ಬೆಂಗಳೂರು: ಕೋಲಾರದ (Kolara) ವೇಮಗಲ್ ಗ್ರಾಮದಲ್ಲಿಂದು ಹಮ್ಮಿಕೊಳ್ಳಲಾಗಿರುವ TASL ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್ (Catherine Vautrin) ಅವರು ಇಂದು ಬೆಂಗಳೂರಿಗೆ ಆಗಮಿಸಿದರು.

ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ (HAL Airport) ಆಗಮಿಸಿದ ಫ್ರೆಂಚ್ ರಕ್ಷಣಾ ಸಚಿವರಿಗೆ ವಿವಿಧ ಮಿಲಿಟರಿ ಪಡೆಗಳಿಂದ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಇದನ್ನೂ ಓದಿ: ಐಡಿ ಕಾರ್ಡ್ ತೋರಿಸಿ – ಜರ್ಮನಿಯಲ್ಲಿ ಅಸಿಮ್ ಮುನೀರ್‌ಗೆ ಮುಜುಗರ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕೋಲಾರದ ವೇಮಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ TASL ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಂಜೆ ನವದೆಹಲಿಗೆ ಹಿಂದಿರುಗಲಿದ್ದಾರೆ. ಇದನ್ನೂ ಓದಿ: ಭೂಮಿಯಾಚೆಗಿನ ಬದುಕು – ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ?

