಳಿಗೆ ಮಾ.16 ರಂದು ಮತದಾನ

Public TV
By Public TV
41 minutes ago
GBA Election
Bengaluru City

ಜಿಬಿಎ ಚುನಾವಣೆಗೆ ಭರ್ಜರಿ ಸಿದ್ಧತೆ – 369 ಕ್ಷೇತಕ್ಕೆ 900 ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

Public TV
By Public TV
58 minutes ago
accident death
Bengaluru City

ಬೆಂಗಳೂರು| ಹುಟ್ಟುಹಬ್ಬದ ದಿನವೇ ಯುವಕ ಅಪಘಾತದಲ್ಲಿ ಸಾವು

Public TV
By Public TV
2 hours ago
hassan murder
Crime

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್‌ಐಆರ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?